Thursday, March 28, 2024
spot_img
HomeUncategorizedಬಾಕಿಯಿರುವ ಕೃಷಿ ಗಣತಿಯನ್ನು ಪೂರ್ಣಗೊಳಿಸಿ : ಡಾ. ಅವಿನಾಶ್ ಮೆನನ್

ಬಾಕಿಯಿರುವ ಕೃಷಿ ಗಣತಿಯನ್ನು ಪೂರ್ಣಗೊಳಿಸಿ : ಡಾ. ಅವಿನಾಶ್ ಮೆನನ್

ಪಾಲಾರ್ ಪತ್ರಿಕೆ | Palar Patrike

ರಾಮನಗರ: ಪ್ರಕೃತಿಯಲ್ಲಿ ಉಂಟಾಗುವ ಅತೀವೃಷ್ಟಿ ಮತ್ತು ಅನಾವೃಷ್ಠಿಯಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾದಾಗ ವಿಮೆ ಪರಿಹಾರವನ್ನು ನೀಡಲು ಹಾಗೂ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಅಂದಾಜಿಸಲು ಕೈಗೊಳ್ಳುವ ಪ್ರಯೋಗಗಳೆ ಬೆಳೆ ಕಟಾವು ಪ್ರಯೋಗಗಳು ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬೆಳೆ ವಿಮಾ ಯೋಜನೆಯ ಜಿಲ್ಲಾ ಮಟ್ಟದ ಸಮಸ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಮುಖ ಆಹಾರ ಮತ್ತು ಆಹಾರೇತರ ಬೆಳೆಗಳ ಪ್ರತಿ ಹೆಕ್ಟೇರ್‌ನ ಸರಾಸರಿ ಇಳುವರಿಯನ್ನು ಹಾಗೂ ಉತ್ಪಾದನೆಯನ್ನು ಅಂದಾಜಿಸುವುದು. ರೂಢಿಯಲ್ಲಿರುವ ಕೃಷಿ ಪದ್ಧತಿ, ಕೀಟ ಮತ್ತು ರೋಗಬಾಧೆಗಳ ಬಗ್ಗೆ ಉಪಯುಕ್ತ ಪೂರಕ ಮಾಹಿತಿ ಸಂಗ್ರಹಣೆ ಮಾಡುವುದು. ಬೆಳೆ ನಷ್ಟವನ್ನು ಅಂದಾಜಿಸಿ ಬೆಳೆ ವಿಮೆಯನ್ನು ಇತ್ಯರ್ಥಪಡಿಸಲು, ಮೇವಿನ ಪ್ರಮಾಣ ಅಂದಾಜಿಸಲು, ಭೂ ಕಂದಾಯ ಮನ್ನಾ ಮಾಡಲು ಹಾಗೂ ಕೃಷಿ ಪ್ರಶಸ್ತಿ ನೀಡುವುದು ಬೆಳೆ ವಿಮಾ ಯೋಜನೆಯ ಉದ್ದೇಶವಾಗಿದೆ ಎಂದರು.
ಈ ಯೋಜನೆಯಲ್ಲಿ ಪ್ರತಿ ವರ್ಷ ಋತುವಾರು ಬೆಳೆ ವಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಹೋಬಳಿವಾರು ಬೆಳೆ ಕಟಾವು ಪ್ರಯೋಗಗಳನ್ನು ಯೋಜಿಸುವುದು. ಹೋಬಳಿ ಮಟ್ಟದಲ್ಲಿ ೧೨೫ ಹೆಕ್ಟೇರ್ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ೫೦ ಹೆಕ್ಟೇರ್ ವಿಸ್ತೀರ್ಣವಿರುವ ಬೆಳೆಗಳಿಗೆ ಕೃಷಿ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗುವುದು. ಮೂಲಕಾರ್ಯಕರ್ತರಿಗೆ ಹಾಗೂ ಮೇಲ್ವಿಚಾರಣಾ ಅಧಿಕಾರಿ/ಸಿಬ್ಬಂದಿಗಳಿಗೆ ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ಆಯೋಜಿಸುವುದು ಹಾಗೂ ಬೆಳೆವಾರು ಇಳುವರಿಯ ಅಂದಾಜು ಮತ್ತು ವಿವಿಧ ಮಾಹಿತಿಯ ವಿಶ್ಲೇಷಣೆ ಸೇರಿದಂತೆ ಇತರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಮೂನೆ-೧ ಪ್ರಾರಂಭಿಕ ಹಂತವಾಗಿದ್ದು, ಕಟಾವು ಪ್ರಯೋಗಗಳನ್ನು ಕೈಗೊಳ್ಳಲಾಗುವ ಗ್ರಾಮ, ರೈತನ ಹೆಸರು ಸರ್ವೇ ನಂಬರ್ ಹಾಗೂ ಬೆಳೆಯ ಜೊತೆಗೆ ರೈತನ ಛಾಯಾಚಿತ್ರವನ್ನು ಸೆರೆಯಿಡಿದು ಅಪ್ಲೋಡ್ ಮಾಡಲಾಗುವುದು. ನಮೂನೆ-೨ರಲ್ಲಿ ಬೆಳೆಯು ಕಟಾವಿಗೆ ಬಂದಾಗ ಅನಿಯತ ಸಂಖ್ಯೆಗಳ ಆಧಾರದ ಮೇಲೆ ೫ಘಿ೫ ಮತ್ತು ೧೦ಘಿ೫ ತಾಕನ್ನು ಗುರುತಿಸಿ ಕಟಾವು ಮಾಡಿ ಬಂದAತಹ ಇಳುವರಿ ಮತ್ತು ಉಪ ಉತ್ಪನ್ನವನ್ನು ಮೊಬೈಲ್ ಆಪ್‌ನಲ್ಲಿ ದಾಖಲಿಸುವುದು ಬೆಳೆ ಕಟಾವು ಪ್ರಯೋಗಗಳ ಹಂತಗಳಾಗಿದೆ ಎಂದರು.
ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳಲ್ಲಿ ೨೦೨೨-೨೩ನೇ ಸಾಲಿನ ಮುಂಗಾರು ಋತುವಿನ ನಮೂನೆ ೧ರಲ್ಲಿ ತಾಲ್ಲೂಕುಗಳು ಸೇರಿದಂತೆ ಒಟ್ಟು ನಿಯೋಜಿಸಿದ ಪ್ರಯೋಗಗಳು ೨೦೨೨, ಮುಕ್ತಾಯಗೊಂಡ ಪ್ರಯೋಗಗಳು ೧೪೦೩, ಬಾಕಿ ಪ್ರಯೋಗಗಳು ೬೧೯ ಆಗಿದೆ. ನಮೂನೆ ೨ರಲ್ಲಿ ಮುಕ್ತಾಯಗೊಂಡ ಪ್ರಯೋಗಗಳು ೩೦೧ ಮತ್ತು ಬಾಕಿ ಪ್ರಯೋಗಳು ೧೧೦೨ ಆಗಿದ್ದು, ಬಾಕಿಯಿರುವ ಪ್ರಯೋಗಗಳನ್ನು ಶ್ರೀಘ್ರವಾಗಿ ಮುಕ್ತಾಯಗೊಳಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನವೆಂಬರ್ ಹಾಗೂ ಡಿಸೆಂಬರ್ ಮಾಹೆಗಳಲ್ಲಿ ಪ್ರಯೋಗಗಳನ್ನು ನಮೂನೆ-೧ರಲ್ಲಿ ಮುಕ್ತಾಯಗೊಂಡರೆ ಮಾತ್ರ ನಮೂನೆ-೨ರಲ್ಲಿ ಪ್ರಾರಂಭಿಸÀಲಾಗುವುದು ಮುಕ್ತಾಯಗೊಳ್ಳದಿದ್ದರೆ ನಮೂನೆ-೨ನ್ನು ತೆರೆಯಲಾಗುವುದಿಲ್ಲ ಎಂದರು ತಿಳಿಸಿದರು.
ವಾರ್ಷಿಕವಾಗಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಋತುಗಳು ಮುಕ್ತಾಯವಾದ ತರುವಾಯ ಬೆಳೆ ವಿಸ್ತೀರ್ಣ ಮಾಹಿತಿಯನ್ನು ಗ್ರಾಮ ಪಂಚಾಯಿತಿ, ಹೋಬಳಿವಾರು, ತಾಲ್ಲೂಕುವಾರು ಹಾಗೂ ಜಿಲ್ಲಾವಾರು ತಯಾರಿಸಲಾಗುವುದು. ವಿವಿಧ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆಯ ವಿವರಗಳನ್ನು ಒದಗಿಸುವುದು. ಆಹಾರ ಮತ್ತು ಆಹಾರೇತರ ಕೃಷಿ ಬೆಳೆಗಳ ಆಯಾತ ಮತ್ತು ನಿರ್ಯಾತ ನೀತಿ ನಿರೂಪಿಸುವುದು. ಒಟ್ಟು ರಾಜ್ಯ ಆಂತರಿಕ ಉತ್ಪನ್ನ, ರಾಜ್ಯಾದಾಯ, ತಲಾದಾಯ ಮತ್ತು ಬೆಳವಣಿಗೆಯ ಪ್ರಮಾಣವನ್ನು ಕಂಡು ಹಿಡಿಯಲು ಕೃಷಿ ಬೆಳೆಯಲ್ಲಿನ ಏರು-ಪೇರು ತಿಳಿಯುವುದು ಹಾಗೂ ಸರ್ಕಾರದ ನೀತಿ ನಿರೂಪಣೆ, ಯೋಜನೆ ತಯಾರಿ, ಶೈಕ್ಷಣಿಕ ಅಧ್ಯಯನಗಳಿಗೆ ಇವು ಅತ್ಯಪಯುಕ್ತವಾಗಿದೆ ಎಂದು ತಿಳಿಸಿದರು.
ಬೆಳೆ ಎಣಿಕೆ ಕಾರ್ಯದಲ್ಲಿ ಮುಂಗಾರು-ಪೂರ್ವದಲ್ಲಿ ಏಪ್ರಿಲ್ ೧ ರಿಂದ ಜೂನ್ ೩೦ ಋತುವಾರು ಕಾಲಾವಧಿ. ಜುಲೈ ೧ ರಿಂದ ಜುಲೈ ೯ರ ವರೆಗೆ ಟಿಆರ್‌ಎಸ್ ಗ್ರಾಮಗಳ ಬೆಳೆ ಎಣಿಕೆಯ ಅವಧಿ ಮತ್ತು ಜುಲೈ-೧ ರಿಂದ ಜುಲೈ ೩೧ರ ವರೆಗೆ ಎಲ್ಲಾ ಗ್ರಾಮಗಳ ಬೆಳೆ ಎಣಿಕೆಯ ಅವಧಿಯಾಗಿದೆ.
ಮುಂಗಾರು-ವಿಳAಬ ಜುಲೈ ೧ ರಿಂದ ಆಗಸ್ಟ್ ೩೧ ಋತುವಾರು ಕಾಲಾವಧಿ. ಸೆಪ್ಟೆಂಬರ್ ೧ ರಿಂದ ಸೆಪ್ಟೆಂಬರ್ ೯ರ ವರೆಗೆ ಟಿಆರ್‌ಎಸ್ ಗ್ರಾಮಗಳ ಬೆಳೆ ಎಣಿಕೆಯ ಅವಧಿ ಮತ್ತು ಸೆಪ್ಟೆಂಬರ್-೧ ರಿಂದ ಸೆಪ್ಟೆಂಬರ್ ೩೦ರ ವರೆಗೆ ಎಲ್ಲಾ ಗ್ರಾಮಗಳ ಬೆಳೆ ಎಣಿಕೆಯ ಅವಧಿಯಾಗಿದೆ.
ಹಿಂಗಾರು ಋತುವಾರುವಿನಲ್ಲಿ ಸೆಪ್ಟೆಂಬರ್ ೧ ರಿಂದ ಡಿಸೆಂಬರ್ ೩೧ ಋತುವಾರು ಕಾಲಾವಧಿ. ಜನವರಿ ೧ ರಿಂದ ಜನವರಿ ೯ರ ವರೆಗೆ ಟಿಆರ್‌ಎಸ್ ಗ್ರಾಮಗಳ ಬೆಳೆ ಎಣಿಕೆಯ ಅವಧಿ ಮತ್ತು ಜನವರಿ ೧ ರಿಂದ ಜನವರಿ ೩೧ರ ವರೆಗೆ ಎಲ್ಲಾ ಗ್ರಾಮಗಳ ಬೆಳೆ ಎಣಿಕೆಯ ಅವಧಿಯಾಗಿದೆ.
ಬೇಸಿಗೆ ಋತುವಾರುವಿನಲ್ಲಿ ಜನವರಿ ೧ ರಿಂದ ಮಾರ್ಚ್ ೩೧ ಋತುವಾರು ಕಾಲಾವಧಿ. ಏಪ್ರಿಲ್ ೧ ರಿಂದ ಏಪ್ರಿಲ್ ೯ರ ವರೆಗೆ ಟಿಆರ್‌ಎಸ್ ಗ್ರಾಮಗಳ ಬೆಳೆ ಎಣಿಕೆಯ ಅವಧಿ ಮತ್ತು ಏಪ್ರಿಲ್ ೧ ರಿಂದ ಏಪ್ರಿಲ್ ೩೦ರ ವರೆಗೆ ಎಲ್ಲಾ ಗ್ರಾಮಗಳ ಬೆಳೆ ಎಣಿಕೆಯ ಅವಧಿಯಾಗಿದೆ ಎಂದು ವಿವರಿಸಿದರು.
ಜನನ ಮರಣ ನೋಂದಣಿ ಅಧಿನಿಯಮ ೧೯೬೯ರ ಕಾಯ್ದೆಯಡಿ ಜನನ ಮರಣ ಮತ್ತು ನಿರ್ಜೀವ ಜನನದ ನೋಂದಣಿಯನ್ನು ಕಡ್ಡಾಯ ಮಾಡಿಲಾಗಿದೆ. ಜನನ ಮರಣ ನೋಂದಣಿ ಘಟನೆ ಸಂಭವಿಸಿದ ೨೧ ದಿನಗಳ ಒಳಗೆ ಉಚಿತವಾಗಿ ನೋಂದಣಿ ಮಾಡಬೇಕು. ರಾಜ್ಯದಲ್ಲಿ ಜನನ ಮರಣ ನೋಂದಣಿ ಕಾರ್ಯವನ್ನು ಇ-ಜನ್ಮ ಆನ್‌ಲೈನ್ ತಂತ್ರಾAಶದ ಮೂಲಕ ಅನುಷ್ಠಾನಗೊಳಿಸಲಾಗಿದೆ. ವಿಳಂಬ ನೋಂದಣಿಗೆ ಸಂಬAಧಿಸಿದAತೆ ೩೦ ದಿನಗಳ ತರುವಾಯ ೧ ವರ್ಷದೊಳಗೆ ನೋಂದಾಯಿಸುವ ಘಟನೆಗಳಿಗೆ ವಿಧಾಯಕ ಪ್ರಾಧಿಕಾರಿಯ ಲಿಖಿತ ಅನುಮತಿ, ೧ ವರ್ಷದ ನಂತರ ನೋಂದಾಯಿಸುವ ಘಟನೆಗಳಿಗೆ ಮೊದಲನೆಯ ವರ್ಗದ ದಂಡಾಧಿಕಾರಿಯ ಆದೇಶ ಸಂಖ್ಯೆಯನ್ನು ದಾಖಲಿಸಲು ಹಾಗೂ ಅದರ ಪ್ರತಿಯನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದ್ದು ಅದರಂತೆ ಕ್ರಮ ವಹಿಸಲು ತಿಳಿಸಿದರು.
ಹೊಸ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅವುಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಅಗತ್ಯವಿರುವ ತಾಲ್ಲೂಕು/ಗ್ರಾಮ ಮಟ್ಟದ ದತ್ತಾಂಶವನ್ನು ಒದಗಿಸುವುದು. ಸಾಗುವಳಿ ಹಿಡುವಳಿಗಳ ಸಂಖ್ಯೆ ಮತ್ತು ವಿಸ್ತೀರ್ಣ, ಭೂ ಬಳಕೆ, ಬೆಳೆ ವಿಧಾನ, ಇನ್‌ಪುಟ್ ಬಳಕೆಯ ವಿಧಾನ ಇತ್ಯಾದಿಗಳ ಆಧಾರದ ಮೇಲೆ ಕೃಷಿ ಕ್ಷೇತ್ರದ ರಚನೆ ಮತ್ತು ಗುಣಲಕ್ಷಣಗಳನ್ನು ವಿವರಿಸಲು ಹಾಗೂ ಭವಿಷ್ಯದ ಕೃಷಿ ಸಮೀಕ್ಷೆಗಳನ್ನು ಕೈಗೊಳ್ಳಲು ಸಾಗುವಳಿ ಹಿಡುವಳಿಗಳ ಅಂಕಿ ಅಂಶಗಳ ಚೌಕಟ್ಟನ್ನು ಒದಗಿಸುವುದು ಕೃಷಿ ಗಣತಿಯ ಉದ್ದೇಶವಾಗಿದೆ ಎಂದರು.
ಕೃಷಿ ಗಣತಿಯ ಹಿನ್ನಲೆ ೧ನೇ ಕೃಷಿ ಗಣತಿ ೧೯೭೦-೭೧/ಕಳೆದ ಕೃಷಿ ಗಣತಿ ೨೧೫-೧೬, ಪಂಚವಾರ್ಷಿಕವಾಗಿ ನಡೆಸಲಾಗುತ್ತಿದೆ. ಹಿಡುವಳಿದಾರರ ಗಾತ್ರದ ವರ್ಗವಾರು ದತ್ತಾಂಶವನ್ನು ಕಲೆ ಹಾಕಲು ಇರುವ ಏಕೈಕ ಮಾರ್ಗ. ದತ್ತಾಂಶ ತಾಲ್ಲೂಕು/ಗ್ರಾಮ ಮಟ್ಟದವರೆಗೆ ಲಭ್ಯವಿರುತ್ತದೆ ಹಾಗೂ ದತ್ತಾಂಶವನ್ನು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಬಳಕೆದಾರರು ಉಪಯೋಗಿಸುತ್ತಾರೆ ಎಂದು ತಿಳಿಸಿದರು.
೨೦೨೧-೨೨ರ ಕೃಷಿ ಗಣತಿಯ ಪ್ರಮುಖ ಲಕ್ಷಣಗಳಲ್ಲಿ ದತ್ತಾಂಶ ಸಂಗ್ರಹಣೆಯ ಸಮಯದಲ್ಲಿ ವಿವಿಧ ಮಾಪಕಗಳಾದ ಹೆಕ್ಟೇರ್, ಎಕರೆ-ಗುಂಟಾ, ವಿವಿಧ ಪ್ರದೇಶದ ವಿಸ್ತೀರ್ಣ ಘಟಕಗಳನ್ನು ಪರಿಗಣಿಸುವುದು. ಎಲ್‌ಜಿಡಿ ಮಾಸ್ಟರ್‌ಗಳೊಂದಿಗೆ ಕೃಷಿಗಣತಿ ಜಿಲ್ಲೆ. ತಾಲ್ಲೂಕು ಮತ್ತು ಹಳ್ಳಿಗಳ ನಡುವೆ ಮ್ಯಾಪಿಂಗ್ ಮಾಡುವುದು. ನಮೂನೆಯಲ್ಲಿನ ಕ್ಷೇತ್ರಗಳ ಶೀರ್ಷಿಕೆಯು ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿರುತ್ತದೆ. ಆನ್‌ಲೈನ್ ಸಹಾಯ ಮತ್ತು ಕಾರ್ಯಾಚರಣೆಯ ವೀಡಿಯೋ ಟ್ಯೂಟೋರಿಯಲ್ ಒದಗಿಸಲಾಗುವುದು. ಡ್ಯಾಶ್‌ಬೋರ್ಡ್-ರಾಜ್ಯದಿಂದ ಗ್ರಾಮ ಮಟ್ಟಕ್ಕೆ ದತ್ತಾಂಶ ಸಂಗ್ರಹಿಸುವಿಕೆಯು/ಗಣತಿ ಪ್ರಗತಿಯನ್ನು ಪಡೆಯಬಹುದಾಗಿದೆ ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕಿ ಅನಿತಾ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments