Wednesday, April 24, 2024
spot_img
HomeChikballapurಕನ್ನಡ ಮನಸ್ಸುಗಳನ್ನು ಬೆಸೆದ ಮನನೊಂದ ಕವಿಗೋಷ್ಟಿ

ಕನ್ನಡ ಮನಸ್ಸುಗಳನ್ನು ಬೆಸೆದ ಮನನೊಂದ ಕವಿಗೋಷ್ಟಿ

ಪಾಲಾರ್ ಪತ್ರಿಕೆ | Palar Patrike

ಚಿಂತಾಮಣಿ : ನಗರದ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮನೆಗೊಂದು ಕವಿಗೋಷ್ಟಿ ಕಾರ್ಯಕ್ರಮವನ್ನು ಟ್ಯಾಂಕ್‌ಬAಡ್ ರಸ್ತೆಯ ಶ್ರೀಮತಿ ಕಲಾವತಿ, ಶಿಕ್ಷಕ ಎನ್.ವಿ.ಶ್ರೀನಿವಾಸನ್‌ರವರ ಮನೆಯಲ್ಲಿ ಏರ್ಪಡಿಸಲಾಗಿತ್ತು.

ಕವಿಗೋಷ್ಟಿಯಲ್ಲಿ ಕರೆಣ್ಣನವರ್, ಗುರುಪ್ರಸನ್ನ, ಕೀರ್ತಿಬಸಪ್ಪಲಗಳಿ, ಸೋರಪ್ಪಲ್ಲಿ ಚಂದ್ರಶೇಖರ್, ಲಾವಣ್ಯ, ಇರಂಗಪಲ್ಲಿ ವೆಂಕಟರಮಣಪ್ಪ ಕೋಲಾರದ ನಳಿನಿ, ರಂಗನಾಥ್, ಕಾಗತಿ ವೆಂಕಟರತ್ನA ಭಾಗವಹಿಸಿದ್ದು, ರೈತರ ಸಮಸ್ಯೆ ತ್ರಿವರ್ಣಧ್ವಜ ಮಧ್ಯಪಾನ, ಲವ್‌ಜಿಹಾದ್, ರಾಜ್ಯೋತ್ಸವ, ಪ್ರೇಮ ದುರಂತ ಮುಂತಾದವುಗಳ ಬಗ್ಗೆ ಸ್ವರಚನೆ ಕವನ ವಾಚಿಸಿದರು.

ಕವಿಸ್ಮರಣೆ ಅಂಗವಾಗಿ ಭೂಸನೂರಮಠದ ಬಗ್ಗೆ ಕರೆಣ್ಣನವರ್ ರಾಶಿ ಎಂ.ಶಿವರಾAರ ಬಗ್ಗೆ ಗುರುಪ್ರಸನ್ನ ತಿ.ತಾ.ಶರ್ಮರ ಬಗ್ಗೆ ರಮೇಶ್ ಕವಿಗಳ ಬದುಕು ಬರಹ ಸ್ಮರಿಸಿದರು.

ಪೆದ್ದೂರು ಮುನಿರಾಜು, ಮಂಡ್ಯದ ಸುಶೀಲ್ ಕುಮಾರ್ ಜನಪದ ಗೀತೆಗಳನ್ನು ಹಾಡಿದರು. ಕು.ಕೀರ್ತಿರವರಿಂದ ಭಕ್ತಿಗೀತೆ ಕು||ಮೈತ್ರಿರವರಿಂದ ಭಾವಗೀತೆಗಳಾದವು ಕನ್ನಡಭಾಷಾ ತಜ್ಞ ವೆಂಕಟೇಶ್ವರರಾವ್ ಕನ್ನಡ ಗದಾಯುದ್ದ” ಪ್ರಸಂಗವನ್ನು ಹಳೆಗನ್ನಡದಲ್ಲಿ ನಿರರ್ಗಳವಾಗಿ ಎಳೆ ಎಳೆಯಾಗಿ ವರ್ಣಿಸಿದರು.

ಕುಟುಂಬದ ದಂಪತಿಗಳನ್ನು ವೇದಿಕೆಯಿಂದ ಸನ್ಮಾನಿಸಲಾಯಿತು. ಸಿರಿಗನ್ನಡ ವೇದಿಕೆ ಅಧ್ಯಕ್ಷರೂ ಆದ ಶ್ರೀನಿವಾಸನ್ ಮಾತನಾಡಿ ಪ್ರತೀ ವರ್ಷ ಮನೆಯಲ್ಲಿ ಕವಿಗೋಷ್ಟಿ ನಡೆಸಲು ತಿಳಿಸಿದರು ಹಾಗೂ ಅವರ ಪುತ್ರ ಶ್ರೀನಾಥ್ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮೈಲಾಂಡ್ಲಹಳ್ಳಿ ಅಶ್ವತ್ಥನಾರಾಯಣ ಮಾತನಾಡಿ ಮನೆಗಳಲ್ಲಿ ಬಹುತೇಕರು ತೆಲುಗು ಮಾತನಾಡಿದರೂ ಕನ್ನಡ ಭಾಷಾಭಿಮಾನ ಅಪಾರ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ್, ಕೆಇಬಿ ನಿವೃತ್ತ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments