Thursday, May 23, 2024
spot_img
HomeChikballapurಮುರುಗಮಲ್ಲ ದರ್ಗಾ ಅಭಿವೃದ್ಧಿಗೆ ವಕ್ಫ್ ಮಂಡಳಿಯಿoದ ಬಿಡುಗಡೆಯಾದ ಅನುದಾನದಲ್ಲಿ ಶಾಸಕರು ಕಮಿಷನ್ ಕೇಳಿದ್ದಾರೆ

ಮುರುಗಮಲ್ಲ ದರ್ಗಾ ಅಭಿವೃದ್ಧಿಗೆ ವಕ್ಫ್ ಮಂಡಳಿಯಿoದ ಬಿಡುಗಡೆಯಾದ ಅನುದಾನದಲ್ಲಿ ಶಾಸಕರು ಕಮಿಷನ್ ಕೇಳಿದ್ದಾರೆ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ: ಕಳೆದ ಎರಡು ಚುನಾವಣೆಗಳಲ್ಲಿ ಮತದಾರರಿಗೆ ನನ್ನ ವಿರುದ್ದ ಹಾಕಿದ ಧರ್ಮ ಮತ್ತು ಜಾತಿಗಳ ವಿಷದ ಬೀಜದದ ನಡುವೆಯೂ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ನಾನು ಗಳಿಸಿರುವ ಮತಗಳ ಬಗ್ಗೆ ವಿಮರ್ಶೆ ಮಾಡುವಂತೆ ಮಾಜಿ ಶಾಸಕ ಎಂ.ಸಿ.ಸುಧಾಕರ್ ತಮ್ಮ ವಿರೋಧಿಗಳಿಗೆ ತಾಕೀತು ಮಾಡಿದ ಘಟನೆ ನಡೆಯಿತು.
ಅವರು ತಾಲೂಕಿನ ಮುರಗಮಲ್ಲ ಗ್ರಾಮದಲ್ಲಿ ಹಲವು ಕುಟುಂಬಗಳು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಮಾಜಿ ಶಾಸಕರು ಕಳೆದ ಎರಡು ಚುನಾವಣೆಗಳಲ್ಲಿ ನನ್ನಿಂದ ದೂರವಾಗಿ ನಿಮ್ಮನ್ನು ಯಾರು ಆಯ್ಕೆ ಮಾಡಿದವರೆಲ್ಲಾ ಇದೇ ವೇದಿಕೆಯಲ್ಲಿ ಕುಳಿತಿದ್ದಾರೆ, ಎರಡು ಚುನಾವಣೆಗಳಂತೆ ಈ ಚುನಾವಣೆಯಲ್ಲಿ ಒಂದು ವರ್ಗದ ಜನರನ್ನು ನನ್ನಿಂದ ದೂರ ಮಾಡಲ ಧರ್ಮ ಜಾತಿಯ ಹೆಸರಿನಲ್ಲಿ ಎತ್ತಿಕಟ್ಟುವ ಕೆಲಸ ನಡೆಯಲ್ಲ ಎಂದರು.
ಎರಡು ಚುನಾವಣೆಗಳಲ್ಲಿ ಹಲವಾರು ಹಳ್ಳಿಗಳಲ್ಲಿ ನನ್ನಿಂದ ದೂರ ಮಾಡುವ ಕೆಲಸ ಮಾಡಿದ್ದು ಇದೀಗ ಅವರಿಗೆಲ್ಲಾ ಅರ್ಥವಾಗಿ ಮತ್ತೆ ನನ್ನ ಜೊತೆ ಗುರುತಿಸಿಕೊಂಡು ಇಂದು ಪಕ್ಷಕ್ಕೆ ಸೇರ್ಪಡೆಯಾಗಿ ನನ್ನ ಬೆಂಬಲವಾಗಿ ನಿಂತಿದ್ದಾರೆ ಎಂದರೆ ಇದಕ್ಕೆ ನಮ್ಮ ಮೇಲೆ ಅವರು ಇಟ್ಟಿರುವ ವಿಶ್ವಾಸವೇ ಸಾಕ್ಷಿ ಎಂದರು.
ವಿರೋಧಿಗಳು ಇತ್ತೀಚೆ ಬಹಳ ಹತಾಷರಾಗಿ ಏನೇನು ಮಾತನಾಡುತ್ತಿದ್ದಾರೆ ಅವರಿಗೆ ವೇದಿಕೆಯಲ್ಲಿರುವ ಯಾವ ಮುಖಂಡರು ಉತ್ತರ ಕೊಡಬೇಡಿ ಎಂದು ವಿನಂತಿ ಮಾಡಿದ ಮಾಜಿ ಶಾಸಕರು ಅವರಿಗೆ ಉತ್ತರ ಕೊಡಬೇಕಾದವರು ವೇದಿಕೆ ಮೇಲೆ ಇರುವ ಮುಖಂಡರಲ್ಲ ವೇದಿಕೆಯ ಮುಂಭಾಗದಲ್ಲಿ ಕುಳಿತ್ತಿರುವುವರು ಮತ್ತು ಮನೆಯಲ್ಲಿರುವ ಪ್ರಜ್ಞಾವಂತ ಮತದಾರು ಉತ್ತರ ಕೊಡುತ್ತಾರೆ ಎಂದ ಅವರು ಉತ್ತರ ನೀಡಿ ನಮ್ಮ ಬಾಯಿಯನ್ನು ಹಾಳು ಮಾಡಿಕೊಳ್ಳ ಬೇಡಿ ಎಂದು ಮನವಿ ಮಾಡಿದರು.
ತಮ್ಮ ಅವಧಿಯಲ್ಲಿ ನಡೆದಿರುವ ಹಲವಾರು ಅಭಿವೃದ್ದಿ ಕಾಮಗಾರಿಗಳ ಬಗ್ಗೆ ವಿವರಿಸಿದ ಮಾಜಿ ಶಾಸಕರು ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಅಭಿವೃದ್ದಿಯ ಬಗ್ಗೆ ಪ್ರಸ್ಥಾಪಿಸಿದಲ್ಲದೆ ಇದಕ್ಕೆ ತಾಜಾ ಉದಾಹರಣೆ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ದಿ ಮಾಡದೆ ಇರುವುದೇ ಪ್ರಮುಖ ಸಾಕ್ಷಿ ಎಂದು ಉದಾಹರಿಸಿದರು.
ಮುರುಗಮಲ್ಲ ದರ್ಗಾ ಅಭಿವೃದ್ಧಿಗೆ ವಕ್ಫ್ ಮಂಡಳಿಯಿAದ ಬಿಡುಗಡೆಯಾದ ಅನುದಾನದಲ್ಲಿ ಶಾಸಕರು ಕಮಿಷನ್ ಕೇಳಿದ್ದಾರೆ ಎಂದು ವಕ್ಪ್ ಮಂಡಳಿಯ ಅಧ್ಯಕ್ಷರೇ ಗಂಭೀರ ಆರೋಪ ಮಾಡಿದರು ಎಂದು ದೂರಿದರು.
ಇದುವರೆವಿಗೂ ಚುನಾವಣೆ ನಡೆಸಿಲ್ಲ ಮುಂದಿನ ನನ್ನ ಚುನಾವಣೆ ಹೇಗೆ ಇರುತ್ತೆ ಎಂಬುದನ್ನು ನಮ್ಮ ಹೇಳಿರುವುದನ್ನು ನೋಡಿದರೆ ವಿರೋಧಿಗಳು ಜನರಿಗೆ ಹಣ ನೀಡಿ ಗೆಲ್ಲುವ ಅಭ್ಯರ್ಥಿಗಳು ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲ ಹಾಗಾಗಿ ಅಂತಹವರಿಗೆ ತಕ್ಕಪಾಠ ಕಲಿಸ ಬೇಕೆಂದು ಕೋರಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯ ದುರಾಡಳಿ ತಕ್ಕೆ ಜನರು ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸೇರಿ ಸಾಲು ಸಾಲು ಸಮಸ್ಯೆಗಳನ್ನ ಜನರ ಬಳಿ ತಂದೊಡ್ಡಿದೆ. ಇದಲ್ಲದೇ ಸಿದ್ದರಾಮಯ್ಯ ಸರ್ಕಾರದಲ್ಲಿ ನೀಡಿದ್ದ ಎಲ್ಲಾ ಯೋಜನೆಗಳಿಗೆ ಕಡಿವಾಣ ಹಾಕಿದ್ದಾರೆ. ಸಾಮಾಜಿಕ ನ್ಯಾಯ ಇಲ್ಲದ ಈ ಸರ್ಕಾರವನ್ನ ಕಿತ್ತೊಗೆಯಬೇಕು ಈ ಮೂಲಕ ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತರಬೇಕು ಎಂದರು.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ ಮೂರ್ತಿ, ಸತ್ಯಣ್ಣ, ಸೇರಿದಂತೆ ಹಲವಾರು ಕುಟುಂಬಗಳು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುರುಗಮಲ್ಲ ಲಕ್ಷ್ಮೀ ನಾರಾಯಣರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರಾದ ಹಾಜಿ ಅನ್ಸರ್ ಖಾನ್, ಅಮೀರ್ ಜಾನ್. ಬಿಎಂಸಿ ಅಕ್ಬರ್, ಕೆಪಿಸಿಸಿ ಸದ್ಯಸರಾದ ಸೈಯದ್ ಏಜಾಜ್ ಪಾಷಾ, ಮಾಜಿ ನಗರಸಭಾ ಸದಸ್ಯರಾದ ಮೊಹಮ್ಮದ್ ಶಫಿಕ್. ಆರಿಫ್ ಖಾನ್. ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments