Thursday, April 25, 2024
spot_img
HomeChikballapurಮನೆ ಹಂಚಿಕೆ ವಿಚಾರದಲ್ಲಿ ಮುರುಗಮಲ್ಲ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗದ್ದಲ ಗಲಾಟೆ

ಮನೆ ಹಂಚಿಕೆ ವಿಚಾರದಲ್ಲಿ ಮುರುಗಮಲ್ಲ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗದ್ದಲ ಗಲಾಟೆ

ಪಾಲಾರ್ ಪತ್ರಿಕೆ | Palar Pathrike

ಚಿಂತಾಮಣಿ : ಬಸವ ವಸತಿ ಹಾಗೂ ಡಾ.ಬಿ ಆರ್ ಅಂಬೇಡ್ಕರ್ ಯೋಜನೆಯಡಿಯಲ್ಲಿ ಮನೆ ಹಂಚಿಕೆ ವಿಚಾರದಲ್ಲಿ ಅರ್ಹ ಫಲಾನುಭಾವಿಗಳು ಹಾಗೂ ಸಭೆಯಲ್ಲಿ ಹಾಜರಾಗಿದ್ದ ಕೆಲ ವ್ಯಕ್ತಿಗಳಿಂದ ಗೊಂದಲ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಗಲಾಟೆ ನಡೆದಿರುವ ಘಟನೆ ಚಿಂತಾಮಣಿ ತಾಲೂಕು ಮುರುಗಮಲ್ಲ ಗ್ರಾಮ ಪಂಚಾಯತಿ ಕಾರ್ಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಗ್ರಾಮ ಸಭೆಯಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕು ಮುರುಗಮಲ್ಲ ಹೊಬಳಿ ಮುರುಗಮಲ್ಲ ಗ್ರಾಮ ಪಂಚಾಯಿತಿಯಿAದ, ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಡಾ. ಪುಣ್ಯವತಿಮುನಿರಾಜುರವರ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಆರಂಭವಾಗುತ್ತಿದ್ದAತೆ ಒಂದು ಗುಂಪು ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನ ಸರಿಯಾದ ರೀತಿಯಲ್ಲಿ ಗುರುತಿಸಿ ಪಟ್ಟಿ ತಯಾರಿಸಿಲ್ಲ ಎಂದು ಪಟ್ಟು ಹಿಡಿದಾಗ ಮತ್ತೊಂದು ಗುಂಪು ಮನೆ ಇರುವವರಿಗೆ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಹೇಳುತ್ತಿದ್ದಾಗ ಸಭೆಯಲ್ಲಿ ಹಾಜರಿದ್ದ ಕೆಲ ವ್ಯಕ್ತಿಗಳು ಚೇರುಗಳನ್ನು ಬಿಸಾಡಿ ಕೈ ಕೈ ಮಿಲಾಯಿಸುವ ಹಂತಕ್ಕೆ ಕೊಂಡೊಯ್ದರು ನಂತರ ಗ್ರಾಮದ ಕೆಲ ಮುಖಂಡರು ಮಧ್ಯಸ್ಥಿಕೆ ವಹಿಸಿ ಸಮಾಧಾನಪಡಿಸಿ ಸಭೆಯನ್ನು ಮುಂದುವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಿಲ್ಟ್ರಿ ಶ್ರೀನಿವಾಸ್ ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಕೆಲಸ ಕಾರ್ಯಗಳು ಕಾನೂನು ಬದ್ಧವಾಗಿ ಮಾಡಲು ಆಗುವುದಿಲ್ಲ ಹೊಂದಾಣಿಕೆಯಿAದ ಪ್ರತಿಯೊಂದು ಕೆಲಸಗಳು ನಡೆಯುತ್ತದೆ ಎಂದು ಹೇಳಿದರು.

ಮನೆ ಹಂಚಿಕೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮಾಡಿ ಎಂದು ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅನ್ಸರ್ ಖಾನ್ ಮಾತನಾಡಿ ವಿಶೇಷ ಗ್ರಾಮ ಸಭೆ ಬಗ್ಗೆ ಅಧಿಕಾರಿಗಳು ಆಹ್ವಾನ ನೀಡುವದರಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಗ್ರಾಮ ಸಭೆ ಬಗ್ಗೆ ಜನರಿಗೆ ಸರಿಯಾದ ರೀತಿಯಲ್ಲಿ ಅರಿವು ಮೂಡಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಸಭೆಯಲ್ಲಿ ಹಾಜರಾಗಿದ್ದ ಗ್ರಾಮಸ್ಥರು ಸಭೆಯಲ್ಲಿ ಪದೇಪದೇ ಗೊಂದಲ ಉಂಟಾದ ಕಾರಣ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡತೆಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಅಶ್ರಫ್ ಜಾನ್.ಮಾಜಿ ಉಪಾಧ್ಯಕ್ಷರಾದ ಹಾಜಿ ಅನ್ಸರ್ ಖಾನ್,ಗ್ರಾಮ ಪಂಚಾಯತಿಯ ಸದಸ್ಯರಾದ ನರಸಿಂಹಮೂರ್ತಿ. ನರೇಶ್, ರೆಡ್ಡಮ್ಮ, ಲಕ್ಷ್ಮಿ ನಾಗರಾಜ್.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿ ಸುರೇಶ್. ಬಿಲ್ ಕಲೆಕ್ಟರ್ ಮಂಜುನಾಥ್. ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments