Friday, March 29, 2024
spot_img
HomeBangalore Ruralಪುರಸಭಾ ಮುಖ್ಯಾಧಿಕಾರಿಯಾಗಿ ದೊಡ್ಡಮಲವಯ್ಯ ಅಧಿಕಾರ ಸ್ವೀಕಾರ

ಪುರಸಭಾ ಮುಖ್ಯಾಧಿಕಾರಿಯಾಗಿ ದೊಡ್ಡಮಲವಯ್ಯ ಅಧಿಕಾರ ಸ್ವೀಕಾರ


ಪಾಲಾರ್ ಪತ್ರಿಕೆ | Palar Patrike

ದೇವನಹಳ್ಳಿ: ದೇವನಹಳ್ಳಿ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ದೊಡ್ಡಮಲವಯ್ಯ ಪುರಸಭಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಮುಖ್ಯಾಧಿಕಾರಿಯಾಗಿದ್ದ ಎ.ಹೆಚ್.ನಾಗರಾಜ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ಮುಖ್ಯಾಧಿಕಾರಿಯಾಗಿ ದೊಡ್ಡಮಲವಯ್ಯ ಅವರನ್ನು ಸರ್ಕಾರವು ವರ್ಗಾವಣೆ ಮಾಡಿ ದೇವನಹಳ್ಳಿ ಮುಖ್ಯಾಧಿಕಾರಿಯಾಗಿ ನೇಮಿಸಲಾಗಿತ್ತು.
ನೂತನ ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ಮಾತನಾಡಿ ಪಟ್ಟಣದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ಅವುಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಆಧ್ಯತೆ ನೀಡಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ. ನಗರೋತ್ತಾನ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನಗಳ ಬಗ್ಗೆ ಸದಸ್ಯರ ಜೊತೆ ಚರ್ಚಿಸಲಾಗುವುದು. ಸ್ವಚ್ಚತೆ ಸಂಬAಧಪಟ್ಟAತೆ ಪೌರಕಾರ್ಮಿಕರೊಂದಿಗೆ ಚರ್ಚಿಸಿ ಪಟ್ಟಣವನ್ನು ಸುಂದರವಾಗಿಡಲು ಆಧ್ಯತೆ ನೀಡಬೇಕು. ಪ್ರತಿ ದಿನನಿತ್ಯ ಬೆಳಿಗ್ಗೆ ಪಟ್ಟಣದ ವಾರ್ಡುಗಳಿಗೆ ಪುರಸಭಾ ಸದಸ್ಯರೊಂದಿಗೆ ಭೇಟಿಮಾಡಿ ವಾರ್ಡುಗಳ ಸಮಸ್ಯೆಗಳನ್ನು ಅರಿತು ಸಮಸ್ಯೆಗಳ ಪರಿಹಾರಕ್ಕೆ ಆಧ್ಯತೆ ನೀಡುತ್ತೇನೆ. ಕಸ ವಿಲೇವಾರಿ, ರಸ್ತೆ, ನೀರು, ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತೇನೆ. ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಜಿ.ಸುರೇಶ್, ಡಿ.ಆರ್. ಬಾಲರಾಜ್, ಬಾಂಬೆ ನಾರಾಯಣಸ್ವಾಮಿ, ಮುಖಂಡರಾದ ಮಂಜುನಾಥ್, ಡಿ.ಸಿ.ಅಂಬರೀಶ್, ಜಿ.ರಮೇಶ್ ಅಭಿನಂದಿಸಿದರು.
ಪೋಟೋ ೨೨ಡಿಹೆಚ್‌ಎಲ್ ಪಿ೩
ನೂತನ ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ಭಾವಚಿತ್ರ.
ಪೋಟೋ ೨೨ಡಿಹೆಚ್‌ಎಲ್ ಪಿ೪(ಪೋಟೋ ಕಡ್ಡಾಯ)
ದೇವನಹಳ್ಳಿ ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ನೂತನ ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ಅವರನ್ನು ಪುರಸಭಾ ಸದಸ್ಯರಾದ ಜಿ.ಸುರೇಶ್, ಡಿ.ಆರ್. ಬಾಲರಾಜ್, ಮುಖಂಡರಾದ ಮಂಜುನಾಥ್, ಜಿ.ರಮೇಶ್ ಅಭಿನಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments