Sunday, April 28, 2024
spot_img
HomeTumkurಸರ್ಕಾರ ಮಾಡುವ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ-ಜಿ.ಬಿ.ಜ್ಯೋತಿಗಣೇಶ್.

ಸರ್ಕಾರ ಮಾಡುವ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ-ಜಿ.ಬಿ.ಜ್ಯೋತಿಗಣೇಶ್.

ತುಮಕೂರು:ಇಂದಿನ ದಿನಗಳಲ್ಲಿ ಸರ್ಕಾರಗಳು ಮಾಡುತ್ತಿರುವ ಕೆಲಸಗಳನ್ನು ಮಂಜುನಾಥ ಗ್ರಾಮಾಭಿವೃದ್ಧಿ ಸಂಘ ಮಾಡುತ್ತಿರುವುದು ಶ್ಲಾಘನೀಯ,ಧರ್ಮಸ್ಥಳ ಸಂಘ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಸೇವೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ,ಜೊತೆಗೆ ನಿರುದ್ಯೋಗಿಗಳಿಗೆ ಈ ಕೇಂದ್ರಗಳನ್ನು ತೆರೆದು ಅವರಿಗೆ ಒಂದು ಉದ್ಯೋಗವನ್ನು ನೀಡಿದೆ,ಸರ್ಕಾರದ ಸುಮಾರು 75 ಸೇವೆಗಳನ್ನು ಈ ಕೇಂದ್ರದ ಮೂಲಕ ಪಡೆಯಬಹುದು, ತಾಲ್ಲೋಕಿನಲ್ಲಿ ಸುಮಾರು 32 ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದೆ ಅದರಲ್ಲಿ 10 ಕೇಂದ್ರಗಳನ್ನು ತುಮಕೂರು ನಗರದಲ್ಲಿ ಪ್ರಾರಂಭಿಸುತ್ತಿರುವುದು ಸಂತೋಷದಾಯಕ,ಬಡವರು ಮತ್ತು ಮಧ್ಯಮ ವರ್ಗದ ಜನರು ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾದುದನ್ನು ಕಡಿಮೆ ಮಾಡಲು ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿರವರ ಮುಂದಾಲೋಚನೆಯಿAದ ಈ ಕೆಂದ್ರಗಳನ್ನು ತೆರೆಯಲಾಗಿದೆ ಇದನ್ನು ಎಲ್ಲರೂ ಉಪಯೋಗಿಸಿಕೊಂಡು ಸರ್ಕಾರದ ಎಲ್ಲಾ ಯೋಜನೆಗಳನ್ನು ಬಳಸಿಕೊಳ್ಳಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಇಂದು ನಗರದ ಶಾಂತಿ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿAದ ಪ್ರಾರಂಭಿಸಿದ ಕಾಮನ್ ಸರ್ವೀಸ್ ಸೆಂಟರ್ ನ ಸೇವಾ ಸಿಂಧು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ 17ನೇ ವಾರ್ಡ್ ಪಾಲಿಕೆ ಸದಸ್ಯ ಬಿ.ಎಸ್.ಮಂಜುನಾಥ್ ಸರ್ಕಾರದಂತೆ ಧರ್ಮಸ್ಥಳ ಸಂಸ್ಥೆ ಜನರ ಸೇವೆ ಮಾಡುತ್ತಿರುವುದು ನಮ್ಮ ಪುಣ್ಯ,ಗಾರೆ ನರಸಯ್ಯನ ಕಟ್ಟೆ ಮತ್ತು ಉಪ್ಪಾರಹಳ್ಳಿ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿದೆ,ಶುದ್ಧಗಂಗಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆದು ಬಡವರ,ದೀನದಲಿತರ ಆಶಾ ಕಿರಣವಾಗಿದೆ,ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ,ಕಡಿಮೆ ಬಡ್ಡಿಗೆ ಹೆಚ್ಚು ಹಣವನ್ನು ಸಾಲವಾಗಿ ನೀಡಿ ಬಡವರನ್ನು ಮೀಟರ್ ಬಡ್ಡಿಯಿಂದ ಜನರನ್ನು ರಕ್ಷಿಸಿದ ಸಂಸ್ಥೆ ಧರ್ಮಸ್ಥಳ ಸಂಸ್ಥೆ,ಇAದು ಈ ಸೇವಾ ಕೇಂದ್ರವನ್ನು ತೆರೆದು ಜನರಿಗೆ ಹಲವು ಸೇವೆಗಳನ್ನು ನೀಡಲು ಉದ್ದೇಶಿಸಿರುವುದು ಸ್ವಾಗತಾರ್ಹ ಅದಕ್ಕಾಗಿ ಸಂಸ್ಥೆಗೆ ಅಭಿನಂದನೆಗಳು ಎಂದು ಹೇಳಿದರು.
ಧರ್ಮಸ್ಥಳ ಸಂಘದ ನಿರ್ದೇಶಕರಾದ ಶ್ರೀಮತಿ ದಯಾಶೀಲರವರು ಮಾತನಾಡಿ,ಸಂಸ್ಥೆ ವತಿಯಿಂದ ಸಂಘದ ಸದಸ್ಯರುಗಳಿಗೆ ಸಾಲ ನೀಡುತ್ತಿದ್ದು ಅದರ ದುರುಪಯೋಗ ತಡೆಯಬೇಕೆಂಬ ಉದ್ದೇಶದಿಂದ ಫೆಬ್ರವರಿ 1ರಿಂದ ಡಿಜಿಟಲ್ ಪೇಮೆಂಟ್ ಪ್ರಾರಂಭಿಸಲಾಗುವುದು,ಸಾಲದ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು,ಸಂಸ್ಥೆಯಿAದ ನೀಡುವ ಎಲ್ಲ ಸೇವೆಗಳನ್ನು ಸಾರ್ವಜನಿಕರು ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ತಾಲ್ಲೋಕು ಯೋಜನಾಧಿಕಾರಿ ಶ್ರೀಮತಿ ಸುನಿತಾಪ್ರಭು,ಶ್ರೀಮತಿ ಶಿವಲಕ್ಷಿö್ಮ,ಅಮರನಾಥ್ ಶೆಟ್ಟಿ,ರಾಧ,ರವಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments