Thursday, March 28, 2024
spot_img
HomeChikballapurಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ನೀಡಿದಲ್ಲಿ ಭವಿಷ್ಯದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬಹುದು

ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಸರಿಯಾದ ಸಂಸ್ಕಾರವನ್ನು ನೀಡಿದಲ್ಲಿ ಭವಿಷ್ಯದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬಹುದು


ಪಾಲಾರ್ ಪತ್ರಿಕೆ | Palar Patrike

ಶಿಡ್ಲಘಟ್ಟ : ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಎಂ ಶೀನಪ್ಪರವರು ತಿಳಿಸಿದರು…  ಇವರು ಶಿಡ್ಲಘಟ್ಟ ತಾಲ್ಲೂಕಿನ ಶ್ರೀ ವಾಸವಿ ಶಾಲಾ ಆವರಣದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಾಲ್ಕು ಗೋಡೆಯ ಮದ್ಯೆ ಬಂಧಿಯಾಗಿದ್ದ ಮಹಿಳೆಯರು ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸೇರಿಕೊಂಡು ಇವತ್ತು ಮಹಿಳೆ ಪುರುಷನಷ್ಟೇ ಸಮಾನಳು ಎಂದು ನಿರೂಪಿಸಿದ್ದಾರೆ. ಪ್ರತಿಯೊಂದಕ್ಕೂ ಪುರುಷನನ್ನು ಅವಲಂಬಿಸದೇ ಸ್ವಾವಲಂಬಿ ಬದುಕನ್ನು ನಡೆಸಲು ಈ ಕಾರ್ಯಕ್ರಮ ನೆರವಾಗಿದ್ದಲ್ಲದೇ ಮಾತೃಶ್ರೀ ಯವರ ಅತ್ಯಂತ ಕಾಳಜಿಯ ದುರ್ಬಲ ವರ್ಗದ ನಿರ್ಗತಿಕ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುವ ಮಾಶಾಸನ ಮನೆಯೇ ಇಲ್ಲದೇ ಗುಡಿಸಲಿನಲ್ಲಿ ವಾಸ ಮಾಡುವ ಅತ್ಯಂತ ಬಡಕುಟುಂಬಗಳಿಗೆ ಮನೆ ಕಟ್ಟಿ ಕೊಡುವ ವಾತ್ಸಲ್ಯ ಕಾರ್ಯಕ್ರಮಗಳು ಮಾತೃಶ್ರೀ ಅಮ್ಮನವರಿಗೆ ಬಡವರ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ… ಇಂತಹ ಮಾತೃ ಹೃದಯದ ಅಮ್ಮನವರಿಗೆ ಶತಕೋಟಿ ಪ್ರಣಾಮಗಳು ಎಂದು ಶುಭ ಹಾರೈಸಿದರು…                                                                                                                                             ಕರ್ನಾಟಕ ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿರುವ ಡಾ. ವಿಜಯಾ ರವರು ಮಾತನಾಡುತ್ತಾ ಹೆಣ್ಣು ಈ ಸಮಾಜದಲ್ಲಿ ನೂರಾರು ವರ್ಷಗಳಿಂದ ಶೋಷಣೆಗೆ ಒಳಪಡುತ್ತಿದ್ದು ಇದನ್ನು ಪ್ರಶ್ನಿಸುವ ಧೈರ್ಯ ನಮ್ಮ ಮಹಿಳೆಯರಿಗೆ ಇಲ್ಲದೇ ಇರುವುದು ದುರಂತ.. ಇವತ್ತು ಸಾಕಾಷ್ಟು ಮಹಿಳಾ ಸಾಂತ್ವನ ಕೇಂದ್ರಗಳು ಮಹಿಳೆಯರ ಹಕ್ಕಿನ ಬಗ್ಗೆ ತಿಳುವಳಿಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯುವುದರ ಜೊತೆಗೆ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು ಎಂದು ಶುಭ ಹಾರೈಸಿದರು…                  ರೈತ ಪರ ಹೋರಾಟಗಾರರು ಆಗಿರುವ ಸುಷ್ಮಾ ಶ್ರೀನಿವಾಸ್ ರವರು ಮಾತನಾಡುತ್ತಾ ಇಂತಹ ಅದ್ಭುತ ಕಾರ್ಯಕ್ರಮದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಕೂತಿದ್ದೀರಿ.. ಇದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಸಾಧ್ಯ.. ನಾನು ಕೂಡಾ ಸಂಘದ ಸದಸ್ಯಳಾಗಿದ್ದುಕೊಂಡು ಸಾಕಾಷ್ಟು ಮಾತೃಶ್ರೀ ಅಮ್ಮನವರ ಹಾಗೂ ಪರಮಪೂಜ್ಯರ ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ.. ಈ ಎಲ್ಲಾ ಕಾರ್ಯಕ್ರಮಗಳು ಅರ್ಥಪೂರ್ಣವಾದದ್ದು ಹಾಗೂ ಈ ಕಾರ್ಯಕ್ರಮಗಳಿಂದ 10 ಮಂದಿ ಜಾಗೃತರಾದರೆ ಸಾಕು ಇದೇ ಮಾತೃಶ್ರೀ ಅಮ್ಮನವರಿಗೆ ಕೊಡುವ ದೊಡ್ಡ ಗೌರವ ಎಂದು ಶುಭ ಕೋರಿದರು…                                                         ಪರಿಸರ ಪ್ರೇಮಿ ಬೆಳ್ಳೂಟಿ ಸಂತೋಷ್ ರವರು ಮಾತನಾಡುತ್ತಾ ಹೆಣ್ಣನ್ನು ಪುರುಷ ಯಾವಾಗ ಸ್ವತಂತ್ರಳಾಗಿ ಬದುಕಲು ಬಿಡುತ್ತಾನೋ ಆವಾಗಲೇ ಅವಳ ಪ್ರತಿಭೆಗಳು ಅವಳಲ್ಲಿರುವ ವ್ಯವಹಾರ ಜ್ಞಾನ ಜವಾಬ್ದಾರಿಗಳು ಈ ಸಮಾಜಕ್ಕೆ ತಿಳಿಯಲು ಸಾಧ್ಯ.. ಹೆಣ್ಣನ್ನು ಸಂಶಯದಿಂದ ನೋಡುವುದನ್ನು ಬಿಟ್ಟು ವಿಶ್ವಾಸ ನಂಬಿಕೆಯಿಂದ ನೋಡಿದಲ್ಲಿ ಹೆಣ್ಣು ಸಂಸಾರದ ಕಣ್ಣಾಗಲು ಸಾಧ್ಯ ಎಂದರು..               
ಶಾಶ್ವತ ನೀರಾವರಿ ಹೋರಾಟಗಾರರಾದ ಉಷಾ ಆಂಜನೇಯ ರೆಡ್ಡಿಯವರು ಮಾತನಾಡುತ್ತಾ ಪೂಜ್ಯರು 75 ನೇ ಜನ್ಮದಿನ ನಿನ್ನೆ ತಾನೇ ಮುಗಿದಿದೆ. ಪೂಜ್ಯರು ನೂರು ವರುಷ ಆರೋಗ್ಯವಂತರಾಗಿ ಬಾಳಬೇಕು. ತಾಲ್ಲೂಕಿನ ಸಮಸ್ತ ನಾಗರೀಕರ ಪರವಾಗಿ ಪೂಜ್ಯರ ಹುಟ್ಟುಹಬ್ಬಕ್ಖೆ ಶುಭವನ್ನು ಕೋರಿದರು..        ಸಮಾಜಸೇವಕರಾದ ಆಯೇಷಾ ಸುಲ್ತಾನರವರು ಮಾತನಾಡುತ್ತಾ ಪೂಜ್ಯರು ಧರ್ಮ ಜಾತಿ ರಾಜಕೀಯ ರಹಿತ ವ್ಯಕ್ತಿ.. ಎಲ್ಲಾ ಧರ್ಮದವರನ್ನು ಸಮಾನವಾಗಿ ಕಂಡಂತಹ ಮೇರು ವ್ಯಕ್ತಿತ್ವ.. ನಾನು ಪೂಜ್ಯರನ್ನು ಅಪ್ಪಾಜಿ ಎಂದು ಕರೆಯುವವಳು.. ಯಾಕೆಂದರೆ ಅವರ ಜೀವನ ಶೈಲಿ ಅವರ ಆದರ್ಶಗಳಲ್ಲಿ ಕಾಲು ಭಾಗ ನಮ್ಮ ಜೀವನದಲ್ಲಿ ರೂಢಿಸಿಕೊಂಡರೂ ನೆಮ್ಮದಿಯಾಗಿ ಬದುಕಬಹುದು ಎಂದು ಶುಭ ಹಾರೈಸಿದರು..  
 ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಹಾಗೂ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು..  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸವಿ ಶಾಲೆಯ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ವಹಿಸಿದ್ದರು.  ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಸಿ ಎಸ್  ಜನಜಾಗೃತಿ ವೇದಿಕೆ ಸದಸ್ಯರಾದ ಹಿತ್ತಲಹಳ್ಳಿ ಸುರೇಶ್ ಯೋಜನಾಧಿಕಾರಿ ಪ್ರಕಾಶ್ ಕುಮಾರ್  ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಮಂಗಲಾ ಮೇಲ್ವಿಚಾರಕರಾದ ದಯಾನಂದ್ ಮಂಜುನಾಥ್ ಭೂತಯ್ಯ ರಾಜೇಶ್ ಉಪಸ್ಥಿತರಿದ್ದರು…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments