Thursday, April 25, 2024
spot_img
HomeChamarajanagarರಾಜೀ ಮಾಡೋದಾದರೆ ಮಹಿಳಾ ಠಾಣೆಯೇಕೆ!?

ರಾಜೀ ಮಾಡೋದಾದರೆ ಮಹಿಳಾ ಠಾಣೆಯೇಕೆ!?

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ: ಮಹಿಳಾ ಸಂಬಂದಿತ ದೂರುಗಳು ಬಂದರೆ ಸರಿಯಾಗಿ ವಿಚಾರಣೆ ಮಾಡದೆ ಯಾವ್ದೊ ಪ್ರಲೋಭನೆಗೊಳಪಟ್ಟು ರಾಜೀ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕೌಟುಂಬಿಕ ಸಮಸ್ಯೆಗಳು,‌ಮಹಿಳಾ ಸಂಬಂದಿತ ದೂರು ಬಂದಾಗ ಮಹಿಳಾ ಠಾಣೆ ಮೆಟ್ಟಿಲೇರೋದು ಸಹಜ.ಆದರೆ ಬಂದಂತ ಬಹುತೇಕ ಪ್ರಕರಣಗಳು ಯಾವ್ದೊ ಪ್ರಲೋಭನೆಗೊಳಪಟ್ಟು ರಾಜೀ ಮಾಡುವುದರಿಂದ ಸಾಮಾಜಿಕ ನ್ಯಾಯ ದೊರೆಯದಂತಾಗಿದೆ. ಇತ್ತೀಚೆಗಷ್ಟೆ ಪಟ್ಟಣ ಠಾಣೆಗೆ ಬಂದ ಮಹಿಳಾ ದೂರರ್ಜಿ ಸಂಬಂದ ಅದನ ಮಹಿಳಾ ಠಾಣೆಗೆ ವರ್ಗಾಯಿಸಲಾಯಿತು. ವಿಪರ್ಯಾಸವೆಂದರೆ ಪೊಲೀಸಪ್ಪ ಮಾಡಿದರೆನ್ನಲಾದ ತಪ್ಪನ್ನ ಓರ್ವ ಸಬ್ ಇನ್ಸ್ ಪೆಕ್ಟರ್ ಸ್ವಜಾತಿ ಪ್ರೇಮದಿಂದ  ಮುಚ್ಚಲ್ಪಟ್ಟರೆ. ಮತ್ತೊಬ್ಬ ಮಹಿಳಾ ಎಸ್ಐ ಇಲಾಖಾ ಮಾನ ಮರ್ಯಾದೆ ಮುಚ್ಚಲು ರಾಜೀಗೊಪ್ಪಿಸಿ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಪೊಲೀಸಪ್ಪನ ವಿಕೃತ ವರ್ತನೆ ಮಾದ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಉನ್ನತ ಅದಿಕಾರಿಗಳು ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ಅದೀಕ್ಷಕರಿಗೆ ಸೂಚಿಸಿದ ಹಿನ್ನಲೆಯಲ್ಲಿ ಅದಿಕಾರಿಗಳು ಪರಿಶೀಲಿಸಿ ಅಮಾನತು ಮಾಡಿದ್ದಾರೆ ಎನ್ನಲಾಗಿದೆ. ಮಹಿಳಾ ಠಾಣೆಯಲ್ಲಿ ಯಾವ್ದೊ ಪ್ರಲೋಭನೆಗೊಳಪಟ್ಟು ಪ್ರಕರಣ ರಾಜೀ ಮಾಡಲಾಗುತ್ತಿದೆ ಎಂಬ ಅಂಶಕ್ಕೆ ಈ ಪ್ರಕರಣ ಪೂರಕವಾಗಿ ಉನ್ನತ ಅದಿಕಾರಿಗಳು ವಿಚಾರಣೆ ನಡೆಸಿಲು ಆದೇಶಿಸಿದ ತಪ್ಪು ಎಂಬುದು ಗೊತ್ತಾಗಿದೆ.ಆದರೆ ಅದ್ಕಿಂತ ಮುಂಚೆಯ ಪ್ರಕರಣ ಮುಚ್ಚಿ ಹಾಕಲು ಬೇರೆ ವರದಿ ಸಿದ್ದಪಡಿಸಿದ್ದು ಈಗ ಮುಚ್ಚಿಡುವಂತಿಲ್ಲದಂತಾಗಿದೆ. ಚಾಮರಾಜನಗರ ಮಹಿಳಾ ಠಾಣೆಯಲ್ಲಿ  ಇಬ್ಬರು ಸಬ್ ಇನ್ಸ್ ಪೆಕ್ಟರ್ , ಮೂರ್ನಾಲ್ಕು ಎಎಸ್ಐ ಹಾಗೂ ಮುಖ್ಯಪೇದೆಗಳು ಹಾಗೂ ನಾಲ್ಕು ಐದು ಪೇದೆ ಗಳಿದ್ದು ಒಂದೆರಡು ಜೀಪ್, ಒಂದೆರಡು ದ್ವಿ ಚಕ್ರ ವಾಹನಗಳಿದ್ದು ಎಲ್ಲಕ್ಕಿಂತ ಮಿಗಿಲಾಗಿ ವಸತಿ ನಿಲಯ.. ಟಿಎಡಿಎ ಎಲ್ಲ ಸವಲತ್ತು  ನೀಡಿದರೂ ನೊಂದವರಿಗೆ ನ್ಯಾಯ ನೀಡೊ ಬದಲು ಯಾವ್ದೊ ಪ್ರಲೋಭನೆಗೊಳಪಟ್ಟು ರಾಜೀ ಮಾಡೋದಾದರೆ ಠಾಣೆಗಳೇಕೆ ಬೇಕು ಎಂಬುದು ಮಾತ್ರ ಸಾರ್ವಜನಿಕರ ವಾದವಾಗಿದೆ.——————–ಪೇದೆ ಅಮಾನತುಚಾಮರಾಜನಗರ: ಅನ್ಯ ಹಿಳೆಯೊಂದಿಗೆ ಲೈಂಗಿಕ ಸಂಪರ್ಕದ ಹೊಂದಿ ಆಸ್ಪತ್ರೆಗೆ ದಾಖಲಿದ ಮೇರೆಗೆ  ಕರ್ತವ್ಯಲೋಪ ಆರೋಪದಲ್ಲಿ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಮುಖ್ಯಪೇದೆ ಮುನಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಎರಡು ದಿನಗಳ ಹಿಂದೆ ಸಿಮ್ಸ್ ಆಸ್ಪತ್ರೆಗೆ ಬಂದಿದ್ದ ಹನೂರು ತಾಲ್ಲೂಕಿನ ಮಹಿಳೆಯೊಬ್ಬರನ್ನು ಮುನಿಯಪ್ಪ ಅವರು ತಮ್ಮ ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅವರೊಂದಿಗೆ ಲೈಂಗಿಕತೆಯ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಲೈಂಗಿಕ ಸಂಪರ್ಕದಿಂದ  ಅಸ್ವಸ್ಥಗೊಂಡ ಅವರನ್ನು ಸಿಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು. ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಸಂಬಂಧ ಮಹಿಳೆ ದೂರು ನೀಡಿಲ್ಲವಾದರೂ ಆಸ್ಪತ್ರೆಯಿಂದ ಠಾಣೆಗೆ ಬಂದ ಎಂಎಲ್‌ಸಿ (ಮೆಡಿಕಲ್ ಲೀಗಲ್ ಕೇಸ್) ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅವರು ಮುನಿಯಪ್ಪ ಅವರನ್ನು ಅಮಾನತು ಮಾಡಿ ಶನಿವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ವಿಚಾರಿಸಿದಾಗ, ‘ಮಹಿಳೆ ಅಸ್ವಸ್ಥಗೊಂಡು ಬಂದಿರುವುದು ನಿಜ. ನಾವು ಚಿಕಿತ್ಸೆಯನ್ನೂ ನೀಡಿದ್ದೇವೆ. ತಾನು ಬಿದ್ದು ಅಸ್ವಸ್ಥಗೊಂಡೆ ಎಂದು ಹೇಳಿಕೆ ನೀಡಿದ್ದಾರೆ’ ಎಂದರು.
‘ಮಹಿಳೆ ನಮಗೆ ದೂರು ಕೊಟ್ಟಿಲ್ಲ. ಆದರೆ ನಮ್ಮ ಸಿಬ್ಬಂದಿಯೊಬ್ಬರು ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಮಾಹಿತಿ, ಅದಕ್ಕೆ ಪೂರಕ ದಾಖಲೆ ನಮಗೆ ಸಿಕ್ಕಿದೆ. ಹಾಗಾಗಿ, ಸ್ವಯಂ ಪ್ರೇರಿತವಾಗಿ ಈ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್  ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments