ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಮಳೆಗೆ ಮನೆಯು ಕುಸಿದು ಇಬ್ಬರು ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಪೋಲಂಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ಸತತ ಮಳೆಗೆ ನೆಂದು ನೆಂದು ಮನೆಯ ಮಾಳಿಗೆ ಕುಸಿದು ಬಿದ್ದಿದ್ದು ಘಟನೆಯಲ್ಲಿ ಮನೆಯೊಳಗಿದ್ದ ವೆಂಕಟನರಸಮ್ಮಗೆ ಸೊಂಟ ಮುರಿತವಾಗಿದೆ. ವೆಂಕಟನರಸಮ್ಮ, ವೆಂಕಟಲಕ್ಷ್ಮಮ್ಮ ಗಾಯಗೊಂಡಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳು ಆಟವಾಡಲು ಹೊರಗಡೆ ಹೋಗಿದ್ದರಿಂದ ಅಪಾಯದಿಂದ. ಪಾರಾಗಿದ್ದಾರೆ
ಸ್ಥಳಕ್ಕೆ ತಹಶೀಲ್ದಾರ್ ಸಿಗ್ಬತುಲ್ಲ, ಗ್ರಾಮ ಲೆಕ್ಕಿಗ ಸುದರ್ಶನ್ ಭೇಟಿ ನೀಡಿದ್ದಾರೆ.