Thursday, May 23, 2024
spot_img
HomeTumkurಶ್ರೀದೇವಿ ಶಿಕ್ಷಣ ಸಂಸ್ಥೆಯ ವತಿಯಿಂದ “ಶ್ರೀದೇವಿ ಅಂತರoಗ” ಮಾಸಪತ್ರಿಕೆ ಬಿಡುಗಡೆ

ಶ್ರೀದೇವಿ ಶಿಕ್ಷಣ ಸಂಸ್ಥೆಯ ವತಿಯಿಂದ “ಶ್ರೀದೇವಿ ಅಂತರoಗ” ಮಾಸಪತ್ರಿಕೆ ಬಿಡುಗಡೆ

ಪಾಲಾರ್ ಪತ್ರಿಕೆ | Palar Pathrike

ತುಮಕೂರು:ಶ್ರೀದೇವಿ ಶಿಕ್ಷಣ ಸಂಸ್ಥೆಯ ವತಿಯಿಂದ “ಶ್ರೀದೇವಿ ಅಂತರoಗ” ಮಾಸಪತ್ರಿಕೆ ಬಿಡುಗಡೆ ಸಮಾರಂಭ “ಸೇವೆ ಶಿಕ್ಷಣ ಆಧ್ಯಾತ್ಮದ ಜೊತೆಗೆ ಪ್ರಯಾಣ” : ಬಸವರಾಜ ಪಾಟೀಲ್

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ತುಮಕೂರಿನ ಜನತೆಗೆ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಚಿರ-ಪರಿಚಿತವಾದಂತಹವರು, ಮಾದ್ಯಮ ರಂಗಕ್ಕೆ ಪ್ರವೇಶ ಮಾಡಿದರೆ ಆದ್ದರಿಂದ ಓದುಗರಿಗೆ ಸಾಕಷ್ಟು ಪ್ರಯೋಜನ ದೊರೆಯಲಿದೆ. ನಮ್ಮ ದೇಶಗಳಲ್ಲಿ ನದಿಗಳು ಕಲುಷಿತಗೊಂಡು ಬೆಟ್ಟಗುಡ್ಡಗಳು ತನ್ನ ಸ್ವರೂಪಗಳು ಕಳೆದುಕೊಂಡಿವೆ, ಮನುಷ್ಯನ ದೌರ್ಜನ್ಯದಿಂದಾಗಿ ಪ್ರಕೃತಿಯ ಅಟ್ಟಹಾಸ ಅನೇಕ ವಿಕೂಪಗಳ ಮೂಲಕ ಪ್ರತಿದ್ವನಿಸುತ್ತವೆ. ಶ್ರೀದೇವಿ ಶಿಕ್ಷಣ ಸಂಸ್ಥೆ ತರುತ್ತಿರುವ ಮಾಧ್ಯಮದಲ್ಲಿ ಸೇವೆ, ಶಿಕ್ಷಣ, ಆಧ್ಯಾತ್ಮದ ಜೊತೆಗೆ ಪ್ರಯಣ ಎಂಬ ಶೀರ್ಷಿಕೆಯಿಂದ ಡಾಕ್ಟರ್, ಇಂಜಿನಿಯರ್‌ಗಳು ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯಾಗಿದೆ. ಅದರೇ ಪ್ರಕೃತಿಯ ವಿನಾಶದಿಂದ ತಡೆಯದಿದ್ದರೆ ಮನುಕುಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಾಗುತ್ತದೆ ಎಂದು ರಾಷ್ಟಿçÃಯ ಸ್ವಾಭಿಮಾನ ಆಂದೋಲನ ಸಂಯೋಜಕರು ಹಾಗೂ ರಾಷ್ಟಿçÃಯ ಭದ್ರತಾ ಕೌನ್ಸಿಲ್ ಖಜಾಂಚಿಯಾದ ಬಸವರಾಜ ಪಾಟೀಲ್‌ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ “ಶ್ರೀದೇವಿ ಅಂತರAಗ” ಮಾಸಪತ್ರಿಕೆ ಬಿಡುಗಡೆ ಸಮಾರಂಭವನ್ನು ಡಿ.೨೧ ರಂದು ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ “ಶ್ರೀದೇವಿ ಅಂತರAಗ” ಮಾಸಪತ್ರಿಕೆಯ ಪ್ರದಾನ ಸಂಪಾದಕರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಇತ್ತೀಚಿನ ದಿನಗಳಲ್ಲಿ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜನ ಹಿತಕ್ಕಾಗಿ ಶ್ರಮಿಸುತ್ತೇವೆ, ಅದರ ಮುಂದುವರಿದ ಭಾಗವಾಗಿ ಈ ಜಿಲ್ಲೆಯ ಜನರ ಆಶಯವನ್ನು ಸಮರ್ಥವಾಗಿ ಪ್ರತಿಬಿಂಬಿಸಲು ಮತ್ತು ನಮ್ಮ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಾಡುತ್ತಿರುವ ಸಾಧನೆ ಮತ್ತು ನಮ್ಮ ಬೋಧಕರ ಸಿಬ್ಬಂದಿ ಸಂಶೋಧಕ ಕ್ಷೇತ್ರ ಮಾಡುತ್ತಿರುವ ಶೈಕ್ಷಣಿಕ ಸಾಧನೆಗೆ ಅಗತ್ಯ ವೇದಿಕೆಯನ್ನು ಈ ಪತ್ರಿಕೆ ಒದಗಿಸಿದೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ಸುಮಾರು ೧೦ ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸುಮಾರು ೨ ಸಾವಿರ ಸಿಬ್ಬಂದಿ ವರ್ಗದವರು ಕೆಲಸ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಪ್ರತಿನಿತ್ಯ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಾಧನೆ ಮಾಡಿದ್ದಾರೆ ಅದನ್ನು ಹೊರ ಜಗತ್ತಿಗೆ ಮುಟ್ಟಿಸುವ ಸಲುವಾಗಿ ಶ್ರೀದೇವಿ ಅಂತರAಗ ಮಾಸಪತ್ರಿಕೆ ಸಹಾಯ ಮಾಡಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟಿçÃಯ ಸ್ವಾಭಿಮಾನ ಆಂದೋಲನ ಸಂಯೋಜಕರು ಹಾಗೂ ರಾಷ್ಟಿçÃಯ ಭದ್ರತಾ ಕೌನ್ಸಿಲ್ ಖಜಾಂಚಿಯಾದ ಬಸವರಾಜ ಪಾಟೀಲ್‌ರವರು ಉದ್ಘಾಟಿಸಿ ಮಾತನಾಡುತ್ತಾ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ತುಮಕೂರಿನ ಜನತೆಗೆ ಚಿರಪರಿಚಿತವಾದಂತಹವರು, ಮಾದ್ಯಮ ರಂಗಕ್ಕೆ ಪ್ರವೇಶ ಮಾಡಿದರೆ ಆದ್ದರಿಂದ ಓದುಗರಿಗೆ ಸಾಕಷ್ಟು ಪ್ರಯೋಜನ ದೊರೆಯುತ್ತದೆ. ಇಂದು ದೇಶದ ನದಿಗಳು ಕಲುಷಿತಗೊಂಡು ಬೆಟ್ಟಗುಡ್ಡಗಳು ತನ್ನ ಸ್ವರೂಪಗಳು ಕಳೆದುಕೊಂಡಿವೆ, ಮನುಷ್ಯನ ದೌರ್ಜನ್ಯದಿಂದಾಗಿ ಪ್ರಕೃತಿಯ ಅಟ್ಟಹಾಸ ಅನೇಕ ವಿಕೂಪಗಳ ಮೂಲಕ ಪ್ರತಿದ್ವನಿಸುತ್ತವೆ. ಶ್ರೀದೇವಿ ಶಿಕ್ಷಣ ಸಂಸ್ಥೆ ತರುತ್ತಿರುವ ಮಾಧ್ಯಮದಲ್ಲಿ ಈ ವಿಚಾರಗಳಿಗೆ ಆದ್ಯಾತ್ಮ ಸಿಗಬೇಕಾಗುತ್ತದೆ. ಒಳ್ಳೆಯ ಡಾಕ್ಟರ್, ಇಂಜಿನಿಯರ್‌ಗಳು ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯಾಗಿದೆ. ಅದರೇ ಪ್ರಕೃತಿಯ ವಿನಾಶದಿಂದ ತಡೆಯದಿದ್ದರೆ ಮನುಕುಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಾಗುತ್ತದೆ.
ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣರವರು ಮಾತನಾಡುತ್ತಾ ಹಿಂದಿನ ಕಾಲದಲ್ಲಿ ಕೈ ಬೆರಳಿನ ಹಚ್ಚಿನಲ್ಲಿ ಮಾಹಿತಿಗಳ ಕೌಶ್ಯವನ್ನು ಹೊಂದಿರುತ್ತಿತ್ತು. ಎಲ್ಲ ರಂಗಗಳAತೆ ವಾರ್ತಾ ಇಲಾಖೆ ಕೂಡ ಭ್ರಷ್ಟತೆ ಕೂಪವಾಗುತ್ತಿರುವುದು ಆರೋಗ್ಯಕರ ಸಂಗತಿವಲ್ಲ. ಪತ್ರಿಕೆಯನ್ನು ಓದುವಂತೆ ಮಾಡುವ ಸಾಹಸ ಮತ್ತು ಸವಾಲ್ ಶ್ರೀದೇವಿ ಶಿಕ್ಷಣ ಸಂಸ್ಥೆ ಸೇರುವ ಎಲ್ಲಾ ಪತ್ರಕರ್ತರ ಪಾಲಿಗೆಯಿದೆ. ಕೋವಿಡ್ ನಂತರ ಪತ್ರಿಕಾಕ್ಷೇತ್ರ ಪುನರ್ ಚೈತನ್ಯಗೊಳ್ಳುವಷ್ಟು ಸೊರಗಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಮುಖ್ಯಅತಿಥಿಗಳಾಗಿ ರಂಗಕರ್ಮಿಗಳು ಕನ್ನಡಪ್ರಭ ದಿನಪತ್ರಿಕೆಯ ವರದಿಗಾರರಾದ ಉಗಮ ಶ್ರೀನಿವಾಸ್‌ರವರು ಮಾತನಾಡುತ್ತಾ ನಿಜವಾದ ಸೃಜನಶೀಲವುಳ್ಳ ವ್ಯಕ್ತಿ ತನ್ನ ಅಂತರAಗದಲ್ಲಿ ಪ್ರಶ್ನೆ ಹಾಕಿಕೊಳ್ಳುತ್ತೀರುತ್ತಾನೆ, ಇಂತಹ ಆತ್ಮ ಅವಲೋಕನದಿಂದ ಸತ್ಯದ ದಾರಿ ಸೃಷ್ಟಿವಾಗುತ್ತದೆ. ಪತ್ರಿಕೆಗಳಿಗೆ ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು. ಶ್ರೀದೇವಿ ಅಂತರAಗ ಪತ್ರಿಕೆ ಪ್ರಬಲವಾದ ಸಂದೇಶಗಳೊAದಿಗೆ ಹೊರಬರಲಿ ಎಂದು ಶುಭ ಹಾರೈಸಿದ್ದರು.
ಮೊದಲ ಪ್ರತಿ ಸ್ವೀಕಾರದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಉದಯವಾಣಿ ದಿನಪತ್ರಿಕೆ ವರದಿಗಾರರಾದ ಚಿ.ನಿ.ಪುರುಷೋತ್ತಮ್‌ರವರು ಮಾತನಾಡುತ್ತಾ ಪತ್ರಿಕೆಗಳ ಉತ್ಪಾದನಾ ವೆಚ್ಚ ಗಗನಕ್ಕೇ ಏರಿದೆ ಒಂದು ಪತ್ರಿಕೆ ಓದುಗರ ಮನೆ ಬಾಗಿಲಿಗೆ ಬರುವ ಹೊತ್ತಿಗೆ ಸುಮಾರು ೧೫ ರಿಂದ ೨೦ ರೂಪಾಯಿ ಬೇಕಾಗುತ್ತಿತ್ತು, ಅದರೇ ನಾವು ೫ ರೂಪಾಯಿಗೆ ಪತ್ರಿಕೆ ಕೊಡುತ್ತೇವೆ, ಯಾವಾಗಲೂ ಜಾಹಿರಾತನ್ನು ನಂಬಿ ಪತ್ರಿಕೆಯನ್ನು ನಡೆಸುತ್ತಿಲ್ಲ ಪತ್ರಿಕೆಗೆ ಓದಗರೇ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಸಂಪಾದಕರಾದ ಡಾ.ರಮಣ್ ಎಂ ಹುಲಿನಾಯ್ಕರ್‌ರವರು ಮಾತನಾಡುತ್ತಾ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿಯೇ ಇತಿಹಾಸದಲ್ಲಿ ಇಂದು ಮರೆಯಲಾಗದ ದಿನವಾಗಿದ್ದು, ಅನೇಕ ಪ್ರತಿಭೆಗಳಿಗೆ ಇದು ಒಂದು ಉತ್ತಮ ವೇದಿಕೆಯಾಗಿದೆ. ನಾವು ಹೊರ ಜಗತ್ತಿಗೆ ಸಂವಹನ ನಡೆಸಲು ಮಾದ್ಯಮ ತುಂಬಾ ಪ್ರಮುಖವಾದ ಪಾತ್ರ ವಹಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ “ಶ್ರೀದೇವಿ ಅಂತರAಗ” ಮಾಸಪತ್ರಿಕೆ ಸಂಪಾದಕರಾದ ಅಂಬಿಕಾ ಎಂ ಹುಲಿನಾಯ್ಕರ್, ಕಾರ್ಯನಿರ್ವಾಹಕ ಸಂಪಾದಕರಾದ ಡಾ.ರಮಣ್ ಎಂ ಹುಲಿನಾಯ್ಕರ್, ಗೌರವ ಸಂಪಾದಕರಾದ ಡಾ.ಕೆ.ಆರ್.ಕಮಲೇಶ್, ಸಂಯೋಜಕ ಸಂಪಾದಕರಾದ ಎಂ.ಎಸ್.ಪಾಟೀಲ್, ಸಲಹಾ ಸಂಪಾದಕರಾದ ಎನ್.ಭಾರತಿ, ಸಂಪಾದಕ ಮಂಡಲಿಯವರಾದ ಡಾ.ಭವಾನಿ ಸ್ಟಾಲೀನ್, ಡಾ.ಮನೋನ್ಮಣಿ, ಡಾ.ಲಾವಣ್ಯ ಹಾಗೂ ಸಹಾಯಕ ಸಂಪಾದಕರಾದ ಎನ್.ಆನಂದ್‌ರವರು ಭಾಗವಹಿಸಿದ್ದರು.

ಫೋಟೋ ಕ್ಯಾಷ್ಷನ್:

ನಗರದ ಶಿರಾರಸ್ತೆಯ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ “ಶ್ರೀದೇವಿ ಅಂತರAಗ” ಮಾಸಪತ್ರಿಕೆ ಬಿಡುಗಡೆ ಸಮಾರಂಭವನ್ನು ಡಿ.೨೧ ರಂದು ಬುಧವಾರ ಬೆಳಿಗ್ಗೆ ೧೧ ಗಂಟೆಗೆ ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ರಾಷ್ಟಿçÃಯ ಸ್ವಾಭಿಮಾನ ಆಂದೋಲನ ಸಂಯೋಜಕರು ಹಾಗೂ ರಾಷ್ಟಿçÃಯ ಭದ್ರತಾ ಕೌನ್ಸಿಲ್ ಖಜಾಂಚಿಯಾದ ಬಸವರಾಜ ಪಾಟೀಲ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ, ಕನ್ನಡಪ್ರಭ ದಿನಪತ್ರಿಕೆಯ ವರದಿಗಾರರಾದ ಉಗಮ ಶ್ರೀನಿವಾಸ್, ಉದಯವಾಣಿ ದಿನಪತ್ರಿಕೆ ವರದಿಗಾರರಾದ ಚಿ.ನಿ.ಪುರುಷೋತ್ತಮ್, ಡಾ.ರಮಣ್ ಎಂ ಹುಲಿನಾಯ್ಕರ್, ಎಂ.ಎಸ್.ಪಾಟೀಲ್, ಡಾ.ಕೆ.ಆರ್.ಕಮಲೇಶ್, ಎನ್.ಭಾರತಿ, ಡಾ.ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments