Monday, March 4, 2024
spot_img
HomeChikballapurವೆಬ್ ಕ್ಯಾಸ್ಟಿಂಗ್ ಮತ್ತು ಮೈಕ್ರೋ ರ‍್ಬ್ಸವರ್ ಗಳ ಮೂಲಕ ಕಣ್ಗಾವಲು

ವೆಬ್ ಕ್ಯಾಸ್ಟಿಂಗ್ ಮತ್ತು ಮೈಕ್ರೋ ರ‍್ಬ್ಸವರ್ ಗಳ ಮೂಲಕ ಕಣ್ಗಾವಲು

ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ನರ‍್ದೇಶನದಂತೆ ಶೇ.25 ಮತಗಟ್ಟೆಗಳಿಗೆ ಮೈಕ್ರೋ ರ‍್ಬ್ಸವರ್ ಗಳನ್ನು ನೇಮಕ ಮಾಡಲಾಗುವುದು. ಶೇ.50 ರಷ್ಟು ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮೂಲಕ ಮತ ಚಲಾವಣೆಯ ಮೇಲೆ ಸಂಪರ‍್ಣ ನಿಗಾವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡುತ್ತಾ, ಚುನಾವಣಾ ಪ್ರಕ್ರಿಯೆಗಳಲ್ಲಿ ರಾಜಕೀಯ ಪಕ್ಷಗಳ ಮತ್ತು ಅಭ್ರ‍್ಥಿಗಳ ಪಾತ್ರವೇನು? ಎಂಬುದನ್ನು ಹಾಗೂ ಆಯೋಗದ ಮರ‍್ಗಸೂಚಿ ಕ್ರಮಗಳನ್ನು ನಿಯಮಿತವಾಗಿ ಕಾಲಾನು ಕ್ರಮಕ್ಕೆ ಸಭೆಗಳನ್ನು ನಡೆಸಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳು ತಿಳಿಸುತ್ತಾ ಬಂದಿವೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕರ‍್ಯ ಆರಂಭವಾಗಿ ಚಾಲ್ತಿಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಗಳಿಗೆ ನಿಯಮಾವಳಿ ರೀತ್ಯ ಹೇಗೆ ನಡೆದುಕೊಳ್ಳಬೇಕು. ಈ ಬಾರಿಯ ವಿಶೇಷತೆಗಳೇನು ಎಂಬ ಕುರಿತು ಕೂಲಂಕಷವಾಗಿ ಪ್ರತಿನಿಧಿಗಳಿಗೆ ತಿಳಿಸಿಕೊಟ್ಟರು.
ಜಿಲ್ಲೆಯಲ್ಲಿ ತೆರೆದಿರುವ 1,281 ಮತಗಟ್ಟೆಗಳಿಗೆ ಶೇ 100 ರಷ್ಟು ಮೂಲಭೂತ ಸೌರ‍್ಯಗಳನ್ನು ಕಲ್ಪಿಸಲಾಗಿರುತ್ತದೆ. ಶಾಂತಿಯುತ, ನ್ಯಾಯ ಸಮ್ಮತ ಹಾಗೂ ಸುಗಮ ಚುನಾವಣೆಗಾಗಿ ಸಿ.ಎ.ಪಿ.ಎಫ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಪ್ರಸ್ತುತದ ಮಾಹಿತಿಯಂತೆ ಜಿಲ್ಲೆಯಲ್ಲಿ 440 ಕ್ಲಿಷ್ಟಕರ ಮತಗಟ್ಟೆಗಳು ಮತ್ತು 38 ವಲ್ನರಬಲ್ ಮತಗಟ್ಟೆಗಳನ್ನು ಗರ‍್ತಿಸಲಾಗಿದೆ. ಈ ಮತಗಟ್ಟೆಗಳು ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರು ಬಂದ ನಂತರ ಬದಲಾವಣೆ ಆಗುವ ಸಾಧ್ಯತೆ ಕೂಡ ಇರಲಿದೆ ಎಂದು ಮಾಹಿತಿ ನೀಡಿದರು.
ಮರ‍್ಚ್ 29 ರಂದು ಚುನಾವಣಾ ವೇಳಾ ಪಟ್ಟಿಯಂತೆ ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗಿ ಸುಗಮವಾಗಿ ನಡೆಯುತ್ತಿವೆ. 1600 ಮತದಾರರು ಅಥವಾ ಅದಕ್ಕಿಂತ ಹೆಚ್ಚಿನ ಮತದಾರರು ಇದ್ದಲ್ಲಿ ಅಂತಹ ಮತಗಟ್ಟೆಗೆ ಆಕ್ಸಿಲರಿ ಮತಗಟ್ಟೆ ಸ್ಥಾಪಿಸಲು ಆಯೋಗ ನರ‍್ದೇಶನ ನೀಡಿರುತ್ತದೆ. ಅಂತಹ ಮತಗಟ್ಟೆಗಳು ಜಿಲ್ಲೆಯಲ್ಲಿ ಇರುವುದಿಲ್ಲ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 158ರಲ್ಲಿ 1,569 ಮತದಾರರಿವುದು ಅತೀ ಹೆಚ್ಚು ಮತದಾರರಿರುವ ಗರಿಷ್ಟ ಸಂಖ್ಯೆಯ ಮತಗಟ್ಟೆಯಾಗಿದೆ. ಅದೇ ರೀತಿ ಬಾಗೇಪಲ್ಲಿ ಕ್ಷೇತ್ರದ ಮತಗಟ್ಟೆ ಸಂಖ್ಯೆ 149 ರಲ್ಲಿ 207 ಮತದಾರರಿದ್ದು, ಕಡಿಮೆ ಮತದಾರರಿರುವ ಮತಗಟ್ಟೆಯಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ|| ಎನ್.ತಿಪ್ಪೇಸ್ವಾಮಿ, ಕಾಂಗ್ರೆಸ್ ಪಕ್ಷದ ಪ್ರತಿನಿಧಿ ಮಧುಸೂದನ್, ಜೆ.ಡಿ.ಎಸ್ ಪಕ್ಷದ ಪ್ರತಿನಿಧಿ ನಾರಾಯಣಸ್ವಾಮಿ, ಅಂಚೆ ಮತದಾನದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಯೋಜನಾ ನರ‍್ದೇಶಕ ಗಿರಿಜಾ ಶಂಕರ್ ಹಾಗೂ ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments