Thursday, April 25, 2024
spot_img
HomeBangalore Ruralವಿಧಾನಮಂಡಲದ ಅಧಿವೇಶನದಲ್ಲಿ ಒಳಮೀಸಲಾತಿಗೆ ಚರ್ಚೆಮಾಡಿ ಕೇಂದ್ರಕ್ಕೆ ಕಳುಹಿಸಬೇಕು

ವಿಧಾನಮಂಡಲದ ಅಧಿವೇಶನದಲ್ಲಿ ಒಳಮೀಸಲಾತಿಗೆ ಚರ್ಚೆಮಾಡಿ ಕೇಂದ್ರಕ್ಕೆ ಕಳುಹಿಸಬೇಕು

ಪಾಲಾರ್ ಪತ್ರಿಕೆ |Palar Pathrike

ದೇವನಹಳ್ಳಿ: ವಿಧಾನಮಂಡಲದ ಅಧಿವೇಶನದಲ್ಲಿ ಒಳಮೀಸಲಾತಿಗೆ ಚರ್ಚೆಮಾಡಿ ಕೇಂದ್ರಕ್ಕೆ ಕಳುಹಿಸಬೇಕು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್.

ಡಿ.19 ರಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯ ಸಂಬAಧಪಟ್ಟAತೆ ಸಚಿವರು ಮತ್ತು ಶಾಸಕರುಗಳ ಜೊತೆ ಚರ್ಚೆಮಾಡಿ ಕೇಂದ್ರಸರ್ಕಾರಕ್ಕೆ ಒಳಮೀಸಲಾತಿ ಬಗ್ಗೆ ಪಟ್ಟಿಮಾಡಿ ಅನುಮೋದನೆಗೆ ಕಳುಹಿಸಿಕೊಡಬೇಕು. ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್‌ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಜಿಲ್ಲೆ ಮತ್ತು ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ದಲಿತ ಹೋರಾಟಗಾರರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಹಲವು ದಶಕಗಳಿಂದ ದಲಿತರು ಒಳಮೀಸಲಾತಿಗಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ಸರ್ಕಾರ ಲಾಟಿ ಚಾರ್ಜ್ ಮಾಡಿರುವುದನ್ನು ಖಂಡಿಸುತ್ತೇವೆ. ಪರಿಶಿಷ್ಟಜಾತಿಯಲ್ಲಿ 101ಜಾತಿಗಳಿದ್ದು ಅವುಗಳಿಗೆ ಸಮಾನವಾದ ಆಧ್ಯತೆ ನೀಡಲು ಸದಾಶಿವ ಆಯೋಗದ ವರದಿಯಲ್ಲಿ ಜಾತಿ ಆಧಾರವಾಗಿ ಸೌಲಭ್ಯಗಳು ದೊರೆಯುವಂತೆ ಆಗುತ್ತದೆ. ಸರ್ಕಾರ ಎಸ್.ಸಿ., ಎಸ್.ಟಿ. ಮೀಸಲಾತಿಯನ್ನು ಹೆಚ್ಚಿಸಿದರೆ ಸಾಲದು. ತಮಗೆ ಹಲವಾರು ಹಕ್ಕುಗಳಿದ್ದು ಅದನ್ನು ಪಡೆಯುವಂತೆ ಆಗಬೇಕು.ಎಂದು ಆಗ್ರಹಿಸಿದರು.
ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ ಒಳಮೀಸಲಾತಿ ಹೋರಾಟ ನ್ಯಾಯಯುತವಾದ ಹೋರಾಟ. ಈ ಹೋರಾಟಗಾರರ ಮೇಲಿನ ದೌರ್ಜನ್ಯ ಮತ್ತು ಬಂಧನ ಅತ್ಯಂತ ಖಂಡನೀಯ. ಬಿಜೆಪಿ ಸರ್ಕಾರದ ಇಂತಹ ಅಮಾನವೀಯ ನಡೆಯನ್ನು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಒಳಮೀಸಲಾತಿ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆಗೊಳಿಸಿ. ಪ್ರತಿಭಟಿತರನ್ನು ಮಾತುಕತೆಗೆ ಆಹ್ವಾನಿಸುವುದನ್ನು ಬಿಟ್ಟು ಪೋಲಿಸರ ಮೂಲಕ ಹಣಿಯಲು ನಡೆಸಿದ ಸರ್ಕಾರದ ಪ್ರಯತ್ನ ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ. ಹರಿಹರದ ಕೃಷ್ಣಪ್ಪನವರ ಸಮಾಧಿಯಿಂದ ಒಳಮೀಸಲಾಗಿಗಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು ಎಂದು ಒತ್ತಾಯಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಡಿಎಸ್.ಎಸ್ ಸಂಘಟನಾ ಸಂಚಾಲಕ ಆವತಿ ತಿಮ್ಮರಾಯಪ್ಪ, ತಾಲೂಕು ಸಂಘಟನಾ ಸಂಚಾಲಕ ರಮೇಶ್, ರಾಜೇಶ್, ಮುನಿರಾಜು, ಓಬಳೇಶ್, ಮುನಿಯಪ್ಪ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments