Friday, March 29, 2024
spot_img
HomeChikballapurಬಡಗವಾರಹಳ್ಳಿಯಲ್ಲಿ ಹೋಳಿ ಹುಣ್ಣಿಮೆ : ಸಂಭ್ರಮ

ಬಡಗವಾರಹಳ್ಳಿಯಲ್ಲಿ ಹೋಳಿ ಹುಣ್ಣಿಮೆ : ಸಂಭ್ರಮ

ಪಾಲಾರ್ ಪತ್ರಿಕೆ | Palar Pathrike

ಚಿoತಾಮಣಿ : ತಾಲ್ಲೂಕಿನ ಕಾಗತಿ ಪಂಚಾಯಿತಿ ಬಡಗವಾರಹಳ್ಳಿಯ ಪುರಾತನ ಶ್ರೀ ಮುನೇಶ್ವರ ಸ್ವಾಮಿ ದೇಗುಲದಲ್ಲಿ ಮಾಸಿಕ ಹುಣ್ಣಿಮೆಯೊಂದಿಗೆ ಹೋಳಿ ಹುಣ್ಣಿಮೆ ಸಂಭ್ರಮಿಸಲಾಯಿತು.
ಹಿರಿಯ ತತ್ವಪದಗಾರ, ವೇದಾಂತಿ ಸೋಮರ‍್ಲಹಳ್ಳಿ ಭೈರಪ್ಪನವರು ಮಾತನಾಡಿ ಹೋಳಿ ಹುಣ್ಣಿಮೆಯನ್ನು ಕಾಮದಹನ ಹಬ್ಬವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆಯಲ್ಲಿದ್ದು, ದುಷ್ಟ ಬುದ್ದಿಗಳ ದಹನವೂ ಹೌದು ಆದರೆ ಮನುಷ್ಯರಲ್ಲಿ ಅಡಗಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವುಗಳನ್ನು ಸಾಮಾನ್ಯ ಮನುಷ್ಯ ಸುಲಭವಾಗಿ ಗೆಲ್ಲಲಾಗುವುದಿಲ್ಲ ಸದ್ಗುರುಗಳ ಮುಖೇನ ಜಯಿಸಬೇಕೆಂದರು.
ಸಾಮೂಹಿಕ ಭಜನೆ ನೀತಿಕಥೆ ನಂತರ ಚಂದಿರನ ವೆಂಕಟರಮಣಪ್ಪ ಎಂದಿನAತಿದ್ದು ನಂತರ ಕನಿಶೆಟ್ಟಿಹಳ್ಳಿಯ ಲಕ್ಷಮಣ್ಣಸ್ವಾಮಿ, ರಾಮಣ್ಣ, ವೆಂಕಟರಮಣಪ್ಪ ಆದಿಲಕ್ಷö್ಮಮ್ಮ, ರಾಮಲಕ್ಷö್ಮಮ್ಮ, ಮರೆಮ್ಮ ಚಂದ್ರಕಲಾ, ಕನಕಮ್ಮ, ಚಂದ್ರಮ್ಮ, ರತ್ನಮ್ಮ, ಸೋಮರ‍್ಲಹಳ್ಳಿ ಬೈರಪ್ಪ, ನಾರಾಯಣಸ್ವಾಮಿ, ನರಸಿಂಹಪ್ಪ, ಲಕ್ಷಮ್ಮ ಇವರು ರಾಥ್ರೀಯಿಡೀ ಭಜನೆಗೆ ಗೊಲ್ಲಪಲ್ಲಿಗಡ್ಡೆ ಶ್ರೀನಿವಾಸಪ್ಪನವರ ಹಾರ್ಮೋನಿಯಂ, ಕಾಗತಿ ನರಸಿಂಹಯ್ಯನವರ ತಬಲ ಸ್ಪೂರ್ತಿದಾಯಕವಾಗಿತ್ತು.
ಟ್ರಸ್ಟ್ ಅಧ್ಯಕ್ಷ ಕಾಗತಿ ವೆಂಕಟರತ್ನA ಮಾತನಾಡಿ ಹಬ್ಬದ ಸಂಭ್ರಮದ ಮಧ್ಯೆಯೂ ಹುಣ್ಣಿಮೆ ಕಾರ್ಯಕ್ರಮ ಸಾಂಗವಾಗಿ ನಡೆದಿದ್ದಕ್ಕೆ ಸಮಾಧಾನ ವ್ಯಕ್ತಪಡಿಸಿದರು.
ಅನುಪ್ಪಲ್ಲಿ ನಾರಾಯಣಸ್ವಾಮಿ, ಕಾಗತಿ ಗಜೇಂದ್ರ, ರೂಪೇಶ್, ನಾಯನಹಳ್ಳಿ ಚಲಪತಿ ಉಪಸ್ಥಿತರಿದ್ದರು. ಕಾಗತಿ ಗಜೇಂದ್ರದಿAದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments