ಪಹಣಿಗಳಿಗೆ ಆಧಾರ್ ಜೋಡಣೆ; ತುಮಕೂರು ಎರಡನೇ ಸ್ಥಾನ

0
97

ಲಕ್ಷ್ಮೀಕಾಂತರಾಜು ಎಂ ಜಿ
ತುಮಕೂರು:: ಭೂ ಮಾಲೀಕರ ಆಧಾರ್ ಸಂಖ್ಯೆಯನ್ನು ಪಹಣಿಗಳಿಗೆ ಜೋಡಣೆ ಮಾಡುವ ಅಭಿಯಾನವನ್ನು ಕಂದಾಯ ಇಲಾಖೆಯು ನಡೆಸುತ್ತಿದ್ದು ಜೂನ್ 26 ಕ್ಕೆ ಕೊನೆಗೊಂಡಂತೆ ಆಧಾರ್ ಜೋಡಣೆ ಪ್ರಗತಿಯಲ್ಲಿ ತುಮಕೂರು ಜಿಲ್ಲೆಯು ಎರಡನೇ ಸ್ಥಾನ ತಲುಪಿದ್ದು ಮೊದಲನೇಯ ಸ್ಥಾನವನ್ನು ಬೆಳಗಾವಿ ಪಡೆದುಕೊಂಡಿದೆ.

ರಾಜ್ಯದಲ್ಲಿ ಆಧಾರ್ ಜೋಡಣೆ ಮಾಡಬೇಕಾಗಿರುವ 4,03,18,494 ಭೂ ಮಾಲೀಕರುಗಳ ಪಹಣಿಗಳಲ್ಲಿ 10,94,145 ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯು ಮುಂದಿದ್ದರೆ, 9,09,929 ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ತುಮಕೂರು ಜಿಲ್ಲೆಯ ಕಂದಾಯ ಇಲಾಖೆಯು ಎರಡನೇಯ ಸ್ಥಾನ ಪಡೆದುಕೊಂಡಿದೆ.

ಪಹಣಿಗಳಿಗೆ ಆಧಾರ್ ಜೋಡಣೆ ಅಭಿಯಾನದಲ್ಲಿ ಆಯಾ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಪಹಣಿಗಳ ಮಾಲೀಕರುಗಳನ್ನು ಗುರ್ತಿಸಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುತ್ತಿರುವುದು ಕಂದಾಯ ವೃತ್ತಗಳಲ್ಲಿ ಕಂಡುಬರುತ್ತಿರುವುದು ಆಧಾರ್ ಜೋಡಣೆ ಆಭಿಯಾನದ ಜಿಲ್ಲೆಯ ಪ್ರಗತಿಗೆ ಕಾರಣವಾಗಿದೆ.

ರಾಜ್ಯದಲ್ಲಿ ಭೌತಿಕವಾಗಿ ಎರಡು ದೊಡ್ಡ ಜಿಲ್ಲೆಗಳಾದ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳು ಆಧಾರ್ ಜೋಡಣೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದುಕೊಂಡಿರುವುದೂ ವಿಶೇಷವಾಗಿದೆ. ಪಹಣಿಗಳ ಒಟ್ಟು ಸಂಖ್ಯೆಯಲ್ಲಿಯೂ ಬೆಳಗಾವಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ತುಮಕೂರು ನಾಲ್ಕನೇಯ ಸ್ಥಾನದಲ್ಲಿದೆ.

ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಮುಟ್ಟಿಸುವ ಸಲುವಾಗಿ ಪಹಣಿಗಳಿಗೆ ಆಧಾರ್ ನಂಬರ್ ಜೋಡಣೆ ಮಾಡಲು ತತ್ರಾಂಶ ರೂಪಿಸಲಾಗಿದ್ದು , ಎಲ್ಲ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲು ತಮ್ಮ ಅಧೀನ ಅಧಿಕಾರಿಗಳಿಗೆ ಕ್ರಮ ವಹಿಸಲು ಸೂಚಿಸುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳೆದ ಫೆಬ್ರುವರಿಯಲ್ಲಿ ಕಂದಾಯ ಆಯುಕ್ತರು ಪತ್ರ ಬರೆದಿದ್ದರು.

LEAVE A REPLY

Please enter your comment!
Please enter your name here