Friday, March 31, 2023
spot_img
HomeChamarajanagarಕೇಂದ್ರ ಸರ್ಕಾರದ ಸೇವೆ, ಪ್ರಧಾನಿಯವರ ದೂರದರ್ಶಿತ್ವ 2047 ವಿಷಯ, ಬುಡಕಟ್ಟು ಜನತೆ ಅಭಿವೃದ್ದಿಯ ಕುರಿತ ಛಾಯಾಚಿತ್ರ...

ಕೇಂದ್ರ ಸರ್ಕಾರದ ಸೇವೆ, ಪ್ರಧಾನಿಯವರ ದೂರದರ್ಶಿತ್ವ 2047 ವಿಷಯ, ಬುಡಕಟ್ಟು ಜನತೆ ಅಭಿವೃದ್ದಿಯ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಉಸ್ತುವಾರಿ ಸಚಿವರಿಂದ ಚಾಲನೆ

ಚಾಮರಾಜನಗರ:- ಭಾರತ ಸರ್ಕಾರದ 8 ವರ್ಷಗಳ ಸೇವೆ ಹಾಗೂ ಪ್ರಧಾನ ಮಂತ್ರಿಯವರ ದೂರದರ್ಶಿತ್ವ – 2047 ಹಾಗೂ ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ ಹಾಗೂ ಮೈಸೂರು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಸಂಯುಕ್ತಾಶ್ರಯದಲ್ಲಿ ಕೊಳ್ಳೇಗಾಲದ ಜೆ.ಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಉದ್ಘಾಟಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಮುಂಡಾ ಎನ್ನುವ ಬುಡಕಟ್ಟು ತಾಂಡಾದಲ್ಲಿ ಜನಿಸಿದ ಬಿರ್ಸಾ ರವರು ತಮ್ಮ 24ನೇ ವಯಸ್ಸಿನಲ್ಲಿ ಬ್ರಿಟೀಷರ ವಿರುದ್ಧ ಬುಡಕಟ್ಟು ಜನರ ಉದ್ದಾರಕ್ಕಾಗಿ, ಅವರ ಹಕ್ಕುಗಳಿಗಾಗಿ, ದಾಸ್ಯ ಮುಕ್ತಿಗಾಗಿ ಮಾಡಿದ ಹೋರಾಟದ ಫಲವಾಗಿ ಅವರನ್ನು ಬುಡಕಟ್ಟು ಜನಸಮುದಾಯ ಭಗವಾನ್ ಎನ್ನುವ ಪಟ್ಟವನ್ನು ಕೊಟ್ಟಿತು ಎಂದರು.

ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಮುಖ್ಯವಾಗಿ ಸರ್ವರಿಗೂ ಸೂರು, ಆಯುಷ್ಮಾನ್ ಭಾರತ, ಆರೋಗ್ಯ ರಕ್ಷಣೆ ಮತ್ತು ಸಾಂಕ್ರಾಮಿಕ ನಿರ್ವಹಣೆ, ಸಶಕ್ತ ರೈತ ಸಮೃದ್ಧ ಭಾರತ, ಆದಿವಾಸಿಗಳ ಸರ್ವತೋಮುಖ ಅಭಿವೃದ್ದಿಯ ಖಾತ್ರಿ, ಹರ್ ಘರ್ ಜಲ್, ರಾಷ್ಟಿçÃಯ ಶಿಕ್ಷಣ ನೀತಿ 2020, ದಿವ್ಯಾಂಗರ ಸಬಲೀಕರಣ ಮತ್ತು ಸಂಪರ್ಕಿತ ಭಾರತ ನಿರ್ಮಾಣ ಇವುಗಳ ಮೂಲಕ ದೇಶವನ್ನು ಅಭಿವೃದ್ಧಿಯ ಮಾರ್ಗದಲ್ಲಿ ಪ್ರಧಾನ ಮಂತ್ರಿಯವರು ಮುನ್ನಡೆಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎನ್. ಮಹೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್, ಕೇಂದ್ರ ಸಂವಹನ ಇಲಾಖೆಯ ಉಪನಿರ್ದೇಶಕರಾದ ಡಾ. ಟಿ.ಸಿ. ಪೂರ್ಣಿಮಾ, ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ರಾಜೇಶ್ ಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments