Friday, April 19, 2024
spot_img
HomeChikballapurಕಸಾಪ ಚುನಾವಣೆ ಸಮಯದಲ್ಲಿ ಮತದಾನದ ಹಕ್ಕು ಸಿಗುತ್ತದೆ ಎಂಬ ಕಾರಣಕ್ಕೆ ಸದಸ್ಯತ್ವ ಪಡೆದುಕೊಳ್ಳಬೇಡಿ

ಕಸಾಪ ಚುನಾವಣೆ ಸಮಯದಲ್ಲಿ ಮತದಾನದ ಹಕ್ಕು ಸಿಗುತ್ತದೆ ಎಂಬ ಕಾರಣಕ್ಕೆ ಸದಸ್ಯತ್ವ ಪಡೆದುಕೊಳ್ಳಬೇಡಿ

ಬಾಗೇಪಲ್ಲಿ: ಕನ್ನಡ ಬಾಷೆ ಬಗ್ಗೆ ಪ್ರೀತಿ ಮತ್ತು ಆಸಕ್ತಿ ಹೊಂದಿರುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತುನ ಸದಸ್ಯತ್ವ ಪಡೆದುಕೊಂಡು ಕನ್ನಡ ಬಾಷೆಗೆ ಶಕ್ತಿ ತುಂಬುವAತಹ ಕೆಲಸ ಮಾಡಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಪದವಿ ಪೂರ್ವ ಕಾಲೇಜುನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರವೇ ಹಾಗೂ ರೈತ ಸಂಘ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ಅಭಿನಂದ ನಾ ಸಮಾರಂಭದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಕಸಾಪ ನೂತನ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪರನ್ನು ಸನ್ಮಾನಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಮಾತನಾಡಿ, ಕಸಾಪ ಚುನಾವಣೆ ಸಮಯದಲ್ಲಿ ಮತದಾನದ ಹಕ್ಕು ಸಿಗುತ್ತದೆ ಎಂಬ ಕಾರಣಕ್ಕೆ ಸದಸ್ಯತ್ವ ಪಡೆದುಕೊಳ್ಳಬೇಡಿ, ಕನ್ನಡ ಬಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವ ಹಾಗೂ ಗಡಿ ಗ್ರಾಮ ಗಳಲ್ಲಿ ಕನ್ನಡ ಬಾಷೆಯನ್ನು ಶಾಶ್ವತವಾಗಿ ಉಳಿಸಿ ಕೊಳ್ಳುವ ಭಾವನೆ ಇರುವವರು ಮಾತ್ರ ಕನ್ನಡ ಬಾಷೆ ಮತ್ತು ಸಾಹಿತ್ಯ ಲೋಕಕ್ಕೆ ಬನ್ನಿ. ಕನ್ನಡ ಸಾಹಿತ್ಯವನ್ನು ನಾವು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸುವ ಉದ್ದೇಶ ಇರಬಾರದು. ರಾಜ್ಯದ ಗಡಿಗ್ರಾಮಗಳ ಬಳಿ ಕನ್ನಡ ಬಾಷೆ ವಿಚಾರದಲ್ಲಿ ಗಲಾಟೆ ನಡೆದರೆ ನಾವು ಸುಮ್ಮನೆ ಕೂರಬಾರದು, ಬಾಷೆಯ ಉಳಿವಿಗಾಗಿ ಹೋರಾಟ ಕ್ಕೆ ಮುಂದಾಗಿ ಜೈಲು ಸೇರುವವರ ಜೊತೆಯಲ್ಲಿ ಕಸಾಪ ಸದಸ್ಯರು ಸೇರಿಕೊಂಡು ಕನ್ನಡ ಪರ ಹೋರಾಟಗಾರರ ಹೋರಾಟಕ್ಕೆ ಸಾಥ್ ನೀಡು ವಂತಹ ಕೆಲಸ ಮಾಡಬೇಕಾಗಿದೆ. ನಾಡು, ನುಡಿ, ಬಾಷೆ, ಸಾಹಿತ್ಯ ವಿಚಾರದ ಬಗ್ಗೆ ಚರ್ಚೆ ಬಂದಾಗ ಪ್ರತಿಯೊಬ್ಬರು ತಮ್ಮ ಕರ್ತವ್ಯದಂತೆ ಭಾವಿಸಿ ಎಲ್ಲವನ್ನು ಉಳಿಸಿಕೊಳ್ಳಬೇಕಾಗಿದೆ. ೪ ದಶಕಗ ಳಿಂದ ಜಿಲ್ಲೆಯಲ್ಲಿ ನಾವು ಹಮ್ಮಿಕೊಂಡಿರುವ ಕನ್ನಡ ಪರ ಕಾರ್ಯಕ್ರಮಗಳನ್ನು ಮೆಚ್ಚಿ ಜಿಲ್ಲೆಯ ಜನತೆ ಪ್ರೀತಿಯಿಂದ ಆಹ್ವಾನಿಸಿದ್ದಾರೆ. ಜಿಲ್ಲಾಧ್ಯಂತ ನಾವು ಹಮ್ಮಿಕೊಂಡಿರುವ ಹಲವು ಕನ್ನಡ ಪರ ಕಾರ್ಯ ಕ್ರಮಗಳ ಪ್ರತಿಫಲ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಶ್ರಮದಿಂದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಟಿ.ವಿರಾಂ ಜನೇಯ, ಕಸಾಪ ತಾಲೂಕು ಅಧ್ಯಕ್ಷ ಎ.ಜಿ.ಸುಧಾ ಕರ್, ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಕೃಷ್ಣ, ಪ್ರಗತಿಪರ ಚಿಂತಕ ಡಾ.ಅನಿಲ್ ಕುಮಾರ್, ಸರ್ಕಾ ರಿ ನೌಕರರ ಸಂಘದ ಗೌರಾಧ್ಯಕ್ಷ ಆರ್.ಹನು ಮಂತರೆಡ್ಡಿ, ಅಮೃತಕುಮಾರ್, ಡಾ.ಗೋಪಾಲ ಗೌಡ, ಗಾನಅಶ್ವಥ್, ಚಲಪತಿಗೌಡ, ಬಿಳ್ಳೂರು ಕೆ.ಎಂ.ನಾಗರಾಜು, ಉಮೇಶ್‌ಬಾವಿಕಟ್ಟಿ, ಶಿವಶಂಕರಚಾರಿ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments