Thursday, March 28, 2024
spot_img
HomeChikballapurಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ ವಿರುದ್ಧ...

ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮನವಿ

ಶಿಡ್ಲಘಟ್ಟ: ರಾಯಚೂರು ಕೋರ್ಟ್ ಆವರಣದಲ್ಲಿ ಸಂವಿಧಾನ ದಿನಾಚರಣೆ-ಗಣರಾಜ್ಯೋತ್ಸವ  ದಿನದಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯದೀಶ  ಮಲ್ಲಿಕಾರ್ಜುನ್ ಗೌಡ(ಲಿಂಗಾಯತ ಗೌಡ) ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ ಸಂವಿಧಾನಕ್ಕೆ ಮತ್ತು  ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ, ಇವರು ನ್ಯಾಯದೀಶ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ, ಇವರನ್ನು ನ್ಯಾಯಾಧೀಶ ಉದ್ದೇಗೆ ತಕ್ಕವರಲ್ಲ ಮಲ್ಲಿಕಾರ್ಜುನ ಗೌಡ ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಒತ್ತಯಿಸಿದರು.
ನಗರದ ತಾಲ್ಲೂಕು ಕಛೇರಿಯ ಬಳಿ  ರಾಯಚೂರಿನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರವರು ಡಾ.ಬಿಆರ್. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮತ್ತು ಸಂವಿಧಾನಕ್ಕೆ  ಅವಮಾನ ಮಾಡಿದವರ ವಿರುದ್ಧ ತಹಸೀಲ್ದಾರ್ ಬಿ.ಎಸ್.ರಾಜೀವ್  ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನ ಮಾಡಿರುವ ಕೆಲಸ ದೇಶ ದ್ರೋಹ ಕೃತ್ಯ. ಇವರ ಮೇಲೆ ಈ ಕೂಡಲೇ  ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲೀಸಬೇಕು.
ಮಾನ್ಯ ಉಚ್ಚ ನ್ಯಾಯಾಲಯವೂ ಸ್ವಯಂ ಪ್ರೇರಿತವಾಗಿ  ಇವರ ವಿರುದ್ಧ ಕಠಿಣ  ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ದಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಮುನಿಆಂಜಿನಪ್ಪ, ದ್ಯಾವಪ್ಪ, ದೇವರಾಜ್, ಗೊರ್ಲಪ್ಪ, ಚಿಕ್ಕನರಸಿಂಹಪ್ಪ, ಸುಬ್ರಮಣಿ, ದೇವರಾಜ್, ಲೋಕೇಶ್ ಹಾಗೂ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments