Friday, February 3, 2023
spot_img
HomeChikballapurನಮ್ಮ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ: ಡಾ|| ಕು.ಅನುರೂಪ.ಎಂ

ನಮ್ಮ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ: ಡಾ|| ಕು.ಅನುರೂಪ.ಎಂ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ: ರೈತರಿಲ್ಲದ ಜಗತ್ತನ್ನು ಕಲ್ಪಸಿಕೊಳ್ಳುವುದು ಅಸಾಧ್ಯ. ನಮ್ಮ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ. ಇಡೀ ಜಗತ್ತು ಬೆಳಗುವ ರೈತ ಯಾವಾಗಲೂ ತೆರೆಮರೆಯಲ್ಲೇ ಇರುತ್ತಾನೆ. ಆತನ ಸಂಕಟ, ನೋವು ದುಮ್ಮಾನಗಳಿಗೆ ಎಣೆಯೇ ಇಲ್ಲ. ಆದರೂ, ನೇಗಿಲು ಹೊತ್ತ ಯೋಗಿ ತನ್ನ ಕಾಯಕ ಮಾಡುತ್ತಲೇ ಇರುತ್ತಾನೆ, ಅಂಥ ನಿಸ್ವಾರ್ಥಿಯ ರೈತನನ್ನು ನೆನೆಯಲು ರೈತ ನಾಯಕ ಮತ್ತು ಮಾಜಿ ಪ್ರಧಾನಿ ಚೌಧರಿಚರಣ್ ಸಿಂಗ್ ರವರು ಹುಟ್ಟಿದ ದಿನ ಡಿಸೆಂಬರ್ 23 ರಂದು ರಾಷ್ಟಿçÃಯ ರೈತ ದಿನವಾಗಿ ಆಚರಿಸಲಾಗುತ್ತಿದೆ ಎಂದು ಉಪ ಕೃಷಿನಿರ್ದೇಶಕ -2 ಡಾ|| ಕು.ಅನುರೂಪ.ಎಂ ನುಡಿದರು.
ತಾಲ್ಲೂಕಿನ ಕಾಗತಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟಿçÃಯ ರೈತರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತಾಪಿ ವರ್ಗದವರೇ ಆಗಿದ್ದರಿಂದ ಚರಣ್ ಸಿಂಗ್ ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಅರಿವು ಇತ್ತು ಮತ್ತು ಅಷ್ಟೇ ವೇಗದಲ್ಲಿ ಅವರ ಪರವಾಗಿ ಕೆಲಸ ಮಾಡಲು ಅವರಿಗೆ ಸಾಧ್ಯವಾಯಿತು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಜಮೀನ್ದಾರಿ ಪದ್ದತಿ ನಿರ್ಮೂಲನೆ ಕಾಯ್ದೆ ಜಾರಿ ಮಾಡಿರುವುದು. ರೈತ ನಾಯಕನಾಗಿದ್ದ ಅವರು ಅಷ್ಟೇ ಸಶಕ್ತ ಬರಹಗಾರರೂ ಹೌದು. ಭಾರತದಲ್ಲಿನ ರೈತರ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ರೈತರೊಬ್ಬರು ದೇಶದ ಉನ್ನತ ಪದವಿಗೇರಬಹುದು ಎಂಬುದನ್ನು ತೋರಿಸಿ ಕೊಟ್ಟ ಚರಣ್ ಸಿಂಗ್ 1987 ಮೇ 29 ರಂದು ಇಹಲೋಕನ್ನು ತೈಜಿಸಿದ್ರು. ಅವರ ಹುಟ್ಟು ಹಬ್ಬವನ್ನು ದೇಶವು ರೈತ ದಿನವಾಗಿ ಆಚರಿಸುವ ಮೂಲಕ ಅವರನ್ನು ಸದಾ ಸ್ಮರಣೀಯರನ್ನಾಗಿಸಿದೆ.
ತಾಲ್ಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ:- ರೈತ ಮುಖಂಡರಿAದ ಆರೋಪ
ಇತ್ತೀಚಿಗೆ ತಾಲ್ಲೂಕು ಕಛೇರಿಯಲ್ಲಿ ವಿವಿಧ ಇಲಾಖೆಗಳ ಕೆಲವು ಸಿಬ್ಬಂದಿಗಳು ಹಣದ ಆಸೆಗೆ ಬಿದ್ದು ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಾರೆ ಇದರ ಬಗ್ಗೆ ಹೊರ ತಾಲ್ಲೂಕಿನ ನಮ್ಮ ರೈತರು ನಮಗೆ ನಿಮ್ಮ ತಾಲ್ಲೂಕಿನಲ್ಲಿ ನಿರಂತರವಾಗಿ ಲೋಕಾಯುಕ್ತ ಬಲಗೆ ಸಿಬ್ಬಂದಿ ಬೀಳುತ್ತಿರುವ ಬಗ್ಗೆ ನಮ್ಮ ಬಳಿ ಚರ್ಚಿಸಿದ್ದಾಗ ನಮಗೆ ಬೇಸರ ಉಂಟಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ಉತ್ತಮ ರೀತಿ ಕೆಲಸ ಮೊದಲು ನಿರ್ವಹಿಸುತ್ತಿದ್ದರು. ಆದರೆ ಈಗ ಈ ರೀತಿಯ ಭ್ರಷ್ಟಾಚಾರಕ್ಕೆ ಸಿಳುಕುತ್ತಿರುವುದು ನೋವುಂಟಾಗುತ್ತಿದೆ ಇದರ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ದಂಡಾಧಿಕಾರಿಗೆ ತಿಳಿಸಿದರು. ತಾತನ ಹೆಸರಿನಲ್ಲಿರುವ ಪಹಣಿಯನ್ನು ಮೊಮ್ಮಗನ ಹೆಸರಿಗೆ ಮಾಡಿಸಿಕೊಳ್ಳಬೇಕಾದರೆ ಸುಮಾರು ತಿಂಗಳುಗಳು ಕಳೆದರೂ ಆಗುತ್ತಿಲ್ಲ. ಇದು ಒಂದು ತರಹ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಪರಿಸ್ಥಿತಿಯಂತೆ ಪಹಣಿ ಮಾಡಿಸಿಕೊಳ್ಳಲು ಆಗುತ್ತಿದೆ. ಇದರ ಬಗ್ಗೆ ಯಾವ ಅಧಿಕಾರಿಯು ಎಚ್ಚೆತ್ತುಕೊಳ್ಳುತ್ತಿವೆಂದರು.
ನಂತರ ದಂಡಾಧಿಕಾರಿ ಮಾತನಾಡಿ ನಿಮಗೆ ಕಾನೂನು ರೀತಿ ಕ್ರಮವಾಗಿರುವ ಕೆಲಸಗಳು ನಡೆಯದೇ ಇದ್ದಲ್ಲಿ ಅಥವಾ ಅಂತಹ ಕೆಲಸಗಳನ್ನು ಮಾಡಿಕೊಳ್ಳಲು ಯಾರಾದರೂ ಹಣ ಕೇಳೀದ್ದಲ್ಲಿ ನನ್ನ ಗಮನಕ್ಕೆ ತನ್ನಿ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಜೊತೆಗೆ ತಮ್ಮ ಕೆಲಸವನ್ನು ಮಾಡಿಸಿಕೊಡುತ್ತೇನೆಂದು ಬರವಸೆ ನೀಡಿದರು.
ಸನ್ಮಾನ
ಕೃಷಿ ಇಲಾಖೆ ವತಿಯಿಂದ ಚಿಲಕಲನೇರ್ಪು ಹೋಬಳಿಯ ಚಿನ್ನಪಲ್ಲಿ ಶ್ರೀ ಶಿವಾರೆಡ್ಡಿ ಬಿನ್ ನಾರಾಯಣಪ್ಪ, ಕಸಬಾ ಹೋಬಳಿ ರೈತ ಸಂಘ ಕೇಂದ್ರದ ಕುರುಬೂರು ಶ್ರೀ ಮುನಿಯಪ್ಪ ಬಿನ್ ಸಿದ್ದಪ್ಪ, ಮುಂಗಾನಹಳ್ಳಿ ಸೋಮಕಲಹಳ್ಳಿ ವೆಂಕಟರೆಡ್ಡಿ ಬಿನ್ ಸಿದ್ದಪ್ಪ ಮತ್ತು ಮುರಗಮಲೆ ಹೋಬಳಿ ಬರ‍್ಲಹಳ್ಳಿ ಮುನಿಸ್ವಾಮಿರೆಡ್ಡಿ ಬಿನ್ ಗುಲ್ಲಪ್ಪ ರವರಿಗೆ ಸನ್ಮಾನಿಸಲಾಯಿತು. ತೋಟಗಾರಿಕೆ ಇಲಾಖೆಯಿಂದ ಕಸಬಾ ಹೋಬಳಿ ಚೆನ್ನಕೇಶವಪುರ ಪುಷ್ಪ ಕೋಂ ಶ್ರೀನಿವಾಶ, ಕೈವಾರ ಹೋಬಳಿ ಜಂಗಮಶೀಗೆಹಳ್ಳಿ ಮಂಜುನಾಥ ಬಿನ್ ಗೋವಿಂದಪ್ಪ ಮತ್ತು ಅಂಬಾಜಿದುರ್ಗಾ ಹೋಬಳಿ ಕತ್ತರಿಗುಪ್ಪೆ ಹರೀಶ್ ಬಿನ್ ಬಿ.ರಾಮರೆಡ್ಡಿ. ರೇಷ್ಮೇ ಇಲಾಖೆಯಿಂದ ಕೈವಾರ ಹೋಬಳಿ ಹೀರೇಕಟ್ಟಿಗೇನಹಳ್ಳಿ ಮುನಿರೆಡ್ಡಿ ಬಿನ್ ಮುನಿವೆಂಕಟಪ್ಪ, ಕೈವಾರ ಹೋಬಳಿ ತಳಗವಾರ ಹರಿನಾಥ್ ಬಿನ್ ರಾಮಯ್ಯ, ಅಂಬಾಜಿದುರ್ಗಾ ಹೋಬಳಿ ಉಪ್ಪರಪೇಟೆ ಪಾರ್ವತಮ್ಮ ಕೋಂ ಗುಂಜಪ್ಪ, ಪಶುಸಂಗೋಪನಾ ಇಲಾಖೆ ವತಿಯಿಂದ ಕಸಬಾ ಹೋಬಳಿ ಕುರುಬೂರು ಮಲ್ಲಿಕಾರ್ಜುನಗೌಡ ಬಿನ್ ಗೂಳೇಗೌಡ, ಅಂಬಾಜಿದುರ್ಗಾ ಹೋಬಳಿ ಕತ್ತರಿಗುಪ್ಪೆ ರಂಗಮ್ಮ ಬಿನ್ ಸುಬ್ರಮಣಿ, ಅಂಬಾಜಿದುರ್ಗಾ ಹೋಬಳಿ ಸುಜ್ಜನಹಳ್ಳಿ ಅಶ್ವತ್ಥರೆಡ್ಡಿ ಬಿನ್ ಚಿಕ್ಕವೆಂಕಟರೆಡ್ಡಿ ಮತ್ತು ಅರಣ್ಯ ಇಲಾಖೆ ವತಿಯಿಂದ ಕಸಬಾ ಹೋಬಳಿ ಕಾಗತಿ ಪಾಪಿರೆಡ್ಡಿ ಬಿನ್ ಲೇಟ್ ವೆಂಕಟಸ್ವಾಮಿರೆಡ್ಡಿ, ಕೈವಾರ ಹೋಬಳಿ ಮುತ್ತಕದಹಳ್ಳಿ ಎಂ.ಅಶೋಕ್ ರೆಡ್ಡಿ ಬಿನ್ ಎಂ.ಡಿ.ಮುನಿರೆಡ್ಡಿ ಮತ್ತು ಮಸ್ತೇನಹಳ್ಳಿ ನಾಗರಾಜ್ ಬಿನ್ ಲೇಟ್ ನಾರಾಯಣಪ್ಪ ರವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾ.ಪಂ ಇ.ಒ ರವಿಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ, ತೋಟಗಾರಿಕೆ ಇಲಾಖೆಯ ರಜಿನಿ, ರೇಷ್ಮೆ ಇಲಾಖೆಯ ಆಂಜನೇಯರೆಡ್ಡಿ, ಅರಣ್ಯ ಇಲಾಖೆಯ ಚಿತ್ರ, ತಾಲ್ಲೂಕು ಕೃಷಿಕ ಸಮಾಜ ತಾಲ್ಲೂಕು ಅಧ್ಯಕ್ಷ ಗೋವಿಂದಪ್ಪ ಉಪಾಧ್ಯಕ್ಷ ಪಟೇಲ್ ಅಶ್ವತ್ಥನಾರಾಯಣರೆಡ್ಡಿ, ಕಾಗತಿ ಪಟೇಲ್ ಬೈರಾರೆಡ್ಡಿ ನಿರ್ದೇಶಕರಾದ ರೆಡ್ಡಪ್ಪ, ಲಕ್ಷö್ಮಣ್ ರೆಡ್ಡಿ, ಆಂಜನೇಯರೆಡ್ಡಿ, ಶ್ರೀನಿವಾಸರೆಡ್ಡಿ, ಪ್ರಗತಿಪರ ರೈತ ಶ್ರೀನಿವಾಶಗೌಡ ಮತ್ತು ಚಂದ್ರೇಗೌಡ, ಸೀಕಲ್ ರಮಣಾರೆಡ್ಡಿ, ತಿಮ್ಮರಾಯಪ್ಪ, ವೆಂಕಟರಾಯಪ್ಪ, ಶ್ರೀನಿವಾಸರೆಡ್ಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments