Wednesday, April 24, 2024
spot_img
HomeTumkurಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು: ಸಚಿವ ಆರ್.ಅಶೋಕ

ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು: ಸಚಿವ ಆರ್.ಅಶೋಕ

ಪಾಲಾರ್ ಪತ್ರಿಕೆ | Palar Patrike

ತುಮಕೂರು: ಸಾರ್ವಜನಿಕರ ಹಿತಕ್ಕಾಗಿ ಆಡಳಿತ ಯಂತ್ರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಅವಶ್ಯವಾದ ಎಲ್ಲಾ ರೀತಿಯ ಸವಲತ್ತುಗಳನ್ನು ನಮ್ಮ ಸರ್ಕಾರವು ಒದಗಿಸುತ್ತದೆಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಅವರು ಇಂದು ಶಿರಾ ತಾಲೂಕ್‌ನ ಮಿನಿ ವಿಧಾನಸೌಧದ ಬಳಿ ಸುಮಾರು ೧.೨೨ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಾಲೂಕು ಉಪ ನೋಂದಣಿ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಶಾಸಕ ಡಾ.ಎಂ.ಸಿ.ರಾಜೇಶಗೌಡರು ಸೌಮ್ಯ ಸ್ವಭಾವದ ಜೊತೆಗೆ, ಸರಳ ಸಜ್ಜನಿಕೆಗೆ ಹೆಸರಾದವರು, ಸರಕಾರದಿಂದ ಕ್ಷೇತ್ರದಲ್ಲಿ ಯಾವುದೆ ಕೆಲಸ ಕಾರ್ಯವಾಗಬೇಕಾದರೂ, ಸಂಬAಧಪಟ್ಟ ಸಚಿವರು, ಅಧಿಕಾರಿಗಳ ಗಮನಕ್ಕೆ ತಂದು, ತ್ವರಿತವಾಗಿ ಕಾರ್ಯಕ್ರಮಗಳಿಗೆ ಅನುಮೋದನೆ ಪಡೆಯುವ ಕೆಲಸ ಮಾಡುತ್ತಾರೆ, ತಾಲೂಕು ಉಪ ನೋಂದಣಿ ಕಚೇರಿಯು ಶಾಸಕರÀ ಕೋರಿಕೆಯ ಮೇರೆಗೆ ಬಿಡುಗಡೆಯಾದ ಅನುದಾನದಲ್ಲಿ ನಿರ್ಮಿಸಲಿರುವ ಕಟ್ಟಡ, ಜನರಿಗೆ ಅನುಕೂಲವಾಗುವಂತೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಈ ಕಚೇರಿಯಲ್ಲಿ ಒದಗಿಸಲಾಗುತ್ತದೆ, ಸರಕಾರದ ಮುಂದೆ ಶಾಸಕರು ಇನ್ನೂ ಹಲವು ಬೇಡಿಕೆಗಳಿವೆ. ಹಂತ ಹಂತವಾಗಿ ಅವುಗಳನ್ನು ಸರಕಾರ ಕಾರ್ಯರೂಪಕ್ಕೆ ತರಲಿದೆ ಎಂದು ಸಚಿವ ಆರ್.ಅಶೋಕ್ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಾ ಶಾಸಕ ಡಾ.ಎಂ.ಸಿ.ರಾಜೇಶಗೌಡ ಮಾತನಾಡಿ, ನಗರಸಭೆಯಾಗಿರುವ ಶಿರಾ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ತಮ್ಮ ಆಸ್ತಿವಾಸ್ತಿಗಳ ನೊಂದಣಿ ಮತ್ತಿತರರ ಕೆಲಸ ಕಾರ್ಯಗಳಿಗೆ ಬಹಳ ಕಷ್ಟವಾಗುತ್ತಿ ರುವುದನ್ನು ಮನಗಂಡು,ಕAದಾಯ ಸಚಿವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂದು ೧.೨೨ ಕೋಟಿ ರೂಗಳ ವೆಚ್ಚದಲ್ಲಿ ಅತ್ಯಂತ ಸುಸಜ್ಜಿತ ಉಪ ನೊಂದಣಿ ಅಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಹಲವಾರು ಕ್ರಾಂತಿಕಾರ ಬದಲಾವಣೆಗಳನ್ನು ತಂದಿರುವ ಆರ್.ಅಶೋಕ್‌ರವರು, ಗ್ರಾಮಗಳ ಜನರ ಕಷ್ಟವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ,ಪಿಂಚಿಣಿ ವ್ಯವಸ್ಥೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆಡಳಿತಾತ್ಮಕ ಸುಧಾರಣೆಗೆ ಮುಂದಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಂ.ಎಲ್.ಸಿ ಡಾ.ಚಿದಾನಂದಗೌಡ, ಬೇವಿನಹಳ್ಳಿ ಮಂಜುನಾಥ್, ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಾದ ಡಾ.ಮಮತ ಬಿ.ಆರ್, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ನೋಂದಣಾಧಿಕಾರಿ ಬಿ.ಎನ್ ಶಶಿಕಲಾ, ತಾಲೂಕು ಉಪ ನೊಂದಣಿ ಅಧಿಕಾರಿ ಕೆ.ಶಂಕರ್, ತುಮಕೂರು ನಗರದ ಉಪ ನೊಂದಣಿ ಅಧಿಕಾರಿ ಧನಲಕ್ಷಿö್ಮÃ, ನಿರ್ಮಿತಿ ಕೇಂದ್ರದ ಯೋಜನಾ ಇಂಜಿನಿಯರ್ ಪಟ್ಟಲಿಂಗಪ್ಪ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್, ಇಂಜಿನಿಯರ್ ಪುಟ್ಟ ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments