Friday, February 3, 2023
spot_img
HomeChikballapurಶಾಸಕರ ಅಭಿವೃದ್ಧಿ ಶೂನ್ಯ : ಆರೋಪ

ಶಾಸಕರ ಅಭಿವೃದ್ಧಿ ಶೂನ್ಯ : ಆರೋಪ

ಪಾಲಾರ್ ಪಾತ್ರಿಕೆ | Palar pathrike 

ಗುಡಿಬಂಡೆ : ಶಾಸಕ ಎಸ್.ಸುಬ್ಬಾರೆಡ್ಡಿ ಕ್ಷೇತ್ರದಲ್ಲಿ ೧೦ ರ‍್ಷದ ಆಡಳಿತ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆಂದು ಸಮಾಜ ಸೇವಕ ಹಾಗೂ ಪಕ್ಷೇತರ ಅಭ್ರ‍್ಥಿ ಆರ್.ಮಿಥುನ್ ರೆಡ್ಡಿ ಆರೋಪಿಸಿದರು.

ಭಾನುವಾರ ಗುಡಿಬಂಡೆ ಪಟ್ಟಣದಲ್ಲಿ ಬೈಕ್ ರ‍್ಯಾಲಿ ಮಾಡಿ ನಂತರ ದಪ್ರ‍್ತಿ ಗ್ರಾಮದಲ್ಲಿ ಆಯೋಜಿಸಿದ್ದ ಸರ‍್ಪಡೆ ಕರ‍್ಯಕ್ರಮವನ್ನು ಉದ್ದೇಶಿ ಮಾತನಾಡಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಶಾಸಕರಾಗಿ ೧೦ ರ‍್ಷಗಳು ಆಗುತ್ತಿದೆ‌ ಆದರೆ ಕ್ಷೇತ್ರದಲ್ಲಿ ಇದುವರೆವುಗೂ ಒಂದು ಅಭಿವೃದ್ಧಿ ಕೆಲಸವನ್ನು ಸಹ ಮಾಡಿರುವುದಿಲ್ಲ, ಆದರೆ ಕೇವಲ ಸುಬ್ಬಾರೆಡ್ಡಿ ಮತ್ತು ಅವರ ಸಂಬಂಧಿಕರು ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ, ಈಗಾಗಲೇ ಕ್ಷೇತ್ರದ ಜನತೆ ಸುಬ್ಬಾರೆಡ್ಡಿಯನ್ನು ಸೋಲಿಸಬೇಕೆಂದು ಪಣತೊಟ್ಟಿದ್ದಾರೆ, ಅಭಿವೃದ್ಧಿ ಮಾಡದ ಶಾಸಕ ನಮಗೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಕ್ಷೇತ್ರದ ಜನತೆ ಎಚ್ಚೆತ್ತುಕೊಂಡು ಅವರಿಗೆ ಬುದ್ದಿ ಕಲಿಸಬೇಕಾಗಿದ್ದು ಈ ಭಾರಿ ನನಗೆ ಬೆಂಬಲ ನೀಡಿ, ನಾನು ಅಧಿಕಾರಿಗಳದಲ್ಲಿ ಇಲ್ಲದಿದ್ದರು ಸಹ ಅನೇಕ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಸ್ವಯಂ ಪ್ರೇರಿತರಾಗಿ ಯುವಕರು ಹಾಗೂ ಹಿರಿಯ ‌ಮುಖಂಡರು ನನಗೆ ಬೆಂಬಲ ನೀಡುತ್ತಿರುವುದು ಇನ್ನಷ್ಟು ಅಭಿವೃದ್ಧಿ ‌ಕೆಲಸಗಳನ್ನು ಮಾಡಲು ಸಹಕರಿಸಿದ್ದಾರೆ, ೧೧೦೦ ಮನೆಗಳಿರುವ ದಪ್ರ‍್ತಿ ಗ್ರಾಮದಲ್ಲಿ ಇದುವರೆವಿಗೂ ಶುದ್ದ ಕುಡಿಯುವ ನೀರು ಘಟಕ ಸ್ಥಾಪಿಸಿಲ್ಲ, ಆದ್ದರಿಂದ ಕೆಲವೇ ದಿನಗಳಲ್ಲಿ ಗ್ರಾಮದಲ್ಲಿ ಶುದ್ದಕುಡಿಯುವ ನೀರಿನ ಘಟಕ ಸ್ಥಾಪಿಸಲು ಆಶ್ವಾಸನೆ ನೀಡಿದರು.

ನಂತರ ಪಿ.ಎಸ್.ಎಸ್. ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ ಮಾತನಾಡಿ, ಜಿ.ವಿ.ಶ್ರೀರಾಮರೆಡ್ಡಿ ಶಾಸಕರಾಗಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸಗಳು ಬಿಟ್ಟರೇ ಬೇರೆ ಯಾವುದೇ ಕೆಲಸಗಳು ಹಾಲಿ ಶಾಸಕರು ಮಾಡಿರುವುದಿಲ್ಲ, ಮಾಡಿಸಿರುವ ಅಲ್ಪ ಸ್ವಲ್ಪ ಕಾಮಗಾರಿಗಳೆಲ್ಲ ಕಳಪೆ ಮಟ್ಟದ ಕಾಮಗಾರಿಗಳು ಆಗಿದ್ದು, ಕ್ಷೇತ್ರದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ, ಇದುವರೆವಿಗೂ ಬಡ ಕೂಲಿ ಕರ‍್ಮಿಕರಿಗೆ ನಿವೇಶನಗಳನ್ನು ನೀಡಿರುವುದಿಲ್ಲ, ಕೇವಲ ಬಾರ್ ಗಳನ್ನು ಪ್ರಾರಂಭಿಸುವುದು ಮಾತ್ರ ಈ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿವೆ, ಇದುವರೆವಿಗೂ ದರಖಾಸ್ತು ಜಮೀನು ಮಂಜೂರು ಮಾಡಿಲ್ಲ, ನೂರಾರು ಎಕರೆ ಜಮೀನುಗಳನ್ನು ಮಾಡಿಕೊಂಡಿದ್ದು ಕೆಲವೇ ದಿನಗಳಲ್ಲಿ ದಾಖಲೆಗಳು ಹೊರಗೆ ಬರಲಿವೆಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅನೇಕ ಕರ‍್ಯರ‍್ತರು ಮಿಥುನ್ ರೆಡ್ಡಿ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಮಿಥುನ್ ರೆಡ್ಡಿ ಬಣಕ್ಕೆ ಸರ‍್ಪಡೆಯಾದರು.

ಈ ವೇಳೆ ಪ.ಪಂ.ಮಾಜಿ ಉಪಾಧ್ಯಕ್ಷ ರಾಜಣ್ಣ, ಮುಖಂಡರಾದ ನಂಜರೆಡ್ಡಿ, ರ‍್ಲಕೊಂಡ ಮಣಿಕುಮಾರ್, ಸೋಮೇನಹಳ್ಳಿ ಶ್ರೀರಾಮಪ್ಪ, ನಾಗಣ್ಣ, ಬೈರಾರೆಡ್ಡಿ, ಕಿರಣ್ ಕುಮಾರ್, ಡಾಬ ನರಸಿಂಹಪ್ಪ, ಬಾಲಾಜಿ, ಶಾಮೀರ್, ಚಲಪತಿ, ರಾಮಮರ‍್ತಿ ದಪ್ರ‍್ತಿ ಮರ‍್ತಿ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರ, ಮಿಥುನ್ ರೆಡ್ಡಿ ಬಳಗದ ಮಾದೇಶ, ನರಸಿಂಹಪ್ಪ, ಸೇರಿದಂತೆ ಮಿಥುನ್ ರೆಡ್ಡಿ ಬಳಗದ ಯುವಕರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments