Friday, April 19, 2024
spot_img
HomeRamnagarಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ :ಶಿವಾನಂದ ಮೂರ್ತಿ

ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ :ಶಿವಾನಂದ ಮೂರ್ತಿ

ಪಾಲಾರ್ ಪತ್ರಿಕೆ | Palar Patrike

ರಾಮನಗರ:ನವೆಂಬರ್ 6 ಮಹತ್ವಪೂರ್ಣವಾದ ಸುದಿನ,  ಸಂಹಿದಾನ ಆಚರಣೆಗೆ ಬಂದ ಸುದಿನ, ಆದ್ದರಿಂದ ಈ ದಿನವನ್ನು  ಜಾನಪದ ಕಲಾತಂಡದ  ಮೂಲಕ ಜನಪರ ಉತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು.

ಅವರು ಇಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ  ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ ರಚನೆಯಾದಂತ ಸಂವಿಧಾನವನ್ನು ಅಂಗೀಕಾರ ಮಾಡಿದಂತಹ ದಿನವನ್ನು ಇಂದು ಆಚರಿಸಲಾಗುತ್ತಿದೆ ಎಂದರು.

ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಬೆಳಸಿ ಮುಂದಿನ ಪೀಳಗೆಯವರೆಗೆ ಹೋಗುವಂತೆ ಮಾಡುವುದು  ಮಹತ್ವಪೂರ್ಣವಾಂದಂತ ವಿಚಾರವಾಗಿದೆ ಎಂದರು.

 ಸಾವಿರಾರು ವರ್ಷಗಳ ಹಿಂದಿನಿಂದಲೂ ಇತಿಹಾಸ ಉಳ್ಳ ಭಾಷೆ ನಮ್ಮ ಕನ್ನಡ ಭಾಷೆಯಾಗಿದೆ.  ಕನ್ನಡ ಭಾಷೆಯನ್ನು ಎಲ್ಲರೂ ಸೇರಿ  ಬೆಳೆಸಬೇಕು, ಭಾಷೆಯ ಜೊತೆಗೆ ಜಾನಪದ ಕಲೆ ಹಾಗೂ ಸಂಸೃತಿಯನ್ನು ಸಹ ಮುಂದಿನ ಪೀಳಿಗೆಯವರಿಗೆ  ಬೆಳೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಗಮಸಂಗೀತ, ಜಾನಪದ ಗೀತೆ, ಸೋಬಾನೆ ಪದ, ತತ್ವಪದ, ಗೀತಗಾಯನ, ರಂಗಗೀತೆ, ತಂಬೂರಿ, ಮೈಸೂರು ನಗಾರಿ, ಡೊಳ್ಳು , ಕಂಸಾಳೆ, ತಮಟೆವಾದನ , ಚರ್ಮವಾದ್ಯ, ಚಿಟ್ಟಿಮೇಳ ಹಾಗೂ ಸೋಮನ ಕುಣಿತ ತಂಡಗಳು ಕಲಾ ಪ್ರದರ್ಶನ ನೀಡಿದವು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಬನ್ನಿಕುಪ್ಪೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳಿಂದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ, ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹೇಮಂತ್ ಮತ್ತು ಮೂರ್ತಿ ನಾಯಕ್, ಅಂಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸ್ವಾಮಿ,  ರಣಧೀರ ಪಡೆಯುವ ರಾಜ್ಯ ಉಪಾಧ್ಯಕ್ಷ ಗೋವಿಂದರಾಜು , ದಲಿತ ಮುಂಖಡರುಗಳಾದ ವೆಂಕಟೇಶ್, ಶ್ರೀನಿವಾಸ್ ಮೂರ್ತಿ, ಹೊಂಬಾಳಯ್ಯ,ಕೇತುಹಳ್ಳಿ ಶಿವಲಿಂಗಯ್ಯ  ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ರಮೇಶ್, ಕಲಾಸಂಘಟಕರು ಡಾ.ಜಯಸಿಂಹ , ಕಲಾವಿದರಾದ ಪುಟ್ಟಣ್ಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕ ರಮೇಶ್ ಬಾಬು ಟಿ.ಜಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments