Friday, April 19, 2024
spot_img
HomeRamnagarಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಿಂದ ಮೂತ್ರಪಿಂಡ ವಿನಿಮಯ : ಕಸಿ ಶಾಸ್ತ್ರ ಚಿಕಿತ್ಸೆಯಿಂದ ಎರಡು ಜೀವಗಳ...

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಿಂದ ಮೂತ್ರಪಿಂಡ ವಿನಿಮಯ : ಕಸಿ ಶಾಸ್ತ್ರ ಚಿಕಿತ್ಸೆಯಿಂದ ಎರಡು ಜೀವಗಳ ರಕ್ಷಣೆ

ಪಾಲಾರ್ ಪತ್ರಿಕೆ | Palar Pathrike

ರಾಮನಗರ: ರಾಜ್ಯದಲ್ಲಿ ಮೊದಲ ಬಾರಿಗೆ ಆಸ್ಪತ್ರೆಗಳ ನಡುವೆ ಕಸಿ ವಿನಿಮಯ ಅಥವಾ ಎರಡು ಕುಟುಂಬಗಳ ಜೋಡಿ ವಿನಿಮಯದ ವಿನೂತನ ವಿಧಾನಗಳಿಂದಾಗಿ 53 ವರ್ಷದ ಗೃಹಿಣಿ ಲಕ್ಷಿ÷್ಮ ಎಸ್. ಆಚಾರ್ಯ ಮತ್ತು 39 ವರ್ಷದ ವಾಹನ ಚಾಲಕ ರುದ್ರ ಪ್ರಸಾದ್ ಮೂತ್ರಪಿಂಡ ಕಸಿ ಶಸ್ತçಚಿಕಿತ್ಸೆಗೆ ಒಳಗಾಗಿ ಹೊಸ ಬದುಕು ಆರಂಭಿಸಲು ಸಾಧ್ಯವಾಗಿದೆ.
ಎರಡು ಕುಟುಂಬಗಳ ನಡುವೆ ಮಾನವೀಯ ಬೆಸುಗೆ ಮತ್ತು ವೈದ್ಯಕೀಯ ಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಗೂ ಮತ್ತೊಂದು ಆಸ್ಪತ್ರೆಗಳು. ರೋಗಿಗಳ ಜೀವ ರಕ್ಷಣೆಗಾಗಿ ವಿಶೇಷ ಕಾರ್ಯವಿಧಾನ ಅನುಸರಿಸಿ ವೈದ್ಯಕೀಯ ಲೋಕದಲ್ಲಿ ಹೊಸ ಬಾಂಧವ್ಯದ ಹೊಸ ಆಯಾಮವನ್ನು ಇವು ಸೃಷ್ಟಿಸಿವೆ.
ಲಕ್ಷಿ÷್ಮ ಅವರಿಗೆ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಮೂತ್ರಪಿಂಡ ಶಾಸ್ತçಜ್ಞ, ಹಿರಿಯ ಸಲಹೆಗಾರರು ಹಾಗೂ ಎಚ್‌ಒಡಿ ಡಾ. ಬಿ.ಟಿ. ಅನಿಲ್ ಕುಮಾರ್, ಹಿರಿಯ ಮೂತ್ರಶಾಸ್ತç ತಜ್ಞ ಸಲಹೆಗಾರರು ಮತ್ತು ಕಸಿ ಶಸ್ತçಚಿಕಿತ್ಸಕ ಡಾ. ಎಸ್. ನರೇಂದ್ರ ಅವರು ಯಶಸ್ವಿಯಾಗಿ ಶಸ್ತçಚಿಕಿತ್ಸೆ ನಡೆಸಿದರೆ, ರುದ್ರಪ್ರಸಾದ್ ಅವರಿಗೆ ಅದೇ ದಿನ ಮತ್ತೊಂದು ಆಸ್ಪತ್ರೆಯಿಂದ ಶಸ್ತçಚಿಕಿತ್ಸೆ ನೆರವೇರಿಸಲಾಯಿತು.
ರುದ್ರ ಪ್ರಸಾದ್ ಅವರ ತಂದೆ ಶಿವಶಂಕರಪ್ಪ ಮತ್ತು ಲಕ್ಷಿ÷್ಮ ಅವರ ಪತಿ ಶ್ರೀಶಾ ಈ ಇಬ್ಬರ ಮೂತ್ರಪಿಂಡ ದಾನಿಗಳ ರಕ್ತದ ಗುಂಪಿನ ನಡುವೆ ಹೊಂದಿಕೆಯಾಗಿದ್ದರೂ ಮೂತ್ರಪಿಂಡ ಸ್ವೀಕರಿಸುವವರ ಸಕಾರಾತ್ಮಕ ಕ್ರಾಸ್ ಮ್ಯಾಚ್ ಫಲಿತಾಂಶ ಹೊಂದಿಕೆಯಾಗದ ಕಾರಣ ಅಂಗಾAಗ ದಾನ ಸಾಧ್ಯವಾಗಿರಲಿಲ್ಲ.
ಎರಡು ಆಸ್ಪತ್ರೆಗಳ ನಡುವೆ ಸಕಾರಾತ್ಮಕವಾಗಿ ಮೂತ್ರಪಿಂಡ ವಿನಿಮಯವಾದ ಯಶಸ್ಸಿನ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಮೂತ್ರಪಿಂಡ ಶಾಸ್ತçಜ್ಞ, ಹಿರಿಯ ಸಲಹೆಗಾರರು ಹಾಗೂ ಎಚ್‌ಒಡಿ ಡಾ. ಬಿ.ಟಿ. ಅನಿಲ್ ಕುಮಾರ್, ‘ಲಕ್ಷಿ÷್ಮ ಅವರು ಮೂತ್ರಪಿಂಡ ರೋಗದ ಕೊನೆಯ ಹಂತದಲ್ಲಿದ್ದರು. ಅವರ ಪತಿ ಅಂಗಾAಗ ದಾನ ಮಾಡಲು ತೀರ್ಮಾನಿಸಿದ್ದರೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರನ್ನು ಕಸಿ ವಿನಿಮಯ ವ್ಯವಸ್ಥೆಯಡಿ ಶಸ್ತçಚಿಕಿತ್ಸೆ ಮಾಡಲು ನಮ್ಮ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ಮೂರು ಆಯ್ಕೆಗಳಿದ್ದವು. ಒಂದು ಡಿಸೆನ್ಸಿಟೈಸೇಶನ್ ಚಿಕಿತ್ಸೆ ನಿರ್ವಹಿಸುವ ಮೂಲಕ ಅದೇ ದಾನಿಯೊಂದಿಗೆ ಮುಂದುವರೆಯುವುದು, ಎರಡನೆಯದಾಗಿ ಹೊಂದಾಣಿಕೆಯಾಗುವ ಜೋಡಿಯನ್ನು ಪತ್ತೆ ಮಾಡುವುದು, ಮೂರನೆಯದಾಗಿ ಶವದ ಅಂಗಾAಗ ಕಸಿಗಾಗಿ ನೋಂದಣಿ ಮಾಡುವ ಆಯ್ಕೆಗಳಿದ್ದವು. ಈ ಪ್ರಕ್ರಿಯೆ ಇನ್ನೂ 3 ರಿಂದ 5 ವರ್ಷ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಲಕ್ಷಿ÷್ಮ ಅವರು ಯಶಸ್ವಿಯಾಗಿ ಸಂವೇದನಾಶೀಲತೆ ಹೊಂದಲು ಸಾಧ್ಯವಾಗಿರಲಿಲ್ಲ, ಏಕೆಂದರೆ ಆಕೆ ಪತಿ ವಿರುದ್ಧ ಹಲವಾರು ಪ್ರತಿಕಾಯಗಳನ್ನು ಹೊಂದಿದ್ದರು. ಪ್ರತಿಕಾಯಗಳು ಕಡಿಮೆ ಪ್ರಮಾಣದಲ್ಲಿದ್ದಾಗ ಮಾತ್ರ ಡಿಸೆನ್ಸಿಟೈಸೇಶನ್ ಮಾಡಲು ಸಾಧ್ಯ. ಅದೃಷ್ಟವೆಂದರೆ ಮತ್ತೊಂದು ಆಸ್ಪತ್ರೆಯಲ್ಲಿ ಅಂತಹ ಇನ್ನೊಂದು ಜೋಡಿ ಇರುವುದು ತಿಳಿಯಿತು. ಅಲ್ಲಿನ ಮೂತ್ರಪಿಂಡ ಶಾಸ್ತçಜ್ಞರ ಜೊತೆ ಸಮಾಲೋಚಿಸಿ ಎರಡೂ ಕುಟುಂಬಗಳನ್ನು ಭೇಟಿಯಾಗಿ ಚರ್ಚಿಸಿ ಒಪ್ಪಿಗೆ ಪಡೆದ ನಂತರ ಪರಸ್ಪರ ಮೂತ್ರಪಿಂಡ ವಿನಿಮಯಕ್ಕೆ ಮುಂದಾದೆವು? ಎಂದರು.
ಎರಡು ಕುಟುಂಬಗಳ ನಡುವೆ ಕಸಿ ಮಾಡಲು ದಾನಿಗಳ ವಿನಿಮಯಕ್ಕಾಗಿ ಕರ್ನಾಟಕ ರಾಜ್ಯ ಸಮಿತಿಯ ಅನುಮೋದನೆ ಮತ್ತು ಮುಂದಾಲೋಚನೆಯ ಕ್ರಮದಿಂದ ಇದು ಸಾಧ್ಯವಾಯಿತು. ಜೊತೆಗೆ ದೀರ್ಘಕಾಲದ ಶೀತ ರಕ್ತ ಕೊರತೆಯ ಅಪಾಯವನ್ನು ತಿಳಿಗೊಳಿಸಲು, ಮೂತ್ರಪಿಂಡ ಸ್ವೀಕರಿಸುವವರು ಹಾಗೂ ಅನುಗುಣವಾದ ದಾನಿಗಳಿಗೆ ಅದೇ ಸೌಲಭ್ಯದಲ್ಲಿ ಶಸ್ತçಚಿಕತ್ಸೆ ಮಾಡಬೇಕಾಗಿತ್ತು.
ಕರ್ನಾಟಕದಲ್ಲಿ ಅಂಗಾAಗ ಕಸಿಗಾಗಿ ಒಂದು ಲಕ್ಷ ಮಂದಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 10 ಸಾವಿರ ಮೂತ್ರಪಿಂಡ ಕಸಿ ಮಾಡಲಾಗಿದ್ದು, ಅಮೆರಿಕ ನಂತರ ಎರಡನೇ ಸ್ಥಾನದಲ್ಲಿದೆ. 2022 ರಲ್ಲಿ 152 ಶವದ ಅಂಗಾAಗ ದಾನ ಮಾಡಲಾಗಿದ್ದು, ತಮಿಳುನಾಡಿನ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಬೆಂಗಳೂರು ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಲಸ್ಟರ್ ಸಿಒಒ ಬಿಜು ನಾಯರ್ ಮಾತನಾಡಿ, ಜೀವಂತ ದಾನಿಯಿಂದ ಮೂತ್ರಪಿಂಡ ಕಸಿಗೆ ಅಗತ್ಯವಿರುವ ಅಂಶಗಳ ಹೊಂದಾಣಿಕೆಯನ್ನು ಪತ್ತೆ ಮಾಡುವ ಮತ್ತು ಜೋಡಿ ವಿನಿಮಯ ಕ್ರಮಗಳಿಂದ ಹೆಚ್ಚು ಅನುಕೂಲವಿದೆ. ಅಂಗಾAಗ ದಾನಕ್ಕೆ ಸಜ್ಜಾಗಿರುವ ದಾನಿಗಳ ಮೂತ್ರಪಿಂಡ ಹೊಂದಾಣಿಕೆಯಾಗದ ಸಂದರ್ಭದಲ್ಲಿ ಇಂತಹ ವಿನೂತನ ಪ್ರಕ್ರಿಯೆಯಿಂದ ಸಮಯ ಉಳಿಸಬಹುದಾಗಿದೆ. ಮೂತ್ರಪಿಂಡ ವಿನಿಮಯದ ಬಗ್ಗೆ ಜನಜಾಗೃತಿಯಿಂದ ಹೆಚ್ಚಿನ ದಾನಿಗಳನ್ನು ಉತ್ತೇಜಿಸಲು ಸಾಧ್ಯವಾಗಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಹಿರಿಯ ಮೂತ್ರಶಾಸ್ತç ತಜ್ಞ ಸಲಹೆಗಾರರು ಮತ್ತು ಕಸಿ ಶಸ್ತçಚಿಕಿತ್ಸಕ ಡಾ. ಎಸ್. ನರೇಂದ್ರ, ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಲಸ್ಟರ್ ವೈದ್ಯಕೀಯ ನಿರ್ದೇಶಕರಾದ ಡಾ. ಸ್ಮಿತಾ ತಮ್ಮಯ್ಯ, ಮೂತ್ರಪಿಂಡ ದಾನಿಗಳು, ಮೂತ್ರಪಿಂಡ ಕಸಿಗೆ ಒಳಗಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments