Tuesday, April 16, 2024
spot_img
HomeChikballapurಲಿಯೋ ಕ್ಲಬ್ ಆಪ್ ಮಾರ್ಗದಿಂದ ಯುವಕರ ನಡೆ ಆರೋಗ್ಯಕರ ಸಮಾಜ ನಿರ್ಮಾಣದ ಕಡೆ ಅಭಿಯಾನ

ಲಿಯೋ ಕ್ಲಬ್ ಆಪ್ ಮಾರ್ಗದಿಂದ ಯುವಕರ ನಡೆ ಆರೋಗ್ಯಕರ ಸಮಾಜ ನಿರ್ಮಾಣದ ಕಡೆ ಅಭಿಯಾನ

ಪಾಲಾರ್ ಪಾತ್ರಿಕೆ | Palar Pathrike 

ಚಿಂತಾಮಣಿ : ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರ ಅಭಿವೃದ್ಧಿ ಹಾಗೂ ಕೃಷಿಕರ ಮಕ್ಕಳ ಕಲ್ಯಾಣ ಮತ್ತು ವಿದ್ಯಾಭ್ಯಾಸ ಬಹಳ ಮುಖ್ಯವಾಗಿದೆಯೆಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ತಿಳಿಸಿದರು.
ಚಿಂತಾಮಣಿ ತಾಲೂಕು ಯಗವಕೋಟೆ ಗ್ರಾಮದಲ್ಲಿ ಲಿಯೋ ಕ್ಲಬ್ ಆಪ್ ಮಾರ್ಗ ಅಧ್ಯಕ್ಷ ನವೀನ್ ಜಿ ಕೃಷ್ಣ ಹಾಗೂ ಆನಿತಾ ಚಾರಿಟಬಲ್ ಪೌಂಡೇಷನ್ ಟ್ರಸ್ಟ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವಕರ ನಡೆ ಆರೋಗ್ಯಕರ ಸಮಾಜ ನಿರ್ಮಾಣದ ಕಡೆ ಅಭಿಯಾನದಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ರೈತರ ಹಾಗೂ ರೈತರ ಮಕ್ಕಳ ಬದುಕು ತುಂಬಾ ದುಸ್ಥಿರವಾಗಿದ್ದು, ಈ ನಿಟ್ಟಿನಲ್ಲಿ ಮೊದಲ ಗ್ರಾಮಾಂತರ ಪ್ರದೇಶಗಲ್ಲಿನ ಕೃಷಿಕರ ಅಭಿವೃದ್ದಿ ಹಾಗೂ ಕೃಷಿಕರ ಮಕ್ಕಳ ಕಲ್ಯಾಣದ ಜೊತೆ ಉತ್ತಮ ವಿದ್ಯಾಭ್ಯಾಸ ಕೂಡ ಅವಶ್ಯಕತೆ ಇರುವ್ಯದರಿಂದ ಲಿಯೋ ಕ್ಲಬ್ ಆಪ್ ಮಾರ್ಗ ಅಧ್ಯಕ್ಷ ನವೀನ್ ಜಿ ಕೃಷ್ಣರವರು ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕೆಂದರು.
ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ ಉದ್ಯೋಗವಿಲ್ಲದೇ ಇರುವ ನಿರುದ್ಯೋಗಿ ಯುವಕರನ್ನು ಗುರುತಿಸಿ ಅವÀರಿಗೆ ಉದ್ಯೋಗ ದೊರಕಿಸಿಕೊಡಲು ಸಂಸ್ಥೆಯು ಯುವಕರ ನಡೆ ಆರೋಗ್ಯಕರ ಸಮಾಜ ನಿರ್ಮಾಣದ ಕಡೆ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಿಯೋಕ್ಲಬ್ ಆಪ್ ಮಾರ್ಗ ಅಧ್ಯಕ್ಷ ನವೀನ್ ಜಿ ಕೃಷ್ಣ ಮಾತನಾಡಿ ಅಭಿಯಾನದ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿನ ಬಡಜನರ ಮನೆ ಮನೆಗೆ ವೈದ್ಯರು ಹಾಗೂ ಸ್ವಯಂ ಸೇವಕರು ತೆರಳಿ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಿ, ಉತ್ತಮ ಆರೋಗ್ಯ ಚಿಕಿತ್ಸೆ ನೀಡುವುದು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ನಿರುದ್ಯೋಗಿ ಯುವಕರನ್ನು ಗುರುತಿಸಿ ಹೋಬಳಿ ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಹಮ್ಮಿಕೊಂಡು ಉದ್ಯೋಗ ಕೊಡಿಸುವುದು ಕಾರ್ಯಕ್ರಮದ ಧ್ಯೇಯವಾಗಿದೆ ಎಂದರು.
ಎA.ವಿ.ಜೆ ಆಸ್ಪತ್ರೆಯ ತಂಡ ಹಾಗೂ ಎಸ್.ಜೆಸಿಐಟಿ ಕಾಲೇಜಿನ ವಿದ್ಯಾರ್ಥಿಗಳು ಪೆದ್ದೂರು ಹಾಗೂ ಯಗವಕೋಟೆ ಗ್ರಾಮ ಪಂಚಾಯಿತಿಗಳಲ್ಲಿನ ಎಲ್ಲಾ ಮನೆ ಮನೆಗೆ ತೆರಳಿ ರೋಗಿಗಳ ಹಾಗೂ ನಿರುದ್ಯೋಗಿಗಳ ಸರ್ವೆ ನಡೆಸಿದರು.
ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ತಹಸಿಲ್ದಾರ್ ಮುನಿಶಾಮಿರೆಡ್ಡಿ, ವಕೀಲ ಶಂಕರಪ್ಪ, ಬಾಬುರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಮಂತ್, ಅಭಿ, ಯುವಕರಾದ ಪ್ರದೀಪ್, ಸುನೀಲ್, ಶ್ರೀಕಂಠ, ಪ್ರಕಾಶ್, ಲೊಕೇಶ್ ಸೇರಿದಂತೆ ಯಗವಕೋಟೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments