Saturday, April 20, 2024
spot_img
HomeUncategorizedಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರಾಜ್ಯಾಧ್ಯಕ್ಷರ ಅವಧಿಯಲ್ಲಿ ೧ ಕೋಟಿ ನೊಂದಾಯಿತ ಸದಸ್ಯತ್ವ...

ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರಾಜ್ಯಾಧ್ಯಕ್ಷರ ಅವಧಿಯಲ್ಲಿ ೧ ಕೋಟಿ ನೊಂದಾಯಿತ ಸದಸ್ಯತ್ವ ಗುರಿ.

ಪಾಲಾರ್ ಪಾತ್ರಿಕೆ | Palar Pathrike 

ದೇವನಹಳ್ಳಿ: ಕುವೆಂಪು ರವರು ತಮ್ಮ ವಿದ್ಯಾಭ್ಯಾಸದ ಜೀವನದಲ್ಲಿ ಇಂಗ್ಲಿಷ್ ನಲ್ಲಿ ಕವಿತೆ ರಚನೆ ಮಾಡಿದಾಗ ಆಂಗ್ಲರು ಕನ್ಬಡದಲ್ಲೆ ಕವಿತೆ ರಚನೆ ಮಾಡಿದರೆ ಅದ್ಬುತವಾಗಿ ಮೂಡಿಬರುತ್ತದೆ ಎನ್ನುವ ಸೂಚನೆ ಮೇರೆಗೆ ರಾಷ್ಟç ಕವಿ ಕುವೆಂಪುರವರು ಕನ್ನಡದಲ್ಲಿ ರಚನೆ ಮಾಡಲು ಪ್ರಾರಂಭಿಸುತ್ತಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ಪಟ್ಟಣದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಕನ್ನಡಿಗರ ಆಸ್ತಿಯಾಗಿದೆ, ಇತರ ಕನ್ನಡಪರ ಸಂಘಟನೆಗಳಿಗಿAತ ವಿಭಿನ್ನ ಮೊದಲು ನಾವು ಕನ್ನಡವನ್ನು ಬಳಸಿದರೆ ಕನ್ನಡ ಉಳಿಸುವ ಕಾರ್ಯ ಆದಾಗಿಯೇ ಆಗುತ್ತದೆ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಅಂಬರೀಶ್‌ಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತುತ ರಾಜ್ಯ ಘಟಕದ ಅಧ್ಯಕ್ಷರಾದ ಮಹೇಶ್ ಜೋಷಿರವರು ಕ್ರಿಯಾಶೀಲ ವ್ಯಕ್ತಿಯಾಗಿದ್ದು ಕನ್ನಡ ಪರವಾದ ಕೆಲಸಗಳನ್ನು ಎಲ್ಲರ ಸಹಕಾರದಿಂದ ಕನ್ನಡದ ತೇರನ್ನು ಎಳೆಯುತ್ತಿದ್ದಾರೆ ಅವರ ಅಧಿಕಾರಾವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ನೊಂದಾಯಿತ ಸದಸ್ಯತ್ವ ಮಾಡುವ ಗುರಿ ಹೊಂದಿದ್ದಾರೆ ಅದಕ್ಕೆ ಕನ್ನಡಿಗರಾದ ನಾವುಗಳು ಕೈಜೋಡಿಸಿ ಸಹಕಾರ ನೀಡಬೇಕು ಕನ್ನಡಪರವಾದ ವಿಭಿನ್ನ ಕಾರ್ಯಕ್ರಮಗಳು ಮಾಡಲು ತಾಯಿ ಭುವನೇಶ್ವರಿ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪದಾಧಿಕಾರಿಗಳಿಗೆ ಆದೇಶ ಪತ್ರ ಹಾಗೂ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಕೃಷ್ಣಪ್ಪ, ಗೌರವ ಕಾರ್ಯದರ್ಶಿ ರವಿಕಿರಣ್, ತಾಲೂಕು ಅಧ್ಯಕ್ಷ ನಂಜೇಗೌಡ, ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಡಾ.ಡಿ.ಕೆಂಪಣ್ಣ, ನಿಕಟಪೂರ್ವ ಅಧ್ಯಕ್ಷರಾದ ರಾಮಕೃಷ್ಣ, ಗುರುಸ್ವಾಮಿ, ಸಾಹಿತಿ ಶರಣಯ್ಯ ಹಿರೇಮಠ್, ರಮೇಶ್, ಟೌನ್ ಅಧ್ಯಕ್ಷ ಅನಿಲ್‌ಕುಮಾರ್, ಮಹಿಳಾ ಪದಾಧಿಕಾರಿಗಳಾದ ಕೆ.ರಾಧ, ಮೀನಾಕ್ಷಿಕೃಷ್ಣಮೂರ್ತಿ, ಮಾಧವಿ ಕಾಂತರಾಜ್, ಶಶಿಕಲಾ, ಇತರರು ಇದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments