Friday, March 29, 2024
spot_img
HomeBangaloreದೇವಾಲಯಗಳು ಅಭಿವೃದ್ಧಿಯಾದಾಗ ಜನ ನೆಮ್ಮದಿಯಾಗಿರಲು ಸಾಧ್ಯ

ದೇವಾಲಯಗಳು ಅಭಿವೃದ್ಧಿಯಾದಾಗ ಜನ ನೆಮ್ಮದಿಯಾಗಿರಲು ಸಾಧ್ಯ

ದೇವನಹಳ್ಳಿ: ದೇವಾಲಯಗಳು ಅಭಿವೃದ್ಧಿಯಾದಾಗ ಮಾತ್ರ ಭಕ್ತಾದಿಗಳು ಹಾಗು ಗ್ರಾಮಸ್ಥರು ನೆಮ್ಮದಿಯಾಗಿರಲು ಸಾಧ್ಯ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ 19ನೇ ವಾರ್ಡ್ ಕತ್ತಾಳಿಪುರದಲ್ಲಿ ಆಂಜನೇಯ ಸ್ವಾಮಿ ದೇವಾಲಯ ಅಭಿವೃದ್ಧಿಗೆ ವಯಕ್ತಿಕ ಧನ ಸಹಾಯ ಮಾಡಿ ಮಾತನಾಡಿದ ಅವರು. ನಾನು ಚುನಾವಣೆಗೆ ಸ್ಪರ್ಧಿಸುವ ಮುನ್ನ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸ್ಥಳಿಯ ನಾಗರೀಕರು ದೇವಾಲಯವನ್ನು ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದರು. ಹಲವಾರು ಕಾರಣಗಳಿಂದ ತಡವಾಗಿದೆ, ದೇವಾಲಯ ಜೀರ್ಣೋದ್ದಾರಕ್ಕೆ ನನ್ನ ವಯಕ್ತಿಕವಾಗಿ 1 ಲಕ್ಷ ಚೆಕ್‌ನ್ನು ನೀಡಿದ್ದೇನೆ. ಭಗÀÀವಂತ ಮಹಾಮಾರಿ ಕೊರೊನಾ ರೋಗ ಆದಷ್ಟು ಬೇಗ ದೂರಮಾಡಿ 19ನೇ ವಾರ್ಡಿನ ಎಲ್ಲಾ ಜನತೆ ಸುಖ. ಶಾಂತಿ ನೆಮ್ಮದಿಯಿಂದ ಇರಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಆಂಜನೇಯ ಸ್ವಾಮಿ ದೇವಾಲಯವನ್ನು ಜೀರ್ಣೋದ್ದಾರ ಮಾಡಲಿಕ್ಕೆ ಶ್ರೀನಿವಾಸ್‌ಮೂರ್ತಿ ಅವರ ಕುಟುಂಬದವರು ಮುಂದೆ ಬಂದಿದ್ದಾರೆ ಎಂದರು.
ಶ್ರೀನಿವಾಸಮೂರ್ತಿ ಮಾತನಾಡಿ ಪಟ್ಟಣದ ಕತ್ತಾಳಿಪುರದಲ್ಲಿ ಆಂಜನೇಯಸ್ವಾಮಿ ವಿಗ್ರಹ ಅನೇಕ ವರ್ಷಗಳಿಂದ ತೆರೆದ ಜಾಗದಲ್ಲಿತ್ತು ನಮ್ಮ ತಂದೆ ಗಾರೆ ಕೆಲಸ ಮಾಡುತ್ತಿದ್ದು ಟ್ಯಾಂಕಿ ವೆಂಕಟಪ್ಪ ಎಂದೇ ಪ್ರಖ್ಯಾತಿ ಪಡೆದಿದ್ದರು ಅವರು 2015ರಲ್ಲಿ ದೇವಾಲಯವನ್ನು ಜೀರ್ಣೋದ್ದಾರ ಮಾಡುವ ಸಲುವಾಗಿ ದೇವಾಲಯಕ್ಕೆ ಮೇಲ್ಚಾವಣೆ ಹಾಕಲು ಪಿಲ್ಲರ್‌ಗಳನ್ನು ಹಾಕಿದರು ಆದರೆ ಅವರು 2016ರಲ್ಲಿ ಅನಾರೋಗ್ಯದಿಂದ ಮೃತಪಟ್ಟರು ಅವರ ಹಾಗು ನಮ್ಮ ಕುಟುಂಬದವರ ಆಸೆಯಂತೆ ಆಂಜನೇಯ ಸ್ವಾಮಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ನಾನು ಅರ್ದಕ್ಕೆ ನಿಂತಿರುವ ಕೆಲಸವನ್ನು ಪೂರ್ಣಗೊಳಿಸಲು ಬಂದಿದ್ದೇನೆ ದೇವಾಲಯದ ಅಭಿವೃದ್ಧಿಗೆ ಶಾಸಕರು ಸಹಾಯ ಹಸ್ತ ನೀಡಿದ್ದಾರೆ. ದೇವಾಲಯಕ್ಕೆ ಸಹಾಯ ಮಾಡಲಿಚ್ಚಿಸುವ ಮನಸ್ಸುಳ್ಳ ಧಾನಿಗಳ ಸಹಾಯ ಪಡೆದು ದೇವಾಲಯವನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರ ಪೂಜಾ ಕೈಂಕರ್ಯಗಳಿಗೆ ಅನುವುಮಾಡಿಕೊಡಲಾಗುವುದು. 19ನೇ ವಾರ್ಡಿನ ಸದಸ್ಯರು ಹೆಚ್ಚು ಸಹಕಾರ ನೀಡುತ್ತಿದ್ದಾರೆ ಮತ್ತಷ್ಟು ದಾನಿಗಳು ಅವರ ಕೈಲಾದ ಸಹಕಾರ ನೀಡಬೆಕೆಂದು ಭಕ್ತವೃಂಧದವರಲ್ಲಿ ಮನವಿಮಾಡಿದ್ದಾರೆ.
19ನೇ ವಾರ್ಡಿನ ಪುರಸಭೆ ಸದಸ್ಯ ಚೈತ್ರÀವಿಜಯ್‌ಕುಮಾರ್ ಮಾತನಾಡಿ ಶ್ರೀನಿವಾಸ್‌ಮೂರ್ತಿ ಅವರು ದೇವಾಲಯ ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದಾರೆ ಅವರಿಗೆ ನನ್ನ ಸಂಪೂರ್ಣ ಸಹಕಾರವಿದೆ. ಮತ್ತಷ್ಟು ದಾನಿಗಳ ಸಹಕಾರದಿಂದ ದೇವಾಲಯ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎಂದರು.
ಇದೆ ವೆಳೆ ಪುರಸಭೆ ಉಪಾಧ್ಯಕ್ಷೆ ಪುಷ್ಪ, ಸದಸ್ಯರಾದ ಜಿ.ಎ.ರವೀಂದ್ರ, ಮಾಜಿ ಸದಸ್ಯ ಕಾಳಪ್ಪನವರ ವೆಂಕಟೇಶ್, ಹಂಸಶ್ರೀನಿವಾಸಮೂರ್ತಿ ಸೇರಿದಂತೆ ಸ್ಥಳಿಯ ನಿವಾಸಿಗಳು ಉಪಸ್ಥಿತರಿದ್ದರು.
ಚಿತ್ರಸುದ್ದಿ: 2 ದೇವನಹಳ್ಳಿ ಪೊ-1
ದೇವಾಲಯ ಜಿರ್ಣೋದ್ದಾರಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಶ್ರೀನಿವಾಸ್‌ಮೂರ್ತಿ ಅವರಿಗೆ 1 ಲಕ್ಷದ ಚೆಕ್ ಹಸ್ತಾಂತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments