Tuesday, June 6, 2023
spot_img
HomeChikballapurಸುಭದ್ರ ಪ್ರಜಾಪ್ರಭುತ್ವಕ್ಕೆ ಮತ ಚಲಾಯಿಸಿ: ಜಿಲ್ಲಾಧಿಕಾರಿ ಎಂ.ಎನ್.ನಾಗರಾಜು

ಸುಭದ್ರ ಪ್ರಜಾಪ್ರಭುತ್ವಕ್ಕೆ ಮತ ಚಲಾಯಿಸಿ: ಜಿಲ್ಲಾಧಿಕಾರಿ ಎಂ.ಎನ್.ನಾಗರಾಜು

ಪಾಲಾರ್ ಪತ್ರಿಕೆ | Palar Pathrike

ಶಿಡ್ಲಘಟ್ಟ: ಮತದಾನ ನಮ್ಮ ಹಕ್ಕು ಹಾಗೂ ಪವಿತ್ರ ರ‍್ತವ್ಯ. ಈ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸುವ ಮೂಲಕ ಸುಭದ್ರ ಪ್ರಜಾಪ್ರಭುತ್ವ ಕಟ್ಟೊಣ. ಯಾರು ಕೂಡ ಮತದಾನದ ಅವಕಾಶದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಸರ‍್ವಜನಿಕರಲ್ಲಿ ಮನವಿ ಮಾಡಿದರು.
ಅವರು ಶನಿವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವೀಪ್ ಕರ‍್ಯಕ್ರಮದ ವಾಹನಗಳು ಮತ್ತು ಅಲಂಕಾರ ಮಾಡಿದ ಎತ್ತಿನ ಬಂಡಿಗಳಿಗೆ ಹಸಿರು ನಿಶಾನೆ ತೋರಿಸಿ ಹಾಗೂ ಹಸುಗಳಿಗೆ ಬಾಳೆಹಣ್ಣು ತಿನ್ನಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಮಪತ್ರಗಳ ಸಲ್ಲಿಕೆ ಪ್ರಾರಂಭವಾಗಿದ್ದು, ಸ್ರ‍್ಧೆ ಸಾಮಾನ್ಯವಾಗಿ ಶುರುವಾಗಿದೆ. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಕೇಂದ್ರ ಮಿಲಿಟರಿ ಸೈನಿಕರು ತಪಾಸಣೆ ವೇಳೆಯಲ್ಲಿ ಉತ್ತಮವಾಗಿ ಕೆಲಸ ನಿಭಾಯಿಸುತ್ತಿದ್ದಾರೆ. ಇನ್ನೂ ಶಿಡ್ಲಘಟ್ಟದಲ್ಲಿ ಮೂರು ಚಿಕ್ ಪೋಸ್ಟ್ ಗಳು ಸೇರಿದಂತೆ ಜಿಲ್ಲೆಯಾದ್ಯಂತ 18 ಚೆಕ್ ಪೋಸ್ಟ್ ಗಳಲ್ಲಿ ತನಿಖೆಯ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲಾ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ನಿಯೋಜಿಸಿದ ತಂಡಗಳು ಉತ್ತಮ ರೀತಿಯಾಗಿ ತನಿಖಾ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿದ್ದು, ಈಗಾಗಲೇ ಜಿಲ್ಲೆಯಾದ್ಯಂತ 32 ಪ್ರಕರಣಗಳು ದಾಖಲಾಗಿದ್ದು, ಚುನಾವಣಾ ಪ್ರಕ್ರಿಯೆಯು ಸಮಗ್ರ ಹಾಗೂ ನ್ಯಾಯ ಸಮ್ಮತ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಜಿಲ್ಲಾ ಮತ್ತು ತಾಲ್ಲೂಕು ವ್ಯಾಪ್ತಿಯ ಸರ‍್ವಜನಿಕರಿಗೆ ಮನವಿ ಮಾಡಿದರು.
ಸ್ವೀಪ್ ಕರ‍್ಯಕ್ರಮದ ವಾಹನಗಳು ಮತ್ತು ಅಲಂಕಾರ ಮಾಡಿದ ಎತ್ತಿನ ಬಂಡಿಗಳೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ವೀಪ್ ಕರ‍್ಯಕ್ರಮ ಹಮ್ಮಿಕೊಂಡಿದ್ದು, ವಾಹನಗಳಲ್ಲಿ ಸ್ವೀಪ್ ಸಂಬಂಧ ಆಡಿಯೋ ಜಿಂಗಲ್ಸ್ ಗಳನ್ನು ಅಳವಡಿಸಿಕೊಂಡು ಸರ‍್ವಜನಿಕರಿಗೆ ಪರ‍್ಣ ಮತದಾನವನ್ನು ಮಾಡುವಂತೆ ಅರಿವು ಮೂಡಿಸಲಾಗುತ್ತಿದೆ. ತಾಲ್ಲೂಕು ಪಂಚಾಯಿತಿ ವತಿಯಿಂದ 28 ಗ್ರಾಮ ಪಂಚಾಯಿತಿಯ ಪೈಕಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಹಾಗೂ ಕರ‍್ಯರ‍್ಶಿಯವರ ನೇತೃತ್ವದಲ್ಲಿ ಹೋಬಳಿವಾರು ತಂಡಗಳಾಗಿ ವಿಂಗಡಿಸಿ‌ ತಾಲ್ಲೂಕಿನಾದ್ಯಂತ ದರ‍್ಬಲ ಹಾಗೂ ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಮತಗೆಟ್ಟೆಗಳಲ್ಲಿ ಮತದಾನ ಅರಿವು ಮತ್ತು ಜಾಗೃತಿ ಮೂಡಿಸಲು ಜಾಥಾ ಕರ‍್ಯಕ್ರಮವನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕರ‍್ಯನರ‍್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ರವರು ಮತಾನಾಡಿ, ಕಡ್ಡಾಯ ಮತದಾನದ ಹಾಗೂ ಮತದಾರರು ಯಾವುದೇ ಜಾತಿ-ಮತ,ಭೇದ-ಭಾವ.ಆಸೆ-ಆಮಿಷಗಳಿಗೆ ಒಳಗಾಗದೆ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ಮತದಾನದ ಮಹತ್ವವನ್ನು ವಿವರಿಸುವುದರ ಜೊತೆಗೆ 18 ರ‍್ಷ ಮೇಲ್ಪಟ್ಟ ಇತರರನ್ನು ಪ್ರೇರೇಪಿಸುವುದರ ಮೂಲಕ ಬೇರೆ ಜಿಲ್ಲೆಯ ಮತದಾರರು ಪೋಸ್ಟಲ್ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಬೇಕು. ಜಿಲ್ಲೆಯ ಎಲ್ಲಾ ಮತದಾರರು ಮೇ 10 ರಂದು ತಪ್ಪದೆ ತಮ್ಮ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಬೇಕು ತಿಳಿಸಿದರು.
ಈ ಸಂರ‍್ಭದಲ್ಲಿ ತಾಲ್ಲೂಕು ಕರ‍್ಯನರ‍್ವಾಹಕ ಅಧಿಕಾರಿ ಮುನಿರಾಜ, ತಾಲ್ಲೂಕು ಚುನಾವಣಾಧಿಕಾರಿ ಜಾವಿದ ನಸೀಮಾ ಖಾನಮ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ನರೇಗಾ ಸಹಾಯಕ ನರ‍್ದೇಶಕರಾದ ಚಂದ್ರಪ್ಪ, ತಾಲ್ಲೂಕು ರ‍್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಅಆPಔ ನೌತಾಜ್, ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಕರ‍್ಯರ‍್ಶಿಗಳು ತಾಲ್ಲೂಕು ನರೇಗಾ ಸಂಯೋಜಕ ಲೋಕೇಶ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ, ನರೇಗಾ ಸಿಬ್ಬಂದಿ, ಅಂಗನವಾಡಿ ಕರ‍್ಯರ‍್ತೆಯರು, ಆಶಾ ಕರ‍್ಯರ‍್ತೆಯರು ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments