Thursday, March 28, 2024
spot_img
HomeChikballapurನೂತನ ಶ್ರೀ ವೀರಭದ್ರಸ್ವಾಮಿ ದೇವಾಲಯದ ಉದ್ಘಾಟನೆ

ನೂತನ ಶ್ರೀ ವೀರಭದ್ರಸ್ವಾಮಿ ದೇವಾಲಯದ ಉದ್ಘಾಟನೆ

ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿ ಹೆಬ್ಬರಿ ಗ್ರಾಮದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವರ ನೂತನ ಶಿಲಾ ಪ್ರತಿಷ್ಠಾಪನೆ, ವಿಮಾನ ಗೋಪುರ ಹಾಗೂ ಪೂಜಾವಿಧಿವಿಧಾನಗಳನ್ನು ಪ್ರಧಾನ ಅರ್ಚಕ ಮಂಜುನಾಥ್ ದೀಕ್ಷಿತ್ ಅಧ್ವೆöÊರ್ಯದಲ್ಲಿ ಸರ್ಕಾರಿ ಮುಖ್ಯ ಸಚೇತಕ ವೈ ಎ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಾಧೀಶರಾದ ಗೋಪಾಲಗೌಡರು ಮಾತನಾಡಿ ನಮ್ಮ ನಡೆ ನುಡಿ ಆಚಾರ ವಿಚಾರಗಳನ್ನು ನಾವು ಮನೆ, ಶಾಲೆ ಮತ್ತು ನಮ್ ಸಂಸ್ಕೃತಿಯ ಪ್ರತೀಕವಾದ ದೇವಸ್ಥಾನಗಳಿಂದ ಲಭಿಸುತ್ತದೆ. ಇಂದು ನಾವು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ನೂತನ ದೇವಾಲಯಗಳ ನಿರ್ಮಾಣ ಮಾಡುವುದರ ಮೂಲಕ ನಮ್ಮ ಮಕ್ಕಳಿಗೆ ನಮ್ಮ ಧರ್ಮದ ಒಳಿತುಗಳನ್ನು ದಾನ ಧರ್ಮಗಳನ್ನು ಮಕ್ಕಳಲ್ಲಿ ಮೂಡಿಸುವಲ್ಲಿ ಹಾಗೂ ಅವುಗಳನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯಕವಾಗುತ್ತವೆಂದರು.
ಸರ್ಕಾರಿ ಮುಖ್ಯ ಸಚೇತಕ ಮತ್ತು ಶ್ರೀ ವೀರಭದ್ರಸ್ವಾಮಿ ಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷ ವೈ ಎ ನಾರಾಯಣಸ್ವಾಮಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಮನೆ ದೇವರಾದ ಶ್ರೀ ವೀರಭದ್ರಸ್ವಾಮಿ ದೇವರ ದೇವಾಲಯವು ನಾನು ನಮ್ಮ ತಾಯಿಯೊಂದಿಗೆ 8 ವರ್ಷದ ವಯಸ್ಸಿನಲ್ಲಿದ್ದಾಗ ಭೇಟಿ ಕೊಟ್ಟಾಗ ಅದು ಕೇವಲ ಗುಡಿಯಾಗಿತ್ತು, ಒಬ್ಬಬ್ಬರಾಗಿ ಹೋಗಿ ಪೂಜೆ ಕಾರ್ಯಗಳನ್ನು ನೇರವೇರಿಸಬೇಕಿತ್ತು. ನಮ್ಮ ಕುಲಬಾಂಧವರು ಒಂದು ಸಣ್ಣ ದೇವಾಲಯ ನಿರ್ಮಾಣ ಮಾಡಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ, ಒಂದು ದೊಡ್ಡ ಮಟ್ಟದ ದೇವಾಲಯವನ್ನು ನಿರ್ಮಿಸೋಣವೆಂದು ತಿಳಿಸಿದಾಗ ಎಲ್ಲ ಕುಲಬಾಂಧವರು ದಾನಿಗಳ ಸಹಕಾರದೊಂದಿಗೆ ದಾನ ಧರ್ಮಗಳನ್ನು ಪಡೆಯುವ ಮೂಲಕ ಮತ್ತು ನಮ್ಮ ಕುಲಬಾಂಧವರ ಸಹಕಾರದೊಂದಿಗೆ ಇಂದು ಅರ್ಥಪೂರ್ಣವಾಗಿ ನೂತನ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು ಅದಕ್ಕೆ ನಾನು ಅಭಾರಿಯಾಗಿದ್ದೇನೆಂದು ನುಡಿದರು.

ಈ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಇಲ್ಲಿ ದೇವಾಲಯ ನಿರ್ಮಾಣದ ಸಂದರ್ಭದಲ್ಲಿ ಅಂದಿನ ಅವರ ಕಾಲದ ಕಲ್ಲಿನ ವಿಗ್ರಹಗಳು ಲಭ್ಯವಾಗಿದ್ದು ಅದನ್ನು ಇಂದು ದೇವಾಲಯದ ಗರ್ಭಗುಡಿಯಲ್ಲಿ ದೇವರ ಹಿಂಬದಿಯಲ್ಲಿರಿಸಿದ್ದು, ಅದರೊಂದಿಗೆ ವೀರಗಲ್ಲುಗಳು ಸಹಾ ಲಭ್ಯವಾಗಿದ್ದು ದೇವಾಲಯ ಆವರಣದ ಹಿಂಭಾಗದಲ್ಲಿ ಅದನ್ನು ಯಥಾವತ್ತಾಗಿ ಇರಿಸಲಾಗಿದೆಯೆಂದರು. ಈ ದೇವಾಲಯದ ನಿರ್ಮಾಣಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ನೇರವಾದ ಎಲ್ಲರಿಗೂ ಅನಂತ ನಮನಗಳನ್ನು ಸಲ್ಲಿಸಿದರು.
ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಮಂಜುನಾಥ್ ದೀಕ್ಷಿತ್, ವಿಶ್ವಾಸ್ ದೀಕ್ಷಿತ್ ಅಧ್ವೆöÊರ್ಯದಲ್ಲಿ ಮಂಗಳವಾದ್ಯ, ವೇದಪಾರಾಯಣ, ಮಹಾಗಣಪತಿ ಪೂಜೆ, ಪುಣ್ಯಾಹ, ಕಲಶಾರ್ಚನೆ, ಹೋಮ-ಹವನಾದಿಗಳು, ಗಣಪತಿ, ನವಗ್ರಹ, ಮೃತ್ಯುಂಜಯ ದೇವರ ಮೂಲಕ ಮಂತ್ರ ಮಾಲಾ ಮಂತ್ರ ಹೋಮಾದಿಗಳು, ತತ್ವ ಹೋಮ, ಕಲಾ ಹೋಮ, ಸ್ಪರ್ಶಾಹುತಿ, ದ್ರವ್ಯಾಹುತಿ, ಮಹಾಪೂರ್ಣಾಹುತಿ, ದೇವರಿಗೆ ಮಹಾ ಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ದಿವ್ಯಾಲಂಕಾರ, ಧೇನು ದರ್ಪಣ, ದೀಪ ದರ್ಶನ ಕೂಷ್ಮಾಂಡ ಕದಲಿ ವೃಕ್ಷಛೇದನ, ಧೂಪ, ದೀಪ ನೈವೇದ್ಯಗಳನ್ನು ಅಷ್ಟಾವಧಾನ ಸೇವೆ ಮತ್ತು ಮಹಾಮಂಗಳಾರತಿಗಳು ನೂತನ ಶ್ರೀ ವೀರಭದ್ರಸ್ವಾಮಿ ದೇವರಿಗೆ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಜಿಲ್ಲೆ ಶಾಖಾ ಮಠದ ಮಂಗಳಾನAದನಾಥ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ಬಿಜೆಪಿ ಮುಖಂಡ ಎಂ ಆರ್ ಬಾಬು, ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ದೇವಸ್ಥಾನದ ಎಲ್ಲ ಪದಾಧಿಕಾರಿಗಳು, ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments