Thursday, April 18, 2024
spot_img
HomeTumkurಸ್ಲಂಜನರಕುoದುಕೊರತೆ ಸಭೆ : ತುಮಕೂರು

ಸ್ಲಂಜನರಕುoದುಕೊರತೆ ಸಭೆ : ತುಮಕೂರು

ತುಮಕೂರು: ಮಹಾನಗರ ಪಾಲಿಕೆ ಎದುರುಇತ್ತೀಚೆಗೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಸ್ಲಂಜನಾoದೋಲನ ಕರ್ನಾಟಕ ಮತ್ತುತುಮಕೂರು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಡೆಸಿದ ಪ್ರತಿಭಟನೆ ಅಂಗವಾಗಿ ಇಂದು ಮಹಾನಗರ ಪಾಲಿಕೆಯಿಂದ ಸ್ಲಂಜನರಕುoದುಕೊರತೆ ಸಭೆಯನ್ನು ಮಹಾಪೌರರು ಮತ್ತುಆಯುಕ್ತರ ಸಮ್ಮುಖದಲ್ಲಿಕರೆಯಲಾಗಿತ್ತು.


ಸಭೆಯಲ್ಲಿತುಮಕೂರು ಮಹಾನಗರ ಪಾಲಿಕೆ 2023-24ರ ಬಜೆಟ್‌ನಲ್ಲಿ ಕೊಳಚೆ ಪ್ರದೇಶಗಳ ಸಮಗ್ರಅಭಿವೃದ್ಧಿಗೆ ಮತ್ತು ಮೂಲಭೂತ ಸೌಲಭ್ಯಕಲ್ಪಿಸಲು ನಗರಜನಸಂಖ್ಯೆಯ ಶೇ 35% ಜನರಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಬಜೆಟ್‌ನಲ್ಲಿಆಧ್ಯತೆ ನೀಡಿ ಸಮಾಜೋಆರ್ಥಿಕ ಮತ್ತು ಶೈಕ್ಷಣಿಕಅಭಿವೃದ್ಧಿಗೆಖರ್ಚು ಮಾಡಲುಒತ್ತಾಯಿಸಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿರುವ ಕೊಳಗೇರಿ ಜನರಿಗೆಉಚಿತವಾಗಿ10 ಸಾವಿರ ಲೀಟರ್ ನೀರನ್ನು ನೀಡಬೇಕು, ವಿವಿಧ ಕೊಳಚೆ ಪ್ರದೇಶಗಳಲ್ಲಿ ಪ್ರಧಾನಮಂತ್ರಿಆವಾಸ್‌ಯೋಜನೆಯಲ್ಲಿ ನಿರ್ಮಿಸುತ್ತಿರುವ ವಸತಿಗಳಿಗೆ ಎಸ್,ಸಿ/ಎಸ್‌ಟಿಗಳ ಪಲಾನುಭವಿ ಶುಲ್ಕ ಪಾವತಿ ಮಾಡಲು ಮೀಸಲಿಟ್ಟಿರುವ1ಕೋಟಿ22 ಲಕ್ಷ ರೂಗಳನ್ನು ಬಿಡುಗಡೆಗೊಳಿಸಿ ಜಿಲ್ಲಾಡಳಿತದಿಂದ ಮಹಾನಗರ ಪಾಲಿಕೆಗೆ ನಿವೇಶನ ರಹಿತರಿಗೆ ವಸತಿ ಸಮುಚ್ಛಯ ನಿರ್ಮಿಸಲು ಹಸ್ತಾಂತರಿಸಿರುವ 17ಎಕರೆ ಭೂಮಿಯಲ್ಲಿ ವಿವಿಧ ಕೊಳಚೆ ಪ್ರದೇಶಗಳ 400 ನಿವೇಶನ ರಹಿತರಿಗೆ ವಿಶೇಷ ಆಧ್ಯತೆ ಮೇಲೆ 4ರಿಂದ5ಎಕರೆ ಭೂಮಿಜಾಗವನ್ನು ನೀಡಲು ಸ್ಲಂ ಸಮಿತಿಅಧ್ಯಕ್ಷರಾದ ಎ.ನರಸಿಂಹಮೂರ್ತಿ ಒತ್ತಾಯಿಸಿದರು.
ದಿಬ್ಬೂರುದೇವರಾಜ್‌ಅರಸು ಬಡಾವಣೆಯನ್ನು ನಗರ ಪಾಲಿಕೆಗೆ ಹಸ್ತಾಂತರಿಸಿಕೊAಡು ಹಂಚಿಕೆ ಪತ್ರಗಳನ್ನು ತುರ್ತಾಗಿ ನೀಡಬೇಕು ಹಾಗೂ ಶಾಲೆಯನ್ನು ಪ್ರಾರಂಭಿಸಬೇಕು ಮತ್ತು ಮಹಾನಗರ ಪಾಲಿಕೆಯಿಂದ ಸ್ವಚ್ಛತೆಯನ್ನು ಪ್ರತಿನಿತ್ಯ ಮಾಡಬೇಕು, ಸಂಪಾಧನೆ ಮಠ ಸ್ಲಂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ನಿರಾಪೇಕ್ಷಣಾ ಪತ್ರ ನೀಡಬೇಕೆಂದು ಕಾರ್ಯದರ್ಶಿ ಅರುಣ್ ಒತ್ತಾಯಿಸಿದರು. ಕೋಡಿಹಳ್ಳ ಸ್ಲಂ, ಭಾರತಿ ನಗರ ಭಾಗ-2, ಎಸ್‌ಎನ್ ಪಾಳ್ಯ ಪ್ರದೇಶಗಳಿಗೆ ಮಳೆ ನೀರಿನ ಸುರಕ್ಷತೆಗೆ ಪ್ರೊಟೆಕ್ಷನ್ ವಾಲ್ ನಿರ್ಮಾಣ ಮಾಡಲು ಶಾಖಾ ಸಮಿತಿಯ ಮುಖಂಡರುಗಳಾದ ಗಣೇಶ್, ಗುಲ್ನಾಜ್, ರಂಗಪ್ಪ, ಶಂಕ್ರಯ್ಯ ಮನವಿ ಮಾಡಿದರು.ನಿವೇಶನ ರಹಿತರಿಗೆ ನಿವೇಶನ ನೀಡಲುಕ್ರಮ ಕೈಗೊಳ್ಳಲು ಹಾಗೂ ಈಗಾಗಲೇ ವಾಸಸ್ಥಳ ದೃಢೀಕರಣ ಪತ್ರ ನೀಡಿರುವವರಿಗೆ ನಗರಪಾಲಿಕೆಯಿಂದಖಾತೆ ಮಾಡಿಸಿಕೊಡುವಂತೆ ನಿವೇಶನ ಸಮಿತಿ ಹೋರಾಟ ಸಮಿತಿಯತಮ್ಮಕ್ಕ, ಸುಧಾ ಹಾಗೂ ನಂಜಮ್ಮ, ಮಹಾದೇವಮ್ಮ ಒತ್ತಾಯಿಸಿದರು.ಎನ್,ಆರ್ ಕಾಲೋನಿ ಭಾಗ-2, ನಿರ್ವಾಣಿಲೇಔಟ್ ಹಮಲರ ಕಾಲೋನಿ, ಎಳ್ಳರಬಂಡೆ ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಲು ಕ್ರಮವಹಿಸಬೇಕೆಂದು ಮುಖಂಡರಾದಜಾಬೀರ್‌ಖಾನ್, ಪುಟ್ಟರಾಜು, ತಿರುಮಲಯ್ಯ ಒತ್ತಾಯಿಸಿದರು. ಮಾರಿಯಮ್ಮ ನಗರ ವಸತಿ ಸಮುಚ್ಛಯ ಸ್ವಚ್ಚತೆಗೆ ನಗರಪಾಲಿಕೆ ಕ್ರಮವಹಿಸಿ ನೀರಿನಘಟಕವನ್ನು ಪ್ರಾರಂಭಿಸುವAತೆಚಕ್ರಪಾಣಿ ಮನವಿ ಮಾಡಿದರು.
ಸ್ಲಂ ನಿವಾಸಿಗಳ ಕುಂದುಕೊರತೆಯನ್ನು ಆಲಿಸಿದ ನಗರಪಾಲಿಕೆಯಆಯುಕ್ತರಾದ ಸಿ.ಯೋಗಾನಂದ್ ಮಾತನಾಡಿ ಕೊಳಗೇರಿ ಜನರು ನಗರದಅಭಿವೃದ್ಧಿಯ ಚಲನ ಶಕ್ತಿಯಾಗಿದ್ದು ಪ್ರಸಕ್ತ ಬಜೆಟ್‌ನಲ್ಲಿ ಮೂಲಭೂತ ಸೌಲಭ್ಯಕಲ್ಪಿಸಲು ವಿಶೇಷ ಆಧ್ಯತೆ ನೀಡಲಾಗುವುದು.ಪ್ರಧಾನಮಂತ್ರಿಆವಾಸ್‌ಯೋಜನೆಯಲ್ಲಿತುಮಕೂರು ನಗರಕ್ಕೆ1450 ಮನೆಗಳಲ್ಲಿ 640 ಮನೆಗಳು ಎಸ್‌ಸಿ/ಎಸ್‌ಟಿಗಳಿಗೆ ನಿರ್ಮಿಸುತ್ತಿದ್ದುಇದರಲ್ಲಿ187 ಕುಟುಂಬಗಳಿಗೆ ನಗರಪಾಲಿಕೆಯಿಂದ ಸಾಧ್ಯವಾದಷ್ಟು ವಂತಿಕೆ ಹಣ ಪಾವತಿಸಲು ಎಸ್‌ಎಫ್‌ಸಿ ಅನುಧಾನದಲ್ಲಿ44 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು ಇನ್ನುಳಿದ ಹಣವನ್ನು ಈ ಬಜೆಟ್ ನಲ್ಲಿ ಸರಿಯೊಂದಿಸಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು, ದಿಬ್ಬೂರುದೇವರಾಜ್‌ಅರಸು ಬಡಾವಣೆ ಹಸ್ತಾಂತರಕ್ಕೆ ಸಂಬAಧಿಸಿದAತೆ ನಗರ ಪಾಲಿಕೆಯಿಂದತಾAತ್ರಿಕ ವರದಿ ಪಡೆದುಕ್ರಮವಹಿಸಲಾಗುವುದು, ಸರ್ಕಾರ ನಗರಪ್ರದೇಶಗಳಿಗೆ ಅಕ್ರಮ-ಸಕ್ರಮ ಜಾರಿಗೊಳಿಸಿದ್ದಲ್ಲಿ ಕೊಳಚೆ ಪ್ರದೇಶಗಳಿಗೆ ‘ಎ’ಖಾತೆಯನ್ನು ಮಾಡಿಕೊಡಲಾಗುವುದು, ವಿದ್ಯುತ್ ಸಂಪರ್ಕ ಪಡೆಯಲು ನಗರಪಾಲಿಕೆಯಯಾವುದೇರೀತಿಯ ಎನ್.ಓ.ಸಿ ಅಗತ್ಯವಿಲ್ಲ, ನಿವೇಶನ ರಹಿತರಿಗೆಆಧ್ಯತೆ ನೀಡಲುಆಶ್ರಯ ಸಮಿತಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು, ಅಭಿವೃದ್ಧಿಗೆ ಸಂಬAಧಿಸಿAತೆ ಸ್ಲಂಜನರಿಗೆಎಲ್ಲಾರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಮಹಾಪೌರರಾದ ಪ್ರಭಾವತಿ ಸುದೀಶ್ವರ್ ಮತ್ತು ಸಾಮಾಜಿಕ ಸ್ಥಾಯಿ ಸಮಿತಿಅಧ್ಯಕ್ಷರಾದ ವೀಣಾ ಮನೋಹರ್‌ಗೌಡರವರು ಮಾತನಾಡಿ ಪ್ರಸಕ್ತ ಬಜೆಟ್‌ನಲ್ಲಿ ಸ್ಲಂಜನರಿಗೆ ವಿಶೇಷ ಆಧ್ಯತೆ ನೀಡಿ ಹಣವನ್ನು ಮೀಸಲಿಡಲಾಗುವುದು, ಕೊಳಗೇರಿ ಜನರು ಸ್ವಚ್ಚತೆಗೆಅರಿವು ಮೂಡಿಸುವಜೊತೆಗೆ ಮಾಧರಿ ಕೊಳಗೇರಿಗಳ ನಿರ್ಮಾಣಕ್ಕೆಆಧ್ಯತೆ ನೀಡಲಾಗುವುದು, ಸ್ಲಂಗಳಲ್ಲಿರುವ ಎಸ್‌ಸಿ/ಎಸ್‌ಟಿಗಳು ಮತ್ತು ಬಿಪಿಎಲ್ ಕುಟುಂಬಗಳಿಗೆ ನೀರು ಮತ್ತು ವಿದ್ಯುತ್ ಶುಲ್ಕದಲ್ಲಿ ಸಬ್ಸಿಡಿ ಘೋಷಿಸಲು ಪಾಲಿಕೆ ಚಿಂತಿಸುತ್ತಿದೆಎAದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಉಪ-ಆಯುಕ್ತರು(ಕಂದಾಯ)ಸುಮತಿ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಇಂಜಿನಿಯರ್ ಲೋಕೇಶ್ವರಪ್ಪ, ಪಾಲಿಕೆ ಲೆಕ್ಕಾಧಿಕಾರಿ ವಿಶ್ವನಾಥ್, ಆಶ್ರಯ ಶಾಖೆಯ ಸಂತೋಷ್, ಮೋಹನ್‌ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ರಂಗನಾಥ್, ಮೋಹನ್, ಚಕ್ರಪಾಣಿ, ಮಂಜುನಾಥ್, ಲಕ್ಷಿö್ಮÃಪತಿ, ಸುಜಾತ, ಮುಂತಾದವರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments