Thursday, March 28, 2024
spot_img
HomeTumkurಮಕ್ಕಳು ಮತ್ತು ಯುವಕರು ಟಿ.ವಿ, ಮೊಬೈಲ್‌ಗಳಿಂದ ದೂರ ಉಳಿದು, ಕಲೆ, ಸಾಹಿತ್ಯ, ರಂಗಭೂಮಿಯತ್ತ ಕರೆದು ತರಬೇಕೆಂದು...

ಮಕ್ಕಳು ಮತ್ತು ಯುವಕರು ಟಿ.ವಿ, ಮೊಬೈಲ್‌ಗಳಿಂದ ದೂರ ಉಳಿದು, ಕಲೆ, ಸಾಹಿತ್ಯ, ರಂಗಭೂಮಿಯತ್ತ ಕರೆದು ತರಬೇಕೆಂದು ಕರೆ ನೀಡಿದರು.

ಪಾಲಾರ್ ಪಾತ್ರಿಕೆ | Palar Pathrike

ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಇವರವತಿಯಿಂದ ತಾಲೂಕಿನ ಮಂಚಕಲ್ಲುಕುಪ್ಪೆ ಗ್ರಾಮದ ಶ್ರೀ ಶಿವಕುಮಾರಮಹಾಸ್ವಾಮೀಜಿಗಳ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ಗ್ರಾಮೀಣ ರಂಗೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗ್ರಾಮೀಣ ರಂಗೋತ್ಸವ ಕಾರ್ಯಕ್ರಮವನ್ನು ಕೆ.ಪಾಲಸಂದ್ರ ಗ್ರಾಮಪಂಚಾಯಿತಿ ಅಧ್ಯಕ್ಷೆ ಕವಿತಾ ಚಂದ್ರಶೇಖರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಹಳ್ಳಿಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ, ಮಕ್ಕಳು ಮತ್ತು ಯುವಕರು ಟಿ.ವಿ, ಮೊಬೈಲ್‌ಗಳಿಂದ ದೂರ ಉಳಿದು, ಕಲೆ, ಸಾಹಿತ್ಯದ ಕಡೆಗೆ ಆಸಕ್ತರಾಗುತ್ತಾರೆ ಎಂದರು.

ಇAದು ಯುವಜನತೆ ದುಡಿಯಲು ಕೆಲಸವಿಲ್ಲದೆ,ಹಲವು ರೀತಿಯ ವ್ಯಸನಗಳಿಗೆ ತುತ್ತಾಗುತಿದ್ದಾರೆ. ಇದರಲ್ಲಿ ಕುಡಿತವೂ ಒಂದು. ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಇಂದು ಶಿವಕುಮಾರ್ ತಿಮ್ಮಾಲಾಪುರ ನೇತೃತ್ವದ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ಕಲಾವಿದರು, ಕಾಂತರಾಜು ಕೌತಮಾರನಹಳ್ಳಿ ಅವರ ಮಾರ್ಗದರ್ಶನದಲ್ಲಿ ಕುಡಿತಾಯಣ ಎಂಬ ಹಾಸ್ಯ ನಾಟಕದ ಮೂಲಕ ಜನರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.ನಿಜವಾಗಿಯೂ ಯುವಜನತೆಗೆ ಇಂತಹ ನಾಟಕಗಳು ಹೆಚ್ಚಿನ ಜಾಗೃತಿ ಮೂಡಿಸುತ್ತವೆ. ಹಾಗಾಗಿ ಗ್ರಾಮದ ಎಲ್ಲಾ ಯುವಕರು ನಾಟಕವನ್ನು ನೋಡಿ, ಅದರಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶ್ರೀಮತಿ ಕವಿತಾ ಚಂದ್ರಶೇಖರ್ ಸಲಹೆ ನೀಡಿದರು.

ಹಿರಿಯ ತಮಟೆ ಕಲಾವಿದರಾದ ಪೂಜಾ ನರಸಯ್ಯಮಾತನಾಡಿ, ಜನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಇಂದಿನ ಅಂತರಜಾಲಯುಗದಲ್ಲಿ ಕಳೆದು ಹೋಗುತ್ತಿರುವ ಮಕ್ಕಳನ್ನು ರಂಗಭೂಮಿಯತ್ತ ಕರೆದು ತರಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಚಂದ್ರಶೇಖರ್, ಮಾಜಿ ಸೈನಿಕರಾದ ಕಿರಣ್ ಕುಮಾರ್, ಗ್ರಾ.ಪಂ.ಸದಸ್ಯರಾದ ಸೈಯದ್ ನೂರುಲ್ಲಾ, ಶಿವಕುಮಾರ್ ತಿಮ್ಮಾಲಾಪುರ, ಕಾಂತರಾಜು ಕೌತುಮಾರನಹಳ್ಳಿ ಅವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರದ ಮಧ್ಯಪಾನದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕುಡಿತಾಯಣ ಹ್ಯಾಸ ನಾಟಕ,ಬಾಲಾಜಿ ತಂಡದ ತಮಟೆ ವಾದನ ಹಾಗೂ ಲೋಕೇಶ್ ದ್ವಾರನಕುಂಟೆ ಮತ್ತು ರವಿಕುಮಾರ್ ಅವರಿಂದ ಭಜನೆ ಪದಗಳ ಗಾಯನ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments