Wednesday, April 24, 2024
spot_img
HomeUncategorizedಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ

ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ

ಪಾಲಾರ್ ಪಾತ್ರಿಕೆ | Palar Pathrike 

ಚಿಂತಾಮಣಿ : ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿರಬೇಕೆAದು ಚಿಂತಾಮಣಿ ನಗರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ರಂಗಸ್ವಾಮಯ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ಹಾಗೂ ಚಿಂತಾಮಣಿ ನಗರ ಪೊಲೀಸ್ ಠಾಣೆ ಸಹಯೋಗದೊಂದಿಗೆ ನಡೆದ ಅಪರಾದ ತಡೆ ಮಾಸಾಚರಣೆ-೨೦೨೨ ರ ಕಾರ್ಯಕ್ರಮಕ್ಕೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಹಸಿರು ನಿಶಾನೆಯನ್ನು ತೋರಿಸಿ ಮಾತನಾಡಿ ಡಿಸೆಂಬರ್ ತಿಂಗಳ ಪೂರ ಅಪರಾದ ತಡೆ ಮಾಸಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರದಲ್ಲಿ ಕರಪತ್ರಗಳ ಹಂಚುವಿಕೆ ಮುಖಾಂತರ ಹಾಗೂ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಂದ ಜಾಥಾಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಕಳ್ಳತನ, ಮಹಿಳೆಯರ ಮೇಲೆ ಅತ್ಯಾಚ್ಯಾರ, ದೌರ್ಜನ್ಯ ಪ್ರಕರಣಗಳು ಕಂಡುಬAದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಿ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್‌ಐಗಳಾದ ನಾಗೇಂದ್ರಪ್ರಸಾದ್, ರಮೇಶ್, ಎ.ಎಸ್.ಐ ವೆಂಕಟೇಶ್, ಸರ್ವೇಶ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೇ ಶಾರದ ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments