Friday, April 19, 2024
spot_img
HomeChikballapurಶ್ರೀರಾಮ ಮಂದಿರದಲ್ಲಿ ಗೋಂದಾವಲೇಕರ್ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ ನೇ ವಾರ್ಷಿಕ ಆರಾಧನೋತ್ಸವ

ಶ್ರೀರಾಮ ಮಂದಿರದಲ್ಲಿ ಗೋಂದಾವಲೇಕರ್ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ ನೇ ವಾರ್ಷಿಕ ಆರಾಧನೋತ್ಸವ

ಪಾಲಾರ್ ಪತ್ರಿಕೆ | Palar Patrike

ಚಿಂತಾಮಣಿ : ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರು ಅಸಂಖ್ಯಾತ ಜನರನ್ನು ಭಗವನ್ನಾಮಸ್ಮರಣೆಯಲ್ಲಿ ತೊಡಗಿಸುವುದರ ಮೂಲಕ ಉದ್ದಾರ ಮಾಡಿ, ಮಹಾ ಸಮಾಧಿ ಹೊಂದಿ ಅನಂತದಲ್ಲಿ ಲೀನರಾಗಿ ಒಂದು ನೂರ ಒಂಬತ್ತು ವರ್ಷಗಳಾದವು.
ಅವರ ದಿವ್ಯಾನುಗ್ರಹದಿಂದಲೇ ಸ್ಥಾಪಿತವಾದ ಶ್ರೀ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದಲ್ಲಿ ಡಿಸೆಂಬರ್ ೧೧ ಭಾನುವಾರದಿಂದ ಡಿಸೆಂಬರ್ ೧೮ ಭಾನುವಾರವರೆಗೂ ಶ್ರೀ ಮಹಾರಾಜರ ೧೦೯ನೇ ಆರಾಧನೋತ್ಸವವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆಯೆಂದು ಮಂದಿರದ ಅಧ್ಯಕ್ಷ ಜಿ.ಹೆಚ್.ವೆಂಕಟೇಶಮೂರ್ತಿ ತಿಳಿಸಿದರು.
ಚಿಂತಾಮಣಿ ನಗರದ ಎನ್.ಆರ್. ಬಡಾವಣೆಯ, ಶ್ರೀರಾಮ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ನೇ ಆರಾಧನೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಜಪಾನುಷ್ಠಾನ, ಭಜನೆ, ರಾಮದಾಸಿ ಭಿಕ್ಷೆ, ಅನ್ನದಾನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಗೀತ, ನೃತ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿದರು.
ಡಿಸೆಂಬರ್ ೧೧ ಭಾನುವಾರ ದಿಂದ ಡಿ.೧೮ ಭಾನುವಾರದವರೆಗೆ ಪ್ರತಿದಿನ ಬೆಳಿಗ್ಗೆ ೫.೩೦ ಕ್ಕೆ ಭೂಪಾಳಿ ಮತ್ತು ಕಾಕಡಾರತಿ, ೭ ಘಂಟೆಗೆ ರುದ್ರಾಭಿಷೇಕ, ಬೆಳಿಗ್ಗೆ ೬ ರಿಂದ ಸಂಜೆ ೬.೩೦ ರವರೆಗೆ ಅಖಂಡ ಜಪ ಮತ್ತು ಎಲ್ಲಾ ಭಜನಾ ಮಂಡಳಿಯವರಿAದ ಅಖಂಡ ಭಜನೆ, ಮಧ್ಯಾಹ್ನ ೧೨ ರ ನಂತರ ಭಜನೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಸಂಜೆ ೬ಕ್ಕೆ ಶ್ರೀ ವಿಷ್ಣುಸಹಸ್ರನಾಮ, ಸಾಮೂಹಿಕ ಪಾರಾಯಣ, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.
ಡಿ. ೧೧ ಭಾನುವಾರದಂದು ಬೆಳಿಗ್ಗೆ ೭.೩೦ ಗಂಟೆಗೆ ಎಲ್ಲಾ ಭಜನಾ ಮಂಡಳಿಯವರಿAದ ಭಜನೆ ಮತ್ತು ನೃತ್ಯದೊಂದಿಗೆ ನಗರ ಸಂಕೀರ್ತನೆ, ೯ ಗಂಟೆಗೆ ಗೋಪೂಜೆ, ಭಜನೆ, ಮಹಾಮಂಗಳಾರತಿ, ಸಂಜೆ ೬.೪೫ಕ್ಕೆ ಸಂಕಷ್ಟಹರಗಣಪತಿ ವ್ರತ.
ಡಿ.೧೨ ಸೋಮವಾರದಂದು ಬೆಳಿಗ್ಗೆ ೯ ರಿಂದ ೧೦.೩೦ ರವರೆಗೆ ಶ್ರೀ ವಿವಿಧ ಭಜನಾ ಮಂಡಲಿ ರವರಿಂದ ಭಜನೆ, ಸಂಜೆ ೬.೪೫ ಕ್ಕೆ ಸಂಗೀತ ವಿದುಷಿ ಲಕ್ಷಿö್ಮÃಶ್ಯಾಮಸುಂದರ್ ರವರಿಂದ ಭಕ್ತಿ ಸಂಗೀತ
ಡಿ. ೧೩ ಮಂಗಳವಾರದAದು ೯ರಿಂದ ೧೦.೩೦ ರವರೆಗೆ ಭಜನಾ ಮಂಡಲಿಗಳಿAದ ಭಜನೆ ೬.೪೫ ಕ್ಕೆ ಸಂ|| ವಿ|| ಸೂರಮಣಿ ಶ್ರೀ ದತ್ತಾತ್ರೇಯ ವೇಲಣಕರ್ ರವರಿಂದ ಹಿಂದೂಸ್ತಾನಿ ಗಾಯನ.
ಡಿ.೧೪ ಬುಧವಾರ ಬೆಳಿಗ್ಗೆ ೯ ರಿಂದ ೧೦.೩೦ ರವರೆಗೆ ಭಜನಾ ಮಂಡಳಿಗಳಿAದ ಗಾಯನ ಸೇವೆ, ಸಂಜೆ ೬.೪೫ಕ್ಕೆ ಸಂ|| ವಿ|| ಚಿಲುಕುಂಡ ಸಹೋದರಿಯರಿಂದ ಕರ್ನಾಟಕ ಶಾಸ್ರಿö್ತÃಯ ಸಂಗೀತ.
ಡಿ.೧೫ ಗುರುವಾರದಂದು ಬೆಳಿಗ್ಗೆ ೭ ಘಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಮದಾಸಿ ಭಿಕ್ಷೆ, ಬೆಳಿಗ್ಗೆ ೯ ರಿಂದ ೧೦.೩೦ ರವರೆಗೆ ಭಜನಾ ಮಂಡಳಿಗಳಿAದ ಗಾಯನಸೇವೆ, ಸಂಜೆ ೫.೩೦ಕ್ಕೆ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ಪ್ರಾಕಾರೋತ್ಸವ ಸಂಜೆ ೬.೪೫ಕ್ಕೆ ಸಂ|| ವಿ|| ಉಸ್ತಾದ್ ಫಯಾಜ್ ಖಾನ್ ರವರಿಂದ ದಾಸರ ಕೃತಿಗಳ ಗಾಯನ
ಡಿ.೧೬ ಶುಕ್ರವಾರದಂದು ಬೆಳಿಗ್ಗೆ ೯ಕ್ಕೆ ಶ್ರೀ ರಾಮ ತಾರಕ ಹೋಮ, ಸಂಜೆ ೫ ಕ್ಕೆ ಶ್ರೀ ಲಲಿತಾ ಸಹಸ್ರನಾಮಾರ್ಚನೆ, ೬.೪೫ ಕ್ಕೆ ಖ್ಯಾತ ಚಲನಚಿತ್ರ ಗಾಯಕರಾದ ಮನೋಜವಂ ಆತ್ರೇಯ ರವರಿಂದ ಪ್ರಸಿದ್ದ ಭಕ್ತಗೀತೆಗಳ ಗಾಯನ.
ಡಿ.೧೭ ಶನಿವಾರ ಬೆಳಿಗ್ಗೆ ೭ಕ್ಕೆ ಧ್ಯಾನಮಂದಿರದಲ್ಲಿ ಭಕ್ತವತ್ಸಲ ಶ್ರೀರಾಮ ಮತ್ತು ಭಕ್ತಶಿರೋಮಣಿ ಶ್ರೀ ಮಾರುತಿಗೆ ಸಾರ್ವಜನಿಕರಿಂದ ಕ್ಷೀರಾಭಿಷೇಕ, ಶ್ರೀ ಮಂದಿರದ ಗರ್ಭಗುಡಿಯಲ್ಲಿ ಶತರುದ್ರಾಭಿಷೇಕ, ಸಂಜೆ ೬.೪೫ ಕ್ಕೆ ಸುಶ್ರಾವ್ಯ ಗಾಯಕರಾದ ಕೃಷ್ಣ ಮಡಕಶಿರ ರವರಿಂದ ಅನ್ನಮಾಚಾರ್ಯರು, ಪುರಂದರದಾಸರ ಕೃತಿ, ತ್ಯಾಗರಾಜಸ್ವಾಮಿಗಳ ಕೃತಿಗಳ ಗಾಯನ ಮತ್ತು ಭಕ್ತಿಯ ವಿವರಣೆ.
ಡಿ. ೧೮ ಭಾನುವಾರ ಬೆಳಿಗ್ಗೆ ೫ಕ್ಕೆ ಭೂಪಾಳಿ ಮತ್ತು ಕಾಕಡಾರತಿ, ಬೆಳಿಗ್ಗೆ ೬.೩೦ಕ್ಕೆ ಘಂಟೆಗೆ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ದಿವ್ಯ ಪಾದುಕೆಗಳಿಗೆ ಎಲ್ಲಾ ಭಕ್ತರಿಂದ ಕ್ಷೀರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ.
ಬೆಳಿಗ್ಗೆ ೮ಕ್ಕೆ ಸಪರಿವಾರನಾಗಿ ಇರುವ ಶ್ರೀರಾಮಚಂದ್ರಪ್ರಭುವಿಗೆ ಶ್ರೀಮಂದಿರದ ಪ್ರಾಕಾರದಲ್ಲಿ ಎಲ್ಲಾ ಭಕ್ತರಿಂದ ಶ್ರೀರಾಮ ತಾರಕ ಮಂತ್ರ ಜಪಿಸುತ್ತಾ ಪ್ರದಕ್ಷಿಣೆ ನಮಸ್ಕಾರ, ಬೆಳಿಗ್ಗೆ ೯.೩೦ ಕ್ಕೆ ಎನ್.ಆರ್.ಬಡಾವಣೆಯ ಮುಖ್ಯ ಬೀದಿಗಳಲ್ಲಿ ಶ್ರೀ ಸೀತಾಲಕ್ಷö್ಮಣ ಹನುಮತ್ಸಮೇತ ಶ್ರೀ ರಾಮಚಂದ್ರಪ್ರಭುವಿನ ರಥೋತ್ಸವ, ವಿವಿಧ ಭಜನಾ ಮಂಡಲಿಯ ಮಾತೆಯರಿಂದ ರಥೋತ್ಸವದೊಂದಿಗೆ ಭಜನ ಮೇಳ ನಂತರ ಅಷ್ಟಾವಧಾನಸೇವೆ, ಮಹಾಮಂಗಳಾರತಿ ಅನ್ನಸಂತರ್ಪಣೆ. ಸಂಜೆ ೬.೪೫ಕ್ಕೆ ಮಕ್ಕಳಿಂದ ಗಾಯನ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಸಕ್ರಿಯವಾಗಿ ಭಾಗವಹಿಸಿ ಶ್ರೀ ಮಹಾರಾಜರ ಆಶೀರ್ವಾದ ಪಡೆಯಬೇಕೆಂದು ಮಂದಿರದ ಅಧ್ಯಕ್ಷ ಜಿ.ಹೆಚ್.ವೆಂಕಟೇಶಮೂರ್ತಿ ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂದಿರದ ಪ್ರಮುಖರಾದ ಜಿ.ಹೆಚ್.ರಘುನಾಥ್, ಜಿ.ಜಯರಾಂ, ರಾಜಾರಾಂ, ಕೆ.ಎಸ್.ನಾಗೇಶ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments