Thursday, May 23, 2024
spot_img
HomeChikballapurಕಸಾಯಿಖಾನೆಗೆ ಸಾಗಾಣೆ ಮಾಡುತ್ತಿದ್ದ ಜಾನುವಾರಗಳ ರಕ್ಷಣೆ..

ಕಸಾಯಿಖಾನೆಗೆ ಸಾಗಾಣೆ ಮಾಡುತ್ತಿದ್ದ ಜಾನುವಾರಗಳ ರಕ್ಷಣೆ..

ಪಾಲಾರ್ ಪತ್ರಿಕೆ Palar Pathrike

ಶಿಡ್ಲಘಟ್ಟ : ತಾಲ್ಲೂಕಿನ ಹೆಚ್ ಕ್ರಾಸ್ ಅಕ್ರಮವಾಗಿ ಹೊಸಕೋಟೆಯ ಸೂಲಿಬೆಲೆ ಕಸಾಯಿಖಾನೆಗೆ ೨ ಗೂಡ್ಸ್ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಿಡ್ಲಘಟ್ಟ ವೃತ್ತ ಪೊಲೀಸರು ದಾಳಿ ನಡೆಸಿದ್ದು, ಒಟ್ಟು ೧೧ ಜಾನುವಾರುಗಳು ರಕ್ಷಣೆ ಮಾಡಿದ್ದಾರೆ.

ಆಂಧ್ರಪ್ರದೇಶದ ಕದಿರಿ ಕಡೆಯ ಸಂತೆಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಖಾಸಾಯಿ ಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ಶಿಡ್ಲಘಟ್ಟ ಪೊಲೀಸರು ದಾಳಿ ನಡೆಸಿದ್ದಾರೆ.
ಸುಮಾರು ೨.೭೫.೦೦೦ ಸಾವಿರ ಬೆಲೆ ಬಾಳುವ ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಅಶೋಕ ಲೇ ಲ್ಯಾಂಡ್ ಗೂಡ್ಸ್ ಎರಡು ವಾಹನಗಳನ್ನು ಮತ್ತು ವಾಹನಗಳ ಚಾಲಕರನ್ನು ವಶಕ್ಕೆ ಪಡೆದಿರುವ ಪೊಲೀಸರು, ರಕ್ಷಣೆ ಮಾಡಿರುವ ಜಾನುವಾರುಗಳನ್ನು ಪೋಷಣೆ ಮಾಡುವ ಸಲುವಾಗಿ ಗೋಶಾಲೆಗೆ ಬಿಟ್ಟಿದ್ದಾರೆ.

ದಾಳಿಯಲ್ಲಿ ಶಿಡ್ಲಘಟ್ಟ ವೃತ್ತ ಸಿಪಿಐ ನಂದಕುಮಾರ್ , ಅಪರಾಧ ವಿಭಾಗದ ಸಿಬ್ಬಂಧಿಗಳಾದ ಸಿಹೆಚ್‌ ನಂದಕುಮಾರ್, ಚನ್ನಕೇಶವ, ನಟರಾಜನ್, ಚಂದಪ್ಪ ಯಲಿಗಾರ್, ಮೈಲಾರಪ್ಪ, ಜೀಪ್ ಚಾಲಕ ಅಂಬರೀಶ್.ಎನ್ ರವರುಗಳ ಕರ‍್ಯವನ್ನು ಮಾನ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಿ.ಎಲ್.ನಾಗೇಶ್, ಐಪಿಎಸ್ ಸಹಾಯಕ ಪೊಲೀಸ್‌ ಅಧಿಕ್ಷಕರಾದ ಕುಶಾಲ್ ಚೌಕ್ಸಿ ರವರುಗಳು ಶ್ಲಾಘಿಸಿದ್ದಾರೆ.

ಈ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments