Thursday, April 25, 2024
spot_img
HomeChikballapurಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟನೆ

ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟನೆ

ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ: ಕನಿಷ್ಟ 12 ಸಾವಿರ ನಿಗದಿಗೊಳಿಸುಂತೆ ಒತ್ತಾಯಿಸಿದ ಕಾರ್ಯಕರ್ತರು  

ಗೌರವಧನ ಮಾಸಿಕ 5 ಸಾವಿರ ರೂಗಳಿಗೆ ಇಡೀ ದಿನ ಕೆಲಸ ಮಾಡುವಂತಾಗಿದೆ ಇದರಿಂದ ನಮ್ಮ ಕುಟುಂಬಗಳ ನಿರ್ವಹಣೆ ಕಷ್ಟಕರವಾಗಿದೆ ನಮಗೆ ಕನಿಷ್ಟ ಮಾಸಿಕ 12. ಸಾವಿರ ರೂಗಳ ನಿಗದಿಗೊಳಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆ ಯರು ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 
ಆರೋಗ್ಯ ಇಲಾಖೆ ಕಾರ್ಯಕ್ರಮಗಳಿಗೆ ಪೂರಕವಾದ ಕೆಲಸ ಕಾರ್ಯಗಳ ನಿರ್ವಹಣೆಗೆ ನಮ್ಮನ್ನು ನೇಮಿಸಿಕೊಂಡಿದ್ದರು.ಗ್ರಾಮಸರ್ವೆ,ಕೊವಿಡ್ ನಿಯಂತ್ರಣದ ಕೆಲಸಗಳು,ಪಂಚಾಯಿತಿ ಸೌಲಬ್ಯಗಳ ಬಳಕೆ ಪ್ರಚಾರ ಈ ರೀತಿಯ ಎಲ್ಲ ಕೆಲಸಗಳಿಗೂ ಬಳಸಿಕೊಳ್ಳುತಿದ್ದು ಕೇವಲ 5 ಸಾವಿರ ರೂಗಳು ಮಾತ್ರ ಗೌರವ ದನ ನೀಡುತಿದ್ದಾರೆ. ಗೌರವ ಧನ ಕನಿಷ್ಟ 12 ಸಾವಿರ ರೂಗಳಿಗೆ ಏರಿಕೆ ಮಾಡುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ಸರು.
ಈ ವೇಳೆ ಜಿಲ್ಲಾ ಮುಖಂಡರು ಸರಸ್ವತಮ್ಮ ಮಾತನಾಡಿ ,ನಾವು ಮಾಡಬೇಕಿರುವುದು ಕೇವಲ 2 ಗಂಟೆಗಳ ಕೆಲಸ ಆದ್ರೆ ಆರೋಗ್ಯ ಇಲಾಖೆ ಜತೆಗೆ ಇತರೆ ಇಲಾಖೆ ಕೆಲಸಗಳಿಗೂ ನಮ್ಮಿಂದಲೆ ಮಾಡಿಸುತ್ತಾರೆ,ಕೋವಿಡ್ ನಿಯಂತ್ರಣ ಕೆಲಸಗಳಿಗೂ ನಮ್ಮನ್ನೆ ಬಳಸಿಕೊಳ್ಳುತ್ತಾರೆ. ಸರ್ವೆ ಕಾರ್ಯಗಳಿಗೂ ನಮ್ಮನ್ನೆ ಬಳಸಿಕೊಳ್ಳುತಿದ್ದಾರೆ ಇದರಿಂದ ನಾವು ದಿನವಿಡೀ ಇದೆ ಕೆಲಸದಲ್ಲಿ ತೊಡಗಿಸಿಕೊಂಡು ತಿಂಗಳಿಗೆ ಕೇವಲ 5 ಸಾವಿರ ರೂಗಳು ಮಾತ್ರ ಸಂಬಳ ತೆಗೆದುಕೊಳ್ಳುವಂತಾಗಿದೆ. ಇದರಿಂದ ನಮ್ಮ ಕುಟುಂಬ ನಿರ್ವಹಣೆ ಕಷ್ಟಸಾದ್ಯವಾಗುತ್ತಿದೆ ಆದ್ದರಿಂದ ನಮಗೆ ಕನಿಷ್ಟ 12 ಸಾವಿರ ರೂಗಳನ್ನಾದ್ರು ನಿಗದಿಗೊಳಿಸಬೇಕು. ಕೊಡೋ ಹಣವನ್ನ ಒಂದೆ ಬಾರಿ ಕೊಡಬೇಕು. ಅದನ್ನ ಪೀಸ್ ವರ್ಕ್ ಮಾಧರಿ ಹಂತಹಂತವಾಗಿ ಕೋಡೋದು ಬೇಡ ಎಂದು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments