Thursday, April 25, 2024
spot_img
HomeChikballapurವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಮತ್ತು ಜ್ಞಾನಾರ್ಜನೆ ಮಾಡಬೇಕಾದ ಶಿಕ್ಷಕರೇ ಗೈರಾಗಿದ್ದಾರೆ

ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಮತ್ತು ಜ್ಞಾನಾರ್ಜನೆ ಮಾಡಬೇಕಾದ ಶಿಕ್ಷಕರೇ ಗೈರಾಗಿದ್ದಾರೆ

ಶಿಡ್ಲಘಟ್ಟ: ಸರ್ಕಾರಿ ಶಾಲೆಗಳಲ್ಲಿ ಕೋವಿಡ್ 19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದರೂ ಸಹ ತೊಟ್ಲಗಾನಹಳ್ಳಿಯಲ್ಲಿ ಮಾತ್ರ ಮಾರ್ಗಸೂಚಿಗಳನ್ನು ಧಿಕ್ಕರಿಸಲಾಗಿದೆ ಕೆಲವೊಂದು ಮಕ್ಕಳು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮಾಸ್ಕ್ಗಳನ್ನು ಧರಿಸಿದ್ದಾರೆ ಆದರೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಮಾಡುವ ಜೊತೆಗೆ ಜ್ಞಾನಾರ್ಜನೆ ಮಾಡಬೇಕಾದ ಶಿಕ್ಷಕರೇ ಶಾಲೆಯಲ್ಲಿ ಗೈರು ಹಾಜರಾಗಿ ಮಕ್ಕಳು ಅಭದ್ರತೆಯಲ್ಲಿ ಆಟವಾಡುವ ಕಾಯಕದಲ್ಲಿ ತೊಡಗಿದ್ದು ಇದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಭಕ್ತರಹಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಬರುವ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವ ಸಲುವಾಗಿ ಶಾಲಾ ಆವರಣದಲ್ಲಿ ಕೊಳವೆ ಬಾವಿಯನ್ನು

ಕೊರೆಸಿದ್ದು ಅದಕ್ಕೆ ಮೋಟಾರು ಪಂಪು ಅಳವಡಿಸುವ ಸಲುವಾಗಿ ಗ್ರಾ.ಪಂ. ಅಧಿಕಾರಿಗಳು ಕನಿಷ್ಟ ಸೌಜನ್ಯಕ್ಕಾದರೂ  ಶಾಲಾ ಆವರಣದಲ್ಲಿ ವಿಶೇಷವಾಗಿ ಅಕ್ಷರ ದಾಸೋಹ ಬಿಸಿಯೂಟ ತಯಾರು ಮಾಡುವ ಕೊಠಡಿಯ ಬಾಗಿಲಿನ ಮುಂಬಾಗದಲ್ಲಿ ಬೇಕಾಬಿಟ್ಟಿಯಾಗಿ ಪ್ಯಾನಲ್ ಬೋರ್ಡ್ (ಸ್ಟಾರ್ಟರ್)ಗೆ ವಿದ್ಯುತ್ ಅಳವಡಿಸಲು ವಿದ್ಯುತ್ ಕಂಬದಿAದ ತ್ರೀಪೇಸ್ ತಂತಿಗಳನ್ನು ನೇರವಾಗಿ ತಂದು ಪೀಜ್ ಗಳ ಕಟೌಟ್ರು ಬಾಕ್ಸ್ ಮೂಲಕ ವಿದ್ಯುತ್ ತಂತಿಗಳು ಬಿಟ್ಟಿರುವುದರಿಂದ ವಿದ್ಯಾರ್ಥಿಗಳು ವಿದ್ಯುತ್ ತಂತಿಗಳನ್ನು ನೋಡಿ ಕೊಂಡು ಮಧ್ಯಾಹ್ನದ ಬಿಸಿಯೂಟ ಸೇವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾ.ಪಂ.ಅಭಿವೃದ್ದಿಯ ಅಧಿಕಾರಿಯ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ವಿದ್ಯಾರ್ಥಿಗಳ ಭದ್ರತಾ ದೃಷ್ಟಿಯಿಂದ ಪ್ರಾಣಾಪಾಯವನ್ನು ತಪ್ಪಿಸಲು ಕೂಡಲೇ ವಿದ್ಯುತ್ ಅಳವಡಿಸಿರುವ ಪರಿಕರಗಳನ್ನು ತೆರವುಗೊಳಿಸಿ  ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಸ್ವಯಂ ಘೋಷಿತ ರಜೆ: ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಅಭದ್ರತೆಯಲ್ಲಿ ಪಾಠ ಪ್ರವಚನಗಳನ್ನು ಕೇಳುವ ಶೋಚನೀಯ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಒಂದೆಡಯಾದರೆ ಮತ್ತೊಂದೆಡೆ ಶಾಲೆಗೆ ಹೊಂದಿಕೊAಡಿರುವ ಅಂಗನವಾಡಿ ಕೇಂದ್ರಕ್ಕೆ ಸ್ವಯಂ ಘೋಷಿತ ರಜೆ ನೀಡಲಾಗಿದೆ. ತೊಟ್ಲಗಾನಹಳ್ಳಿ ಗ್ರಾಮದವರೇ ಅಂಗನವಾಡಿ ಕಾರ್ಯಕರ್ತರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಆದರೆ ಕೋವಿಡ್ ಸೋಂಕಿನ ಪ್ರಭಾವ ಹೆಚ್ಚಾಗುವ ಭೀತಿಯಿಂದ ಮಕ್ಕಳಿಗೆ ಕಳೆದ ಮೂರು ದಿನಗಳಿಂದ ಸ್ವಯಂ ಘೋಷಿತ ರಜೆಯನ್ನು ನೀಡಿದ್ದಾರೆ.

ಸರ್ಕಾರಿ ಶಾಲೆಯ ಶಿಕ್ಷಕ ಶಾಲಾ ವೇಳೆಯಲ್ಲಿ ಮಕ್ಕಳನ್ನು ಶಾಲೆಯಲ್ಲೇ ಬಿಟ್ಟು ಹೊರ ಹೋಗಿದ್ದರೆ ಇನ್ನೂ ಅಂಗನವಾಡಿ ಕಾರ್ಯಕರ್ತೆ ಮಾತ್ರ ಮಕ್ಕಳಿಗೆ ಮೂರು ದಿನ ರಜೆ ನೀಡಿ ಅವರು ಸಹ ಗೈರು ಹಾಜರಾಗಿದ್ದು ವಿಶೇಷ. ಸರ್ಕಾರಿ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪರಿಶೀಲಿಸುವ ನೆಪದಲ್ಲಿಯಾದರೂ ಅಧಿಕಾರಿಗಳು ಈ ಶಾಲೆ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿಲ್ಲವೆಂಬ ಅನುಮಾನ ಮೂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments