Thursday, March 28, 2024
spot_img
HomeRamnagarಚುನಾವಣೆ ಮತದಾರ ಪಟ್ಟಿ ವೀಕ್ಷಕರಿಂದ ಮತದಾರರ ಪಟ್ಟಿ ಪರಿಶೀಲನಾ ಸಭೆ

ಚುನಾವಣೆ ಮತದಾರ ಪಟ್ಟಿ ವೀಕ್ಷಕರಿಂದ ಮತದಾರರ ಪಟ್ಟಿ ಪರಿಶೀಲನಾ ಸಭೆ

ಪಾಲಾರ್ ಪತ್ರಿಕೆ | Palar Patrike

ರಾಮನಗರ:  ರಾಮನಗರ ಜಿಲ್ಲೆ ಚುನಾವಣಾ ಮತದಾರರ ಪಟ್ಟಿ ವೀಕ್ಷಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಜೆ. ರವಿಶಂಕರ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2023ರ ಸಂಬAಧ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ಎಲ್.ಒಗಳು ಜವಾಬ್ದಾರಿಯುವಾಗಿ ಕಾರ್ಯ ನಿರ್ವಹಿಸಿ ಎಂದರು. ಜಿಲ್ಲೆಗೆ ಹೊರಗಡೆಯಿಂದ ಬಂದ ಜನರ ಮಾಹಿತಿ ಪಡೆದು, ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು ಕೆಲವರು ಬೇರೆ ಕಡೆ ವಾಸ ಮಾಡುತ್ತಿರುವವರ ಮಾಹಿತಿ ಪಡೆದು, ಮತದಾರರ ಪಟ್ಟಿಯಲ್ಲಿ ಇರುವ ಹೆಸರುಗಳು ಪರಿಶೀಲನೆ ಮಾಡಿ, ಮರಣ ಹೊಂದಿರುವ ಮತದಾರರ ವಿವರವನ್ನು ಖಾತರಿಪಡಿಸಿಕೊಂಡು ಮರಣ ಹೊಂದಿದ ಮತದಾರರ ಪಟ್ಟಿಯನ್ನು ಕೈಬಿಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 1139 ಮತಗಟ್ಟೆಗಳಿದ್ದು ಮತಗಟ್ಟೆಯಲ್ಲಿ ನೆಲಮಹಡಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳುವಂತೆ ತಿಳಿಸಿದರು. ಮತದಾನ ಮಾಡಲು ಬರುವ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತಗಟ್ಟೆಯಲ್ಲಿ ವೀಲ್‌ಚೇರ್, ರ‍್ಯಾಂಪ್ ಇರುವ ಬಗ್ಗೆ ಪರಿಶೀಲಿಸುವಂತೆ ಹೇಳಿದರು.
ಕರಡು ಮತದಾರರ ಪಟ್ಟಿ ಈಗಾಗಲೇ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಅವರ ಇ-ಮೇಲ್ ವಿಳಾಸಗಳನ್ನು ಸಹ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇನ್ನು ಎರಡು ದಿನಗಳಲ್ಲಿ ಮನೆ ಮನೆಗೆ ತೆರಳಿ ಸರ್ವೇ ಮಾಡುವಂತೆ ಹೇಳಿದರು. ಪ್ರಸ್ತುತ ಜಿಲ್ಲಾಧಿಕಾರಿಗಳು ಶಾಲಾ ಮುಖ್ಯೋಪಾದ್ಯಾಯರಿಗೆ, ಪ್ರಾಂಶುಪಾಲರಿಗೆ, ಬಿಎಲ್‌ಓಗಳಿಗೆ ಚುನಾವಣೆಯ ಕುರಿತು ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಚುನಾವಣೆಯ ಕುರಿತು 1950 ಸಹಾಯವಾಣಿ ಸ್ಥಾಪಿಸಲಾಗಿದೆ ಎಂದರು.
ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಭೆ:- ಜಿಲ್ಲೆಯಲ್ಲಿ ಇಂದು ರಾಜಕೀಯ ಪಕ್ಷಗಳ ಮುಖಂಡರೊAದಿಗೆ ಚುನಾವಣೆ ಕುರಿತು ಮತದಾರರ ಕರಡು ಪಟ್ಟಿ ಕುರಿತು ಚರ್ಚಿಸಿದರು. ನಂತರ ವಿವಿಧ ರಾಜಕೀಯ ಪಕ್ಷಕಗಳು ತಮ್ಮ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಿಸಿ ಪಟ್ಟಿ ನೀಡುವಂತೆ ತಿಳಿಸಿದರು. ಪ್ರತಿ ವಾರ ಮತದಾರರ ಕರಡು ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಇ-ಮೇಲ್‌ಗೆ ಕಳುಹಿಸಲಾಗುತ್ತಿದ್ದು, ಅದನ್ನು ಪರಿಶೀಲಿಸಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯ ನಂತರ 183- ರಾಮನಗರ ವಿಧಾನ ಸಭಾ ಕ್ಷೇತ್ರದ ರಾಮನಗರ ಟೌನಿನ ಶಾಂತಿನಿಕೇತನ ಶಾಲೆ, ರಾಯರದೊಡ್ಡಿ, ಕೆಂಪೇಗೌಡನದೊಡ್ಡಿ ಹಾಗೂ ಪಾದರಹಳ್ಳಿ ಮತಗಟ್ಟೆಗಳಿಗೆ ಭೇಟಿನೀಡಿದರು. ಪಾದರಹಳ್ಳಿಯಲ್ಲಿ 100 ವರ್ಷ ಪೂರೈಸಿದ ಹನುಮಕ್ಕ ಅವರೊಂದಿಗೆ ಚುನಾವಣೆಯ ಕುರಿತು ಮಾಹಿತಿ ಪಡೆದರು.
185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚನ್ನಪಟ್ಟಣದ ಭೈರಾಪಟ್ಟಣ, ಹಲಸಿನಮರದೊಡ್ಡಿಯ ಸರ್ಕಾರಿ ಪ್ರಾಥಮಿಕ ಶಾಲೆ, ಅಮ್ಮಳ್ಳಿದೊಡ್ಡಿ ಮತಗಟ್ಟೆಗಳಿಗೆ ಭೇಟಿನೀಡಿದರು.
184-ಕನಕಪುರ ವಿಧಾನ ಸಭಾ ಕ್ಷೇತ್ರದ ಕನಕಪುರ ತಾಲ್ಲೂಕಿನ ಹನುಮಂತನಗರ, ಕಂಸಾಗರ, ಹೊಸಕಬ್ಬಾಳು ಹಾಗೂ ಕಬ್ಬಾಳು ಮತಗಟ್ಟೆಗಳಿಗೆ ಭೇಟಿನೀಡಿದರು.
182-ಮಾಗಡಿ ವಿಧಾನ ಸಭಾ ಕ್ಷೇತ್ರದ ಬಿಡದಿ ಹೋಬಳಿಯ ಕೆಂಚನಕುಪ್ಪೆಯ ಜನತಾ ಕಾಲೋನಿ, ಬಿಡದಿ ಹೋಬಳಿಯ ಹಲಸಿನಮರದೊಡ್ಡಿ ಹಾಗೂ ಬಿಡದಿ ಟೌನಿನ ಛತ್ರ ಮತಗಟ್ಟೆಗಳಿಗೆ ಭೇಟಿನೀಡಿ ಪರಿಶೀಲಿಸಿದರು.
ಸಭೆಯಲ್ಲಿ ಹಾಗೂ ಮತಗಟ್ಟೆಗಳ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ., ಉಪವಿಭಾಗಾಧಿಕಾರಿ ಮಂಜುನಾಥ್, ತಹಶೀಲ್ದಾರರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments