Saturday, May 4, 2024
spot_img
HomeChikballapurದ.ರಾ.ಬೇಂದ್ರೆಯವರ 126 ನೇ ಜನ್ಮ ದಿನಾಚರಣೆ ಸಾಹಿತ್ಯಕ್ಕೆ ಸಮಾಜದ ಮನೋಭಾವವನ್ನು ಬದಲಿಸುವ ಶಕ್ತಿ ಇದೆ- ಡಾ.ಕೋಡಿರಂಗಪ್ಪ

ದ.ರಾ.ಬೇಂದ್ರೆಯವರ 126 ನೇ ಜನ್ಮ ದಿನಾಚರಣೆ ಸಾಹಿತ್ಯಕ್ಕೆ ಸಮಾಜದ ಮನೋಭಾವವನ್ನು ಬದಲಿಸುವ ಶಕ್ತಿ ಇದೆ- ಡಾ.ಕೋಡಿರಂಗಪ್ಪ

ಚಿಕ್ಕಬಳ್ಳಾಪುರ: ಸಾಹಿತ್ಯ ಕೃತಿಗಳ ಅಧ್ಯಯನದಿಂದ ವಿದ್ಯಾರ್ಥಿ, ಯುವಜನರು ಮಾನವೀಯ ಮೌಲ್ಯಗಳ ಕಲಿಕೆ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೋಡಿರಂಗಪ್ಪ ಸಲಹೆ ಮಾಡಿದರು.

ನಗರದ ಶಾಂತಿನಿಕೇತನ್ಸ್ ಪದವಿ ಪೂರ್ವಕಾಲೇಜಿನಲ್ಲಿ (ಸೋಮವಾರ) ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ವರಕವಿ ದ.ರಾ.ಬೇಂದ್ರೆಯವರ 126 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯಕ್ಕೆ ಸಮಾಜದ ಮನೋಭಾವವನ್ನು ಬದಲಿಸುವ ಶಕ್ತಿ ಇದೆ. ಉತ್ತಮ ಸಾಹಿತ್ಯ ಕೃತಿಗಳ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಶಿಕ್ಷಣ ವ್ಯವಸ್ಥೆಯಲ್ಲಿ ಐಚ್ಚಿಕ ವಿಷಯಗಳ ಮಧ್ಯೆ ಭಾಷೆ, ಸಾಹಿತ್ಯದಂತ ವಿಷಯಗಳು ಮಂಕಾಗುತ್ತಿರುವು ದುದುರದೃಷ್ಟಕರ. ಐಚ್ಚಿಕ ವಿಷಯಗಳ ಅಧ್ಯಯನದಿಂದಷ್ಟೇ ಜ್ಞಾನಾ ರ್ಜನೆ ಎಂಬ ನಕಾರಾತ್ಮಕ ಮನೋಭಾವ ದಿಂದ ವಿದ್ಯಾರ್ಥಿ, ಯುವಜನರು ಹೊರ ಬರಬೇಕು. ಮಾತೃಭಾಷೆಯ ಮೂಲಕವೂ ಜ್ಞಾನಾರ್ಜನೆ ಮಾಡಿಕೊಳ್ಳಬಹುದು ಎಂದರು. ದ.ರಾ.ಬೇಂದ್ರೆಯವರು ಕಷ್ಟಗಳ  ಕುಲುಮೆಯಲ್ಲಿ ಅರಳಿ ನಿಂತ ಅಭೂತಪೂರ್ವ ಪ್ರತಿಭೆ. ಪ್ರಕೃತಿ, ಆಧ್ಯಾತ್ಮ, ಸ್ತಿçà ಸಂಕಟಗಳು ಸೇರಿದಂತೆ ಹಲವು ವಿಷಯಗಳ ಕುರಿತು ಕಾವ್ಯರಚನೆ ಮಾಡಿ ಗಮನ ಸೆಳೆದಿದ್ದಾರೆ. ಅವರಲ್ಲಿನ ಕಾವ್ಯ ಪ್ರತಿಭೆಗೆ ಅವರೇ ಸಾಟಿ. ಅವರು ಹುಟ್ಟಿಬೆಳೆದ ಧಾರವಾಡದ ಸಾಧನಕೇರಿಯ ಪರಿಸರ ನಂತರ ಬೇಂದ್ರೆಯವರ ಸಾಧನೆಯಿಂದ ಸಾಧನೆಕೇರಿಯಾಯಿತು. ಬೇಂದ್ರೆಯವರ ಸಾಹಿತ್ಯ ಜಾನಪದ ಸೊಗಡಿನ ಮೂಲಕ  ಜನಸಾಮಾನ್ಯರನ್ನು ಮುಟ್ಟುವ ಸಾಹಿತ್ಯವಾಗಿದ್ದು, ಬೇಂದ್ರೆಯವರು ಕನ್ನಡ ಸಾರಸ್ವತ ಲೋಕದ ಮಿನುಗುತಾರೆಎಂದರು.

ದ.ರಾ.ಬೇAದ್ರೆಯವರ ಬದುಕು-ಬರಹದ ಕುರಿತು ಕನ್ನಡ ಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿ, ಬೇಂದ್ರೆ ಯವರ ಮಾತೃಭಾಷೆ ಮರಾಠಿಯಾದರೂ ಕನ್ನಡ ಸಾಹಿತ್ಯಕ್ಕೆ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿ ಗಮನಸೆಳೆದಿದ್ದಾರೆ.ಅವರ ಸಾಹಿತ್ಯ ಕೃತಿಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದು, ಅವರ ವ್ಯಕ್ತಿತ್ವದಂತೆಯೇ ಭಾಷೆಯೂ ಸರಳವಾಗಿದೆ. ನರಬಲಿ ಶೀರ್ಷಿಕೆಯ ಕವಿತೆಯನ್ನು ಬರೆದು ಬ್ರಿಟಿಷರಿಂದರಾಷ್ಟçದ್ರೋಹದ ಪಟ್ಟದಜೊತೆಗೆ ಶಿಕ್ಷೆಯನ್ನೂ ಅನುಭವಿಸುವಂತಾಯಿತು. ಆದರೂ ಅವರೆಂದಿಗೂ ತಮ್ಮ ತತ್ವ ಆದರ್ಶಗಳ ವಿಚಾರದಲ್ಲಿ ರಾಜಿಯಾಗಲಿಲ್ಲ. ಬೇಂದ್ರೆಯವರ ಸಾಹಿತ್ಯ ಕೃತಿಗಳಲ್ಲಿ ಸ್ತಿçà ಸಂವೇದನೆ, ನೋವು ನಲಿವುಗಳ ಗಟ್ಟಿ ಹೂರಣವಿದೆ. ತಮ್ಮ ಬದುಕಿನುದ್ದಕ್ಕೂ ಅನುಭವಿಸಿಕೊಂಡು ಬಂದ ವಿವಿಧ ಆಯಾಮಗಳೇ ಸಾಹಿತ್ಯವಾಗಿ ನಂತರ ಅದು ಸಾರ್ವತ್ರಿಕವಾದ ಸಾಹಿತ್ಯವಾಗಿ ಹೊರ ಹೊಮ್ಮಿತು. ದ.ರಾ.ಬೇಂದ್ರೆಯವರ ಬದುಕಿನ ಏರಿಳಿತಗಳ ಮೂಲಕ ಬರುವ ಸಂದೇಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗ ಬೇಕು. ಅವರ ಸಾಹಿತ್ಯ ಕೃತಿಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಬದುಕಿಗೆ ಪ್ರೇರಣೆ ಪಡೆಯುವಷ್ಟರ ಮಟ್ಟಿಗೆ ಒಂದು ವಿಶ್ವವಿದ್ಯಾಲಯದಂತೆ  ಬೇಂದ್ರೆಯವರ ಜೀವನ  ಮತ್ತು ಸಾಹಿತ್ಯ ನಮ್ಮ ಮುಂದಿದೆ ಎಂದು ತಿಳಿಸಿದರು.

ವರಕವಿ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬೇಂದ್ರೆ ಕುರಿತ ಪ್ರಬಂಧ, ಭಾಷಣ ಮತ್ತು ಗೀತಗಾಯನ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತಗಾಯಕ ಗ.ನ.ಅಶ್ವತ್ಥ್ಅವರು ಬೇಂದ್ರೆಯವರ ಗೀತಗಾಯನದ ಮೂಲಕ ಗಮನಸೆಳೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಕಾರ್ಯದರ್ಶಿ ಕುಮಾರ್ ವಹಿಸಿದ್ದರು. ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ಎಸ್.ಎನ್.ಅಮೃತ್ ಕುಮಾರ್, ಕಸಾಪ ತಾಲ್ಲೂಕುಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಕಸಾಪ ಆಜೀವ ಸದಸ್ಯರಾದ ಚೆನ್ನಮಲ್ಲಿ ಕಾರ್ಜುನ್, ನಾಗ ಭೂಷಣ್‌ರೆಡ್ಡಿ, ಪ್ರೇಮಾಲೀಲ ವೆಂಕಟೇಶ್, ಗೊಳ್ಳುಚಿನ್ನಪ್ಪನಹಳ್ಳಿ ವೆಂಕಟೇಶ್ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು  ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments