Tuesday, April 23, 2024
spot_img
HomeBangalore100 ವರ್ಷ ಪೂರ್ಣಗೊಂಡಿದ್ದು ವಿವಿಪುರಂ : ವಿವಿಪುರಂ ಹಬ್ಬದಲ್ಲಿ ಎಲ್ಲಾ ಧರ್ಮೀಯರಿಗೂ ವ್ಯಾಪಾರ ವಾಹಿವಾಟಿಗೆ ಅವಕಾಶ...

100 ವರ್ಷ ಪೂರ್ಣಗೊಂಡಿದ್ದು ವಿವಿಪುರಂ : ವಿವಿಪುರಂ ಹಬ್ಬದಲ್ಲಿ ಎಲ್ಲಾ ಧರ್ಮೀಯರಿಗೂ ವ್ಯಾಪಾರ ವಾಹಿವಾಟಿಗೆ ಅವಕಾಶ :- ಶಾಸಕ ಉದಯ್ ಗರುಡಾಚಾರ್

ಪಾಲಾರ್ ಪತ್ರಿಕೆ | Palar Patrike

ಬೆಂಗಳೂರು:ವಿ.ವಿ.ಪುರಂ ಬಡಾವಣೆಯನ್ನ ಭಾರತರತ್ನ ರತ್ನ ಸರ್.ಎಂ.ವಿಶ್ವೇಶ್ವರಯ್ಯ ರವರು ಖುದ್ದು ನಕ್ಷೇ ತಯಾರಿಸಿ ನಿರ್ಮಿಸಿದ ವಿ.ವಿ.ಪುರಂ ಬಡಾವಣೆಗೆ ನೂರು ವರ್ಷದ ಸಂಭ್ರಮ ಇದರ ಪ್ರಯುಕ್ತ ಮೂದಲನೇಯ ಬಾರಿಗೆ ವಿ.ವಿ.ಪುರಂ ಹಬ್ಬವೆಂದು ಎರಡು ದಿನಗಳ ಬೆಂಗಳೂರುನಗರದ ಇತಿಹಾಸಕ್ಕೆ ಮೆರುಗು ನೀಡುವಂತೆ ಅಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಶಾಸಕರಾದ *ಉದಯ್ ಬಿ.ಗರುಡಾಚಾರ್* ರವರು ಮಾತನಾಡಿ   ಬೆಂಗಳೂರಿನಲ್ಲಿ ನಡೆಯುವ ವಿವಿಪುರಂ ಅದ್ದೂರಿ ಹಬ್ಬದಲ್ಲಿ ಎಲ್ಲಾ ಧರ್ಮೀಯರಿಗೂ ವ್ಯಾಪಾರ ವಾಹಿವಾಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ತಿಳಿಸಿದ್ದಾರೆ.  ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಿವರ್ಷದಲ್ಲೂ ವಿವಿ ಪುರಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ಹೀಗಾಗಿ, ಯಾವುದೇ ವಿವಾದ ಇಲ್ಲದೆ ಮುಕ್ತವಾಗಿ ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು. ನಾನು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರ ಮಾಡಿದ್ದೇನೆ. ಸಂವಿಧಾನ ಎಲ್ಲರಿಗೂ ಹಕ್ಕು ನೀಡಿದೆ.ಹೀಗಾಗಿ, ಈ ಹಬ್ಬದಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಬೇಕು ಎಂದು ತಿಳಿಸಿದರು. 

ಇನ್ನೂ, ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇದು ಅದ್ಧೂರಿಯಾಗಿ ನಡೆಯುವ ಹಬ್ಬ ಇದಾಗಿದ್ದು,ಬೆಳ್ಳಿ ತೇರು ಹಬ್ಬಕ್ಕೆ ಲಕ್ಷಾಂತರ ಜನರು ಭಾಗಿಯಾಗುತ್ತಾರೆ ಎಂದು ಅವರು ಹೇಳಿದರು.  *ಬೆಂಗಳೂರುನಗರದ ಇತಿಹಾಸಕ್ಕೆ ಮೆರಗು ನೀಡಿದ ವಿ.ವಿ.ಪುರಂ ಹಬ್ಬ*  ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ,ಸಜ್ಜನ್ ರಾವ್ ಸರ್ಕಲ್ ನಲ್ಲಿ ವಿ.ವಿ.ಪುರಂ ಬಡಾವಣೆ ನಿರ್ಮಾಣ ನೂರು ವರ್ಷ ಸಂಭ್ರಮಾಚರಣೆಯ ಪ್ರಯುಕ್ತ *ವಿ.ವಿ.ಪುರಂ ಹಬ್ಬ* ಎರಡು ದಿನಗಳ ಕಾಲ ಅಚರಣೆ. 

*ಸರ್.ಎಂ.ವಿಶ್ವೇಶ್ವರಯ್ಯರ ಪ್ರತಿಮೆ ಮಾಲಾರ್ಪಣೆ ಜೊತೆಯಲ್ಲಿ ಸಸಿ ನೆಡುವ ಮೂಲಕ ವಿ.ವಿ.ಪುರಂ ಹಬ್ಬಕ್ಕೆ ಶಾಸಕರಾದ ಉದಯ್ ಬಿ.ಗರುಡಾಚಾರ್ ರವರು ಗರುಡಾ ಫೌಂಡೇಷನ್ ಸಂಸ್ಥಾಪಕಿ ಶ್ರೀಮತಿ ಮೇದಿನಿ ಗರುಡಾಚಾರ್ ರವರು ಎರಡು ದಿನಗಳ ಕಾಲ ಜರುಗುವ ವಿ.ವಿ.ಪುರಂ ಹಬ್ಬಕ್ಕೆ ಚಾಲನೆ ನೀಡಿದರು*    ಎರಡು ದಿನಗಳ ಕಾಲ ಸಾಂಸ್ಕೃತಿಕ ಉತ್ಸವ,ಕಲಾಮೇಳ ಮತ್ತು ಆಹಾರ ಮೇಳ, ರಂಗೋಲಿ ಸ್ಪರ್ಧೆ , ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಸರ್.ಎಂ.ವಿ.ರವರು ಶಿಸ್ತ್ರು, ನಿಯಮ ಪಾಲನೆ,ಶ್ರದ್ದೆಯಿಂದ ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೈಸೂರು ಮಹಾರಾಜ ಆಡಳಿತದಲ್ಲಿ ದಿವಾನರಾಗಿ ಕಾರ್ಯನಿರ್ವಹಿಸಿದ್ದಾರೆ.  ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ದಿಗೆ ಸರ್.ಎಂ.ವಿ.ಕೊಡುಗೆ ಅಪಾರ, ಅವರ ಸಾಧನೆಯನ್ನ ಗೌರವಿಸಿ ಭಾರತರತ್ನ ನೀಡಿ ಗೌರವಿಸಲಾಯಿತು ಮತ್ತು ಜನ್ಮ ದಿನಾಚರಣೆಯನ್ನು ಇಂಜನಿಯರ್ ಡೇ ಎಂದು ಭಾರತದಲ್ಲಿ ಅಚರಿಸುತ್ತಾರೆ.  ಮುಂದಿನ ಪೀಳಿಗೆಗೆ ಸರ್.ಎಂ.ವಿಶ್ವೇಶ್ವರಯ್ಯರವರ ಜೀವನ ಸಾಧನೆ ಅರಿತುಕೊಳ್ಳಲಿ ಎಂದು ವಿ.ವಿ.ಪುರಂ.ಹಬ್ಬದ ಉದ್ದೇಶ ಎಂದು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments