Tuesday, April 16, 2024
spot_img
HomeTumkurಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪುರಸ್ಕಾರ ಶುಶ್ರೂಷ ಕೋರ್ಸ್ನ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ

ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪುರಸ್ಕಾರ ಶುಶ್ರೂಷ ಕೋರ್ಸ್ನ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ

ತುಮಕೂರು: ನರ್ಸಿಂಗ್ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ದಿ.ಎಸ್.ಎನ್.ಸರೋಜಮ್ಮ ಹಾಗೂ ದಿ.ಚನ್ನಗಿರಿ ವಿಮಲಮ್ಮ ನಾರಾಯಣ ಜೋಯಿಸ್ ಪುರಸ್ಕಾರ ಶುಶ್ರೂಷ ಕೋರ್ಸ್ನ ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ 2022. ಇತ್ತೀಚಿನ ದಿನಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ರೋಗಿಗಳನ್ನು ಆರೈಕೆ ಮಾಡುವಾಗ ಅವರ ಸಮಸ್ಯೆಯನ್ನು ಗುರುತಿಸಿ, ವಿದ್ಯಾರ್ಥಿಗಳು ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಹಾಗೂ ನರ್ಸಿಂಗ್ ಕ್ಷೇತ್ರದಲ್ಲಿ ಕಲಿಕೆಗೆ ಯಾವುದೇ ಕೊನೆಯಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ಪ್ರೀತಿಯ ಒಲವುವನ್ನು ಸೇರಿಸಿ ರೋಗಿಗಳ ಸೇವೆ ಮಾಡಲು ಸಲಹೆ ನೀಡಬೇಕು ವೈದ್ಯರು ಹಾಗೂ ರೋಗಿಗಳ ಮಧ್ಯೆ ಶುಶ್ರೂಷಕರು ಸೇತುವೆಯಾಗಿ ಹೇಗೆ ಕಾರ್ಯನಿರ್ವಹಿಸಬೇಕು ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ತಿಳಿಸಿದರು.

ನಗರದ ಶಿರಾರಸ್ತೆಯ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ 2022-23 ನೇ ಸಾಲಿನ ಶುಶ್ರೂಷ ಕೋರ್ಸಿನ ಶೈಕ್ಷಣಿಕ ವರ್ಷದ ಪ್ರಾರಂಭ ಹಾಗೂ ಶುಶ್ರೂಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತುಮಕೂರಿನ ಎ.ಎನ್.ಎಂ. ಸೆಂಟರ್‌ನ ನಿವೃತ್ತ ಪ್ರಾಂಶುಪಾಲರಾಗಿದ್ದ ದಿವಂಗತ ಎಸ್.ಎನ್.ಸರೋಜಮ್ಮ ಹಾಗೂ ದಿವಂಗತ ಚನ್ನಗಿರಿ ವಿಮಲಮ್ಮ ನಾರಾಯಣ ಜೋಯಿಸ್ ಹೆಸರಿನಲ್ಲಿ ನೀಡುವ ಪುರಸ್ಕಾರವನ್ನು ಡಿ.9ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಶ್ರೀದೇವಿ ವೈದ್ಯಕೀಯ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿಸದಸ್ಯರು ಹಾಗೂ ವಿಧಾನ ಪರಿಷತ್ತಿನ ಮಾಜಿ ಮುಖ್ಯಸಚೇತಕರಾದ ಹೆಚ್.ಸಿ.ನೀರಾವರಿರವರು ಮಾತನಾಡುತ್ತಾ ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ನುರಿತ ನರ್ಸ್ಗಳು ಲಕ್ಷಾಂತರ ಪ್ರಾಣವನ್ನು ಕಾಪಾಡಿದ ನಿದರ್ಶನಗಳು ನಮ್ಮ ಕಣ್ಣುಮುಂದೆಯಿದೆ. ಉದಾಹರಣೆಗೆ ಸೈನಿಕರಲ್ಲಿ ಗಾಯಳುಗಳಿಗೆ ನೀಡಿದ ಅಮೂಲ್ಯ ಸೇವೆಗೆ ಅವರನ್ನು ಇಂಗ್ಲೆAಡಿಗೆ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ನರ್ಸಿಂಗ್ ಸೇವೆಯಲ್ಲಿ ತನ್ನನ್ನು ತಾನು ಪೂರ್ಣವಾಗಿ ಅರ್ಪಿಸಿಕೊಂಡ ವ್ಯಕ್ತಿಗಳು ಮಾತ್ರ ನರ್ಸಿಂಗ್‌ಗೆ ವೃತ್ತಿಯನ್ನು ಅಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೀವಮಾನ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಚಮ್ನಾಲ್ಕರ್‌ರವರು ಮಾತನಾಡುತ್ತಾ ಪ್ರತಿದಿನ ರೋಗಿಗಳನ್ನು ನೋಡುತ್ತಲೇ ಸೇವಾ ವೃತ್ತಿಯಿಂದ ವ್ಯವಹರಿಸಿದ್ದರೆ ಹೆಚ್ಚು ಹೆಚ್ಚು ವಿಚಾರಗಳನ್ನು ಕಲಿಯಲು ಸಾಧ್ಯ ಎಂದು ತಿಳಿಸಿದರು. ಬೆಂಗಳೂರಿನ ನಿಮ್ಹಾನ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ವಿ.ಕಾತ್ಯಾಯನಿರವರು ಮಾತನಾಡುತ್ತಾ ನರ್ಸಿಂಗ್ ವೃತ್ತಿಯನ್ನು ಅಧ್ಯಾಯನ ಮಾಡುವವರು ತಮ್ಮ ಸಮಯವನ್ನು ಬೇರೆ ಯಾವುದಕ್ಕೂ ಮೀಸಲ್ಟಿಡಬಾರದು, ಜೀವನದಲ್ಲಿ ಲಭಿಸುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ವೃತ್ತಿ ಜೀವನದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಲಭಿಸುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ನರ್ಸಿಂಗ್ ಕೋರ್ಸ್ ಮಹತ್ವ ಹಾಗೂ ಉದ್ಯೋಗದ ಬೇಡಿಕೆಯ ಬಗ್ಗೆ ಸ್ವವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳ ಜೀವನದಲ್ಲಿ ನರ್ಸಿಂಗ್ ಕೋರ್ಸ್ಗಳನ್ನು ಅಧ್ಯಾಯನ ಮಾಡುತ್ತಿರುವ ಸಮಯವನ್ನು ನೋಡದೇ ಸೇವೆಯನ್ನು ತಮ್ಮಲ್ಲಿ ತಾವು ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮಕ್ಕೆ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ನೇತ್ರತಜ್ಞರಾದ ಡಾ.ಲಾವಣ್ಯ, ಶ್ರೀದೇವಿ ವೈದ್ಯಕೀಯ ಕಾಲೇಜಿನ ಗ್ಯಾಸ್ಟೋಎಂಟಾರಾಲಜಿ ವಿಭಾಗ ಮುಖ್ಯಸ್ಥರಾದ ಡಾ.ಎಂ.ಎಚ್.ಮನೋನ್ಮಣಿರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.
ಇದೇ ಸಂದರ್ಭದಲ್ಲಿ ಶುಶ್ರೂಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತುಮಕೂರಿನ ಎ.ಎನ್.ಎಂ. ಸೆಂಟರ್‌ನ ನಿವೃತ್ತ ಪ್ರಾಂಶುಪಾಲರಾಗಿದ್ದ ದಿವಂಗತ ಎಸ್.ಎನ್.ಸರೋಜಮ್ಮ ಹಾಗೂ ದಿವಂಗತ ಚನ್ನಗಿರಿ ವಿಮಲಮ್ಮ ನಾರಾಯಣ ಜೋಯಿಸ್ ಹೆಸರಿನಲ್ಲಿ ನೀಡುವ ಪುರಸ್ಕಾರ ಪಡೆದ ಸ್ಪಂದನಾ.ಕೆ.ವಿ, ಅಶ್ವಿನಿ ಐ ಪಾಟೀಲ್, ರಂಜಿತಾ ಹೆಚ್, ಸಿದ್ದಮ್ಮ ಜಿ ಸವಣೂರು, ರೂಪಿಣಿ ಟಿ.ಎಸ್. ಇವರಿಗೆ ಬಹುಮಾನ ನೀಡಿ ಸನ್ಮಾನಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಶ್ರೀದೇವಿ ಆಸ್ಪತ್ರೆಯ ತಂತ್ರಜ್ಞರಾದ ನಜ್ರತ್ ಉನ್ನೀಸಾ, ದತ್ತಿ ಸ್ಥಾಪಿಸಿದ ದಾನಿಗಳಾದ ಶ್ರೀಮತಿ ವಿಜಯಲಕ್ಷಿö್ಮ ಸುಧೀಂದ್ರ, ಶ್ರೀಮತಿ ಲಲಿತಾ ರವೀಂದ್ರ, ಶ್ರೀಮತಿ ಎನ್.ಭಾರತಿ, ಬ್ರೆöÊನ್ ವಾಯ್ಸ್ ಪತ್ರಿಕೆಯ ಸಂಪಾದಕರಾದ ಡಾ.ಕೆ.ಆರ್.ಕಮಲೇಶ್, ಶಿವಶಂಕರ್, ವೆಂಕಟೇಶ್‌ಪ್ರಸಾದ್, ಶ್ರೀ ರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಯಾನಂದ್, ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆರ್.ಕೆ.ಮುನಿಸ್ವಾಮಿ, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯರವರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಫೋಟೋ ಕ್ಯಾಷ್ಷನ್:

ನಗರದ ಶಿರಾರಸ್ತೆಯ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ 2022-23 ನೇ ಸಾಲಿನ ಶುಶ್ರೂಷ ಕೋರ್ಸಿನ ಶೈಕ್ಷಣಿಕ ವರ್ಷದ ಪ್ರಾರಂಭ ಹಾಗೂ ಶುಶ್ರೂಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತುಮಕೂರಿನ ಎ.ಎನ್.ಎಂ. ಸೆಂಟರ್‌ನ ನಿವೃತ್ತ ಪ್ರಾಂಶುಪಾಲರಾಗಿದ್ದ ದಿವಂಗತ ಎಸ್.ಎನ್.ಸರೋಜಮ್ಮ ಹಾಗೂ ದಿವಂಗತ ಚನ್ನಗಿರಿ ವಿಮಲಮ್ಮ ನಾರಾಯಣ ಜೋಯಿಸ್ ಹೆಸರಿನಲ್ಲಿ ನೀಡುವ ಪುರಸ್ಕಾರವನ್ನು ಡಿ.9 ರಂದು ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಕರ್ನಾಟಕ ಲೋಕಸೇವಾ ಆಯೋಗದ ಮಾಜಿಸದಸ್ಯರಾದ ಹೆಚ್.ಸಿ.ನೀರಾವರಿ, ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಚಮ್ನಾಲ್ಕರ್, ನಿಮ್ಹಾನ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ವಿ.ಕಾತ್ಯಾಯನಿ, ಡಾ.ರಮಣ್ ಆರ್ ಹುಲಿನಾಯ್ಕರ್, ಎಂ.ಎಸ್.ಪಾಟೀಲ್, ಡಾ.ಲಾವಣ್ಯ, ಡಾ.ಎಂ.ಎಚ್.ಮನೋನ್ಮಣಿ, ವಿಜಯಲಕ್ಷಿö್ಮ ಸುಧೀಂದ್ರ, ಲಲಿತಾ ರವೀಂದ್ರ, ಎನ್.ಭಾರತಿ, ಬ್ರೆöÊನ್ ವಾಯ್ಸ್ ಪತ್ರಿಕೆಯ ಸಂಪಾದಕರಾದ ಡಾ.ಕೆ.ಆರ್.ಕಮಲೇಶ್, ಶಿವಶಂಕರ್, ಟಿ.ವಿ.ಬ್ರಹ್ಮದೇವಯ್ಯ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments