Friday, April 19, 2024
spot_img
HomeChikballapurಈಶ್ವರಪ್ಪ ರವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ಮನವಿ

ಈಶ್ವರಪ್ಪ ರವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ಮನವಿ

ಗುಡಿಬಂಡೆ: ದೇಶದ್ರೋಹಿ ಹೇಳಿಕೆ ನೀಡಿರುವ ಕೆ.ಎಸ್. ಈಶ್ವರಪ್ಪ ರವರನ್ನು ಕೂಡಲೆ ಸಚಿವ ಸಂಪುಟದಿAದ ವಜಾ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿ ರಾಜ್ಯಪಾಲರಿಗೆ ತಲುಪಿಸುವಂತೆ ಗ್ರೇಡ್-2 ತಹಶೀಲ್ದಾರ್ ಮಹೇಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ವಿರುದ್ದ ದಿಕ್ಕಾರಗಳನ್ನು ಕೂಗುತ್ತಾ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡ ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಕೆಂಪುಕೋಟೆ ಮೇಲೆ ರಾಷ್ಟçಧ್ವಜವನ್ನು ಇಳಿಸಿ ಕೆಂಪು ಧ್ವಜವನ್ನು ಹಾರಿಸುತ್ತೇವೆಂದು ದೇಶ ದ್ರೋಹಿ ಹೇಳಿಕೆ ನೀಡಿರುವ ಕೆ ಎಸ್ ಈಶ್ವರಪ್ಪ ರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಕೂಡಲೇ ಸಂಪುಟ ಸಭೆಯಿಂದ ವಜಾ ಮಾಡಿ ದೇಶವನ್ನು ಕಾಪಾಡಬೇಕೆಂದು ಒತ್ತಾಯಿಸಿದರು. ತ್ರಿವರ್ಣ ಧ್ವಜ ನಮ್ಮ ರಾಷ್ಟçದ ಸ್ವಾತಂತ್ರö್ಯ ಅಖಂಡತೆ, ಸಾರ್ವಭೌಮತೆ ಅಸ್ವಿತ್ವಮತ್ತು ಸಂವಿದಾನಗಳ ಸಂಕೇತವಾಗಿದ್ದು ಇಂತಹ ಪವಿತ್ರವಾದ ರಾಷ್ಟç ಧ್ವಜವನು ತೆಗೆದು ಕೆಸರಿ ಧ್ವವನ್ನು ಹಾರಿಸುತ್ತೇವೆಂದು ಹೇಳಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಮಾನ್ಯ ಮುಖ್ಯಮಂತ್ರಿಗಳು ಯೋಚಿಸಬೇಕಾಗಿದೆ. ಇಂದು ನಮ್ಮ ಸ್ವಾತಂತ್ರö್ಯಕ್ಕಾಗಿ ಅನೇಕ ಮಹನೀಯರು ಪ್ರಾಣ ತ್ಯಾಗ ಮಾಡಿರುವುದರಿಂದ ಇಂದು ಕೆಂಪುಕೋಟೆ ಮೇಲೆ ರಾಷ್ಟಿçà ಧ್ವಜ ಆರಾಡುತ್ತಿದೆ ಇಂತಹ ಪವಿತ್ರವಾದ ಧ್ವಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ತುಂಬಾ ಅಪರಾಧ ಆದ್ದರಿಂದ ಕೂಡಲೇ ಅವರನ್ನು ಸಂಪುಟ ಸಭೆಯಿಂದ ಕೈಬಿಡಬೇಕಾಗಿ ಮಾನ್ಯ ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದೇವೆಂದು ತಿಳಿಸಿದರು.

ನಂತರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣೆಗೌಡ ಮಾತನಾಡಿ, ಸಂವಿದಾನವನ್ನು ರಕ್ಷಣೆ ಮಾಡುವಂತಹ ಈಶ್ವರಪ್ಪ ರವರೇ ಇಂತಹ ದೇಶ ದ್ರೋಹಿ ಹೇಳಿಕೆ ಕೊಟ್ಟು, ಸಂವಿದಾನಕ್ಕೆ ದಕ್ಕೆ ಆಗುವಂAತೆ ಮಾಡಿದ್ದಾರೆ ಇಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಸೂಕ್ತ ಶಿಕ್ಷೆ ನೀಡಬೇಕಾಗಿದೆ. ನಮ್ಮ ಪವಿತ್ರ ಭಾರದಲ್ಲಿ ಧರ್ಮ ಧರ್ಮಗಳ ನಡುವೆ ಕಿತ್ತಾಟಯಿಟ್ಟು ಇಂದು ದೇಶದಲ್ಲಿ ಕೊಲೆಗಳು ನಡೆಯುವಂತೆ ಮಾಡುತ್ತಿದ್ದಾರೆ ಇದನ್ನು ನಮ್ಮ ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಆದ್ದರಿಂದ ಕೂಡಲೇ ಇವರನ್ನು ಸಂಪುಟ ಸಭೆಯಿಂದ ಕೈಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕು ಸಿದ್ದವಾಗಿದ್ದೇವೆ ಈಗಾಗಲೇ ವಿಧಾನ ಸಭೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಿಂದ ಅನಿರ್ಧಿಷ್ಟ ಧರಣಿ ಹಮ್ಮಿಕೊಂಡಿದ್ದಾರೆ ಅವರನ್ನು ವಜಾ ಮಾಡುವವರೆಗೂ ನಾವು ಪ್ರತಿಬಟನೆಗಳನ್ನು ಮಾಡುತ್ತಿರುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಘನಾಥತೆಡ್ಡಿ, ಆದಿರೆಡ್ಡಿ, ಪಾವಜೇನಹಳ್ಳಿ ನಾಗರಾಜರೆಡ್ಡಿ, ಕಡೇಹಳ್ಳಿ ಬಾಲಕೃಷ್ಣರೆಡ್ಡಿ, ಯುವ ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ಅಂಬರಿಶ್, ಹಂಪಸAದ್ರ ಆದಿನಾರಾಯಣಪ್ಪ, ನಯಾಜ್ ಪಾಷ, ರಿಯಾಜ್ ಪಾಷ, ಅಂಬರಿಶ್, ವಿಕಾಸ್, ರಾಜೇಶ್, ನಂಜುAಡಪ್ಪ, ಗಂಗರಾಜು, ಹಳೇ ಗುಡಿಬಂಡೆ ಮಂಜುನಾಥರೆಡ್ಡಿ, ಸೈಯಾದ್ ಮನ್ಸೂರ್, ರಿಯಾಜ್ ಪಾಷ, ರಮೇಶ್, ಸಿ ಆರ್ ನಾರಾಯಸ್ವಾಮಿ, ನವೀನ್ ಸೇರಿ ಹಲವು ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments