Thursday, May 23, 2024
spot_img
HomeMandyaಕಬ್ಬು ಬೆಳೆಗಾರರಿಗೆ, ನಾನಾ ರಾಜ್ಯಗಳಲ್ಲಿ ನೀಡುತ್ತಿರುವ ಪ್ರೋತ್ಸಾಹ ಧನವನ್ನು ರಾಜ್ಯದ ಬೆಳೆಗಾರರಿಗೂ ನೀಡುವಂತೆ ಸಿಎಂಗೆ ಒತ್ತಾಯ

ಕಬ್ಬು ಬೆಳೆಗಾರರಿಗೆ, ನಾನಾ ರಾಜ್ಯಗಳಲ್ಲಿ ನೀಡುತ್ತಿರುವ ಪ್ರೋತ್ಸಾಹ ಧನವನ್ನು ರಾಜ್ಯದ ಬೆಳೆಗಾರರಿಗೂ ನೀಡುವಂತೆ ಸಿಎಂಗೆ ಒತ್ತಾಯ

ಪಾಲಾರ್ ಪತ್ರಿಕೆ | Palar Patrike

ಮಂಡ್ಯ : ಕಬ್ಬು ಬೆಳೆಗಾರರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದು ಅವರ ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿ ಉತ್ತಮಗೊಳ್ಳಲು ಸರ್ಕಾರ ಕೂಡಲೇ ದೇಶದ ನಾನಾ ರಾಜ್ಯಗಳಲ್ಲಿ ನೀಡುತ್ತಿರುವ ಹಾಗೆ ಪ್ರೋತ್ಸಾಹ ಧನವನ್ನು ಈ ಕೂಡಲೇ ನೀಡಬೇಕೆಂದು ನಗರದ ವಿಶ್ವೇಶ್ವ ರಯ್ಯ ಪ್ರತಿಮೆ ಬಳಿಯಿಂದ ಜಿಲ್ಲಾಧಿ ಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಪತ್ರ ವನ್ನು ರವಾನಿಸಲಾಯಿತು.
ನಗರದಲ್ಲಿ ಮೈ ಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ಕಬ್ಬಿನ ಬೆಳೆಗೆ ರಾಜ್ಯ ಸಲಹಾ ಬೆಲೆಯನ್ನು ಕೊಟ್ಟು ರಾಜ್ಯದ ಕಬ್ಬು ಬೆಳೆಗಾರರ ಹಿತರಕ್ಷಣೆ ಮಾಡಬೇಕೆಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದೆ.
ಕಬ್ಬಿನ ಉಪ ಉತ್ಪನ್ನಗಳಿಂದ ನಾನ ರೀತಿಯ ತೆರಿಗೆಗಳ ಮೂಲಕ ವಾರ್ಷಿಕ 30,000 ಕೋಟಿಗಳನ್ನು ಸಂಗ್ರಹಿಸುತ್ತಿರುವ ಸರ್ಕಾರ ಇಂದು ಕೃಷಿಕಾರ್ಮಿಕರ ವೇತನ ರಾಸಾಯನಿಕ ಗೊಬ್ಬರಗಳ ಹೆಚ್ಚಳ ಹಾಗೂ ಕೃಷಿ ಪರಿಕರಗಳ ಬೆಲೆ ಹೆಚ್ಚಳ ದಿಂದ ಸುಮಾರು 15 ವರ್ಷಗಳಿಂದ ಇಲ್ಲಿಯವರೆಗೆ ಕೃಷಿ ಉತ್ಪಾದನೆ ವೆಚ್ಚ ಶೇಕಡ 38 ಕ್ಕೂ ಹೆಚ್ಚಾಗಿದ್ದು ಇದೇ ಸಮಯ ದಲ್ಲಿ ಕಬ್ಬಿನ ಬೆಲೆ ಶೇಕಡ ಎರಡರಷ್ಟು ಮಾತ್ರ ಹೆಚ್ಚಾಗಿದ್ದು ಹೀಗೆ ಉತ್ಪಾದನೆ ವೆಚ್ಚ ಮತ್ತು ಬೆಲೆಗಳಿಗೆ ಸಿಗುತ್ತಿರುವ ಬೆಲೆ ಎರಡರಲ್ಲೂ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಮೈ ಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಗೌರವ ಅಧ್ಯಕ್ಷರಾದ ಕಿಲಾರ ಕೃಷ್ಣ ಎಸ್ ಆರ್ ರವಿ, ಹೆಮ್ಮಿಗೆ ಚಂದ್ರಶೇಖರ್, ತುಳಸಿ ಧರ್, ಇಂಡುವಾಳು ಬಸವರಾಜು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಕೋಣನ ಹಳ್ಳಿ ರುದ್ರೇಶ್, ಹೇಮಂತ್ ಕನ್ನಲಿ ದೇವರಾಜು ಇನ್ನಿತರರು ಭಾಗವಹಿಸಿದ್ದರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments