Thursday, April 25, 2024
spot_img
HomeTumkurಬಿಹೇಳಿಕೆ ವಿರುದ್ಧ ಬಿಜೆಪಿ ಭಾರೀ ಪ್ರತಿಭಟನೆ

ಬಿಹೇಳಿಕೆ ವಿರುದ್ಧ ಬಿಜೆಪಿ ಭಾರೀ ಪ್ರತಿಭಟನೆ

ಪಾಲಾರ್ ಪತ್ರಿಕೆ | Palar Pathrike

ತುಮಕೂರು : ವಿಶ್ವ ನಾಯಕ ಹಾಗೂ ಪ್ರಧಾನಿ ನರೇಂದ್ರಮೋದಿರವರ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವರ್ ಜರ್ದಾರಿ ಭುಟ್ಟೋ ಬೇಜವಾಬ್ದಾರಿ ಮತ್ತು ಅಸಂಬAದ್ಧ ಹೇಳಿಕೆಯಿಂದೆ ಭಾರತಕ್ಕೆ ಅವಮಾನಕಾರಿಯಾಗಿ ವರ್ತಿಸಿರುವುದನ್ನು ಬಿಜೆಪಿ ತುಮಕೂರು ಜಿಲ್ಲಾ ಘಟಕ ಭಾರೀ ಪ್ರತಿಭಟನೆ ಮಾಡಿತು.
ಇಂದು ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಬಿ.ಜಿ.ಎಸ್. ವೃತ್ತದಲ್ಲಿ ಕುತಂತ್ರಿ ಪಾಕಿಸ್ತಾನದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನoದೀಶ್, ಇಡೀ ಪ್ರಪಂಚವೇ ಪ್ರಧಾನಿ ನರೇಂದ್ರಮೋದಿರವರ ಬಗ್ಗೆ ಅತ್ಯಂತ ಗೌರವ ವ್ಯಕ್ತಪಡಿಸುತ್ತಿದ್ದರೂ, ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಪಿ ಪಾಕಿಸ್ತಾನದ ವಿದೇಶಾಂಗ ಸಚಿವ “ಮೋದಿ ಭಾರತದ ಪ್ರಧಾನಿಯಲ್ಲ ಆರ್.ಎಸ್.ಎಸ್. ಪ್ರಧಾನಿ” ಎಂದು ಕಟು ಶಬ್ದಗಳಲ್ಲಿ ಅವಹೇಳನ ಮಾಡಿರುವುದು ಸರ್ವತಾ ಖಂಡನೀಯ. ಭಾರತದಲ್ಲಿ ಭಯೋತ್ಪಾದನೆ ಮಾಡುತ್ತಾ, ಒಂದು ಸಮುದಾಯದ ಬಗ್ಗೆ ಮಾತ್ರ ಒಲೈಸುತ್ತಾ, ಭಾರತದಲ್ಲಿ ಅಶಾಂತಿ ಸೃಷ್ಠಿಗೆ ಪ್ರೇರಣೆ ಮಾಡುತ್ತಿರುವುದರ ಬಗ್ಗೆ ಎಂ.ಬಿ.ನAದೀಶ್ ಖಂಡಿಸಿದರು.
ಭಾರತದ ಪ್ರಧಾನಿ ವಿರುದ್ಧ ಪಾಕಿಸ್ತಾನ ಟೀಕಿಸಿದರೂ, ಪಾಕಿಸ್ತಾನದ ಇನೊರ್ವ ಸಚಿವ ತಾಜಿಯಾ ಮಾರ್ರಿ ಅಣ್ವಸ್ತç ಇರುವ ರಾಷ್ಟç ನಮ್ಮದು ಎಂದು, ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆಯ ಮಾತನಾಡಿರುವುದು ಅಸಂಬದ್ದವಾಗಿದೆ. ಪಾಕಿಸ್ತಾನದಲ್ಲಿಂದು ಅರಾಜಕತೆ ತಾಂಡವವಾಡುತ್ತಿದ್ದು, ಬಡತನ, ಹಸಿವು, ಅಂತರ್ಯದ್ದಲ್ಲಿ ಬಳಲಿದ್ದರೂ ದುರಂಕಾರದ ವರ್ತನೆ ಆಕ್ಷೇಪಣೀಯವಾದುದು. ಕೂಡಲೇ ಭಾರತ ಮತ್ತು ಪ್ರಧಾನಿ ನರೇಂದ್ರಮೋದಿರವರ ಕ್ಷಮೆಯಾಚನೆ ಮಾಡುವಂತೆ ಒತ್ತಾಯಿಸಿದರು. ಈ ಸಂಬoಧ ಕಾಂಗ್ರೆಸ್ ಮಾತನಾಡದೆ ಮೌನವಹಿಸಿರುವುದು ವಿಷಾದನೀಯ ಎಂದರು.
ಕಾoಗ್ರೆಸ್ ದಿವಾಳಿತನ
ವಿದೇಶಿಯರ ಭಾರ ಹೊತ್ತು ಕಾಂಗ್ರೆಸ್ ಇಂದು ಅಂತಃಪತನವಾಗಿದ್ದು, ದೇಶದಲ್ಲಿ ಕಾಂಗ್ರೆಸ್ ಜನಮನ್ನಣೆಯಿಂದ ದೂರವಾಗಿದ್ದು ಎಲ್ಲಡೆ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ರಾಷ್ಟçಭಕ್ತಿಯಿಂದ ವಿಮುಖವಾದ ಕಾಂಗ್ರೆಸ್ ಚೀನಾ ಇತ್ತೀಚಿಗೆ ಭಾರತದ ಗಡಿಯಲ್ಲಿ ಚೀನಾ ಸೈನಿಕರು ಸಂಘರ್ಷ ಮಾಡಿದ್ದರ ಬಗ್ಗೆ ಸಂಸದ ರಾಹುಲ್‌ಗಾಂಧೀ, ಭಾರತದ ವೀರ ಯೋಧರು ಮತ್ತು ಭಾರತದ ಸಾರ್ವಭೌಮತ್ವತೆ ಬಗ್ಗೆ ಸಂಶಯದ ಹೇಳಿಕೆ ನೀಡಿದ್ದು, ಭಾರತೀಯರಿಗೆ ಮಾಡಿದ ಅಪಮಾನ ಎಂದು ಎಂ.ಬಿ.ನAದೀಶ್ ಕಟು ಶಬ್ಧಗಳಲ್ಲಿ ಖಂಡಿಸಿದ್ದಾರೆ.
ಕಾoಗ್ರೆಸ್‌ಗೆ ಮತಿ ಭ್ರಮಣೆ : ಎಸ್.ಶಿವಪ್ರಸಾದ್
ಪಾಕಿಸ್ತಾನದಲ್ಲಿ ನರಕಸದೃಶ್ಯ ವಾತಾವಣವಿದ್ದು ಅಲ್ಲಿನ ನಾಗರೀಕರು ಹಲವಾರು ಸಮಸ್ಯೆಗಳ ಸುಳಿಗೆ ಸಿಕ್ಕಿ ನರಳುತ್ತಿದ್ದಾರೆ ತಮ್ಮ ಆಂತರಿಕ ಸಮಸ್ಯೆಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ, ವಿಶ್ವ ವೇದಿಕೆಯಲ್ಲಿ ವಿನಾ ಕಾರಣ ಭಾರತದ ಬಗ್ಗೆ ಟೀಕಿಸುತ್ತಿದೆ. ಉಗ್ರರ ಕಾರಸ್ತಾನವಾಗಿರುವ ಪಾಕಿಸ್ತಾನದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದೆ ಜರ್ಜರಿತವಾಗಿದೆ. ಇದನ್ನು ಖಂಡಿಸಿದ ಕಾಂಗ್ರೆಸ್ ಭೌದ್ಧಿಕವಾಗಿ ದಿವಾಳಿಯಾಗಿದೆ. ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟೆವು ಎಂದು ಬೀಗುತ್ತಿರುವ ಕಾಂಗ್ರೆಸ್‌ನ ಮುಖಂಡರಾದ ರಾಹುಲ್‌ಗಾಂಧೀ, ರಾಜ್ಯದ ಡಿ.ಕೆ.ಶಿವಕುಮಾರ್ ಮತ್ತು ಎಸ್.ಸಿದ್ದರಾಮಯ್ಯ ಭಯೋತ್ಪಾದನೆ ಮತ್ತು ದೇಶ ವಿರೋಧಿ ನಿಲುವು ವ್ಯಕ್ತಪಡಿಸುವ ದೇಶ ಮತ್ತು ವ್ಯಕ್ತಿಗಳ ವಿರುದ್ಧ ತುಟಿಕ್‌ಪಿಟಿಕ್ ಎನ್ನದೆ ಮೌನವಹಿಸಿ, ಬೆಂಬಲಿಸುವ ತಂತ್ರವನ್ನು ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ತೀವ್ರವಾಗಿ ವಾಗ್ದಾಳಿ ನಡೆಸಿದರು. ದೇಶದ ಹಿತ ಕಾಪಾಡುತ್ತೇವೆಂಬ ಕಾಂಗ್ರೆಸ್ ಮತಿ ಭ್ರಮಣೆ ಸ್ಥಿತಿಯಲ್ಲಿದೆ. ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ. ಮುಂದಿನ ದಿನಗಳಲ್ಲಿ ದೇಶದ ಬಗ್ಗೆ ಯಾವುದೇ ಪಕ್ಷ ಅಥವಾ ವ್ಯಕ್ತಿಗಳು ಸಮರ್ಥಿಸಿ ಮಾತನಾಡದಿದ್ದರೆ, ಅಂತವರ ವಿರುದ್ಧ ಬಿಜೆಪಿ ಉಗ್ರವಾಗಿ ಹೋರಾಟ ಮಾಡುತ್ತದೆ ಎಂದರು.


ಕಾoಗ್ರೆಸ್ ಬೂಟಾಟಿಕೆ ರಾಜಕಾರಣ : ಹೆಚ್.ಎಸ್.ರವಿಶಂಕರ್ ಹೆಬ್ಬಾಕ

 ಈ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕರವರು, ಪಾಕಿಸ್ತಾನದ ವಿದೇಶಾಂಗ ಸಚಿವರು, ಮಹಿಳಾ ಸಚಿವೆ ತಾಜಿಯಾ ಮಾರ್ರಿರವರುಗಳು ಭಾರತದ ವಿರುದ್ಧ ಅಪಮಾನಕಾರಿಯಾಗಿ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು. ಕಾಂಗ್ರೆಸ್ ತಾನು ದೇಶಭಕ್ತ ಪಕ್ಷ ಎಂದು ಎದೆಬೀಗಿಸಿಕೊಂಡು ಬೂಟಾಟಿಕೆಯಾಗಿ ರಾಜಕಾರಣ ಮಾಡಿಕೊಳ್ಳುತ್ತಿದೆ. ಜನಾದೇಶಕ್ಕೆ ಬೆಲೆ ಕೊಡದ ಕಾಂಗ್ರೆಸ್ ಭಾರತ, ವೀರ ಯೋಧರು ಮತ್ತು ಪ್ರಧಾನಿ ನರೇಂದ್ರಮೋದಿ ವಿರುದ್ಧ ವಿನಾಕಾರಣ ಆರೋಪವನ್ನು ರಾಹುಲ್‌ಗಾಂಧೀ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ವಹಿಸಿಕೊಂಡು ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಮುಂದುವರೆಸಿದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಎಚ್ಚರಿಸಿದರು.
  ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರೇಮಹೆಗ್ಡೆ, ಒಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ವೈ.ರುದ್ರೇಶ್, ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ವಿಜಯಬಾಸ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆಶ್ರೀಧರ, ಕಾರ್ಯದರ್ಶಿಗಳಾದ ಸಿದ್ದೇಗೌಡ, ಸಂದೀಪ್‌ಗೌಡ ಹಾಗೂ ರಾಜ್‌ಕುಮಾರ್.ಪಿ, ಕಾರ್ಯಾಲಯ ಕಾರ್ಯದರ್ಶಿ ಪ್ರವೀಣ್.ಎಸ್.ಹೊಸಹಳ್ಳಿ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಎನ್.ನರಸಿಂಹಮೂರ್ತಿ, ಉಪಾಧ್ಯಕ್ಷ ಆಂಜನಮೂರ್ತಿ, ಪ್ರಧಾನ ಕಾರ್ಯದರ್ಶಿ ಗುಬ್ಬಿ ಲೋಕೇಶ್, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ಎ.ವಿಜಯಕುಮಾರ್, ಉಪಾಧ್ಯಕ್ಷ ಕೆ.ಹರೀಶ್, ಪ್ರಧಾನ ಕಾರ್ಯದರ್ಶಿ ಯು.ಆರ್.ವೆಂಕಟೇಶ್, ಖಜಾಂಚಿ ಧನುಷ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ವೈ.ಯಶಸ್, ಉಪಾಧ್ಯಕ್ಷ ಟಿ.ಡಿ.ವಿನಯ್, ಕಾರ್ಯದರ್ಶಿ ರಕ್ಷಿತ್.ವಿ, ಮಹಿಳಾ ಮೋರ್ಚಾ ಕಾರ್ಯದರ್ಶಿ ಸೌಮ್ಯ ಜಿ.ಎಲ್, ಉಪಾಧ್ಯಕ್ಷ ಗಿರಿಜಸೂರಾಚಾರ್, ರೈತ ಮೋರ್ಚಾ ಕಾರ್ಯದರ್ಶಿ ಜಯಶ್ರೀ, ನಗರ ಪ್ರಧಾನ ಕಾರ್ಯದರ್ಶಿ ರಾಜೀವ್ ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಎಸ್.ಕುಮಾರ್, ಉಪಾಧ್ಯಕ್ಷ ರೈತ ಮೋರ್ಚಾ, ನಗರಾಧ್ಯಕ್ಷ ಸತ್ಯಮಂಗಲ ಜಗದೀಶ್, ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಎನ್.ಎನ್.ಗೋಪಾಲಕೃಷ್ಣ, ನಗರಾಧ್ಯಕ್ಷ ಹನುಮಂತರಾಜು, ಯುವಮೋರ್ಚಾ ನಗರಾಧ್ಯಕ್ಷ ನಾಗೇಂದ್ರ.ಸಿ, ಮಹಾನಗರಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಪ್ರಮುಖರಾದ ಕೊಪ್ಪಳ್ ನಾಗರಾಜ್, ಹೆಚ್.ಎಂ.ರವೀಶ್, ಬಿ.ಎಸ್.ನಾಗೇಶ್, ಶಕುಂತಲನಟರಾಜ್, ಕೋಮಲ, ಸೌಮ್ಯರವಿಚಂದ್ರ, ಗೀತಾಶಿವಣ್ಣ, ಮಮತ, ನಂಜುಡಸ್ವಾಮಿ(ದಾಸ್), ಜಿ.ಎಸ್.ಶ್ರೀಧರ್, ಅಕ್ಷಯ್‌ಚೌಧರಿ, ಆಟೋ ಯಡಿಯೂರಪ್ಪ, ಸೊಗಡು ಕುಮಾರ್‌ಸ್ವಾಮಿ, ಬಸವರಾಜು, ಚಂದ್ರಯ್ಯ, ರಾಜು, ಗಂಗೇಶ್, ಮದನ್‌ಸಿಂಗ್, ಉಮೇಶ್, ಗಿರೀಶ್, ದಿನೇಶ್, ಶಿವಕುಮಾರ್ ಮುಂತಾದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments