Wednesday, September 27, 2023
spot_img
HomeChikballapurಅಭಿವೃದ್ಧಿಗಾಗಿ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್‌ರವರನ್ನು ಗೆಲ್ಲಿಸುವoತೆ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಕರೆ

ಅಭಿವೃದ್ಧಿಗಾಗಿ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್‌ರವರನ್ನು ಗೆಲ್ಲಿಸುವoತೆ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಕರೆ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಕಾಣಬೇಕಾದರೆ ಕ್ಷೇತ್ರದ ಜನತೆ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್‌ರನ್ನು ಬಹುಮತದಿಂದ ಗೆಲ್ಲಿಸುವುದರ ಮೂಲಕ ಅಭಿವೃದ್ದಿಗೆ ನಾಂದಿ ಹಾಡಬೇಕು ಎಂದು ವಿಧಾನಪರಿಷತ್ತು ಸದಸ್ಯರಾದರಾದ ಎಂ.ಎಲ್.ಅನಿಲ್ ಕುಮಾರ್ ಹೇಳಿದರು.
ತಾಲೂಕಿನ ಕೈವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜಕಾರಣಿ ಕನಸುಗಾರನಾಗಿರಬೇಕಂತೆ ಅಂತಹ ಕನಸುಗಾರ ನಮ್ಮ ಡಾ.ಎಂ.ಸಿ. ಸುಧಾಕರ್ ಅವರನ್ನು ಸೋಲಿಸಿರುವುದು ನಮ್ಮ ದುರದೃಷ್ಟಕರ ಎಂದರು.
ಪ್ರತಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತಿ ನಗರಸಭೆ ಸೇರಿದಂತೆ ಇತರೆ ಎಲ್ಲಾ ಸ್ಥಳಿಯ ಸಂಸ್ಥೆಗಳಲ್ಲಿ ಮಾಜಿ ಶಾಸಕರ ಬೆಂಬಲಿಗರೇ ಗೆಲ್ತಾರೆ ಆದರೆ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಎರಡು ಬಾರಿ ಸೋಲಿಸಿದ್ದರಿಂದ ಚಿಂತಾಮಣಿ ನಗರ ಮತ್ತು ತಾಲ್ಲೂಕು ಅಭಿವೃದ್ದಿ ಸಂಪೂರ್ಣವಾಗಿ ಕುಂಠಿತವಾಗಿದ ಎಂದರು.
ಮಾಜಿ ಶಾಸಕರ ಭಾವಚಿತ್ರಗಳನ್ನು ಹಾಕಿಕೊಂಡು ಅವರ ಹೆಸರಲ್ಲಿ ಮತ ಕೇಳಿ ಗೆಲ್ಲುವ ನೀವು ಅವರ ಚುನಾವಣೆಯಲ್ಲಿ ಅವರು ಸೋಲು ಆಗುತ್ತಿರುವುದು ಏಕೆ ಎಂಬುದು ಗೊತ್ತಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ ಕಳೆದ 2008 ರ ಚುನಾವಣೆಯಲ್ಲಿ ಕೈವಾರದಿಂದಲ್ಲೆ ಬಹುಮತ ಸಿಕ್ಕಿದ್ದರಿಂದ ನಾನು ಶಾಸಕನಾದೆ ಆಗ ಐದು ವರ್ಷ ದುಡಿದು ಅಭಿವೃದ್ಧಿ ಮಾಡಿದ್ದೆ. ಕೋಲಾರ ತಾಲ್ಲೂಕಿನ ಮದ್ದೇರಿಗೆ ಆಗಿದ್ದ ಆಸ್ಪತ್ರೆಯನ್ನು ಕೈವಾರಕ್ಕೆ ತಂದು ಆಸ್ಪತ್ರೆ ಮಾಡಿದೆ ಎಂದರು. ತಪೋವನಕ್ಕೆ ಹೋಗುವ ರಸ್ತೆ ಕೇವಲ ಮೂರು ಮೀಟರ್ ಇತ್ತು ಅದನ್ನು ಏಳು ಮೀಟರ್ ಅಗಲದ ರಸ್ತೆ ಮಾಡಿರುವುದು ಸೇರಿದಂತೆ ಹಲವಾರು ಕಾಮಗಾರಿಗಳ ಬಗ್ಗೆ ಮಾಜಿ ಶಾಸಕರು ವಿವರಿಸಿದರು.
ಮಾಜಿ ಶಾಸಕರಿಗೆ ಕೈವಾರದಲ್ಲಿ ಅದ್ದೂರಿ ಸ್ವಾಗತ: ಕೈವಾರ ಗ್ರಾಮದಲ್ಲಿ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ರವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಹೋಬಳಿ ಮಟ್ಟದ ಸಭೆ ಮತ್ತು ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕೈವಾರಕ್ಕೆ ಅಗಮಿಸಿದ ಮಾಜಿ ಶಾಸಕರುನ್ನು ಕೈವಾರ ಹೋಬಳಿ ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರುˌ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು ಮತ್ತಿತ್ತರು ಪಟಾಕಿ ಸಿಡಿಸಿ ಹೂವು ಚೆಲ್ಲಿ ವಿವಿಧ ಘೋಷಣೆಗಳ ಮೂಲಕ ಅದ್ದೂರಿಯಾಗಿ ಬರ ಮಾಡಿಕೊಂಡರು, ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್‌ಕುಮಾರ್ ರವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಗಾತ್ರದ ಹೂವಿನ ಹಾರ ಹಾಕುವ ಮೂಲಕ ವೇದಿಕೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ: ಮಾಜಿ ಶಾಸಕರು ಮತ್ತು ಕೈವಾರ ಗ್ರಾಮದ ಅಬ್ದುಲ್ಲಾ ಮತ್ತು ಜಾಫರ್ ಸಾದಿಕ್ ರವರ ಸಮ್ಮುಖದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅನಿತಾ ರವಿ. ಶಾಫಿಜಾನ್. ಷಾ ಜಹಾನ್. ಜಬೀ. ಆಸಿಫ್, ಇಲ್ಲು., ಮುಜ್ಜು, ಅಮ್ಜದ್, ಎಸ್ ಮೌಲಾ, ಬಾಬಾ, ಹಸೇನಸಾಬ್, ಜಕಾವುಯಲ್ಲಾ ಸೇರಿದಂತೆ ಇನ್ನು ಹಲವು ಮುಸ್ಲಿಂ ಕುಟುಂಬಗಳು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಾಸ್ಮಿನ್ ಮುಸ್ಥಫಾ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾಬಾ ನಾಗರಾಜ್. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ. ಕೆಪಿಸಿಸಿ ಸದಸ್ಯರಾದ ಸೈಯದ್ ಏಜಾಜ್ ಮತ್ತು ಕೃಷ್ಣಮೂರ್ತಿ, ಸಂತೇಕಲ್ಲಹಳ್ಳಿ ಗೋವಿಂದಪ್ಪ, ಕೋಚಿಮಲ್ ನಿರ್ದೇಶಕ ಊಲವಾಡಿ ಅಶ್ವಥ್ ನಾರಾಯಣಬಾಬು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿನ್ನಪ್ಪ, ಕೈವಾರ ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಶ್ ಶೇಕ್. ಮಂಜುನಾಥರೆಡ್ಡಿ, ಕೆ.ವಿ.ಬಾಬು. ಶೇಕ್‌ಮೌಲಾ, ನಾರಾಯಣಪ್ಪ. ಎಸ್‌ಟಿಡಿ ಮಂಜುನಾಥ್. ಮಾಜಿ ನಗರ ಸಭಾ ಸದಸ್ಯ ಮಹಮ್ಮದ್ ಶಫೀಕ್. ದೇವರಾಜ್. ಭಾಸ್ಕರ್ ಮುಖಂಡರಾದ ಸಂತೇಕಲ್ಲಹಳ್ಳಿ ಮಹೇಶ್.ಕೈವಾರ ಸಾಮ್ರಾಟ್. ಇಂತಿಯಾಜ್. ಶಬ್ಬಿರುದ್ದಿನ್. ಕರಿಯಪ್ಪಲ್ಲಿ ಮಾಲೀಕ್. ಬಾಬು. ಮುಬೀನ್ ತಾಜ್. ಅಸ್ಲಂ ಪಿಟ್ಟು. ಎಟಿಎಸ್ ಶ್ರೀನಿವಾಸ್. ಬನಹಳ್ಳಿ ನಂಜುAಡಗೌಡ, ಮಹಬೂಬ್. ಲೋಕೇಶ್, ಮುನ್ನ. ಕೃಷ್ಣ. ಅಫ್ಸರ್. ದಿಲದಾರ್. ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments