Friday, March 29, 2024
spot_img
HomeChamarajanagarಎಗ್ಗಿಲ್ಲದೆ ಸರ್ಕಾರಿ ವಾಹನಗಳ ದುರುಪಯೋಗ…! ಪೊಲೀಸ್ ಇಲಾಖೆಯೂ ಹೊರತಲ್ಲ.!

ಎಗ್ಗಿಲ್ಲದೆ ಸರ್ಕಾರಿ ವಾಹನಗಳ ದುರುಪಯೋಗ…! ಪೊಲೀಸ್ ಇಲಾಖೆಯೂ ಹೊರತಲ್ಲ.!

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ : ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ವಾಹನಗಳು ಖಾಸಗೀ ವಾಹನಗಳಾಗಿ,ಸದ್ಬಳಕೆಗಿಂತ
ದುರ್ಬಳಕೆಯಾಗುತ್ತಿದ್ದು,ಇದಕ್ಕೆ ಸಂಬಂದಿಸಿದಂತೆ ಇಲ್ಲಿಯ ಅಧಿಕಾರಿ ವರ್ಗದವರನ್ನ ಹೇಳುವವರೂ ಕೇಳುವವರೂ ಇಲ್ಲದಂತಾಗಿದ್ದಾರೆ.
ಸರ್ಕಾರಿ ಕಛೇರಿಯ ಕೆಲಸದ ಸಮಯ ಬೆಳಿಗ್ಗೆ 10.30 ರಿಂದ ಸಂಜೆ 5.30 ರ ವರೆಗೆ ಇದ್ದರೂ ಕೂಡ ಈ ಅವಧಿಯಲ್ಲಿ ಅಲ್ಲದೇ ಇತರ ಕೆಲಸ ಕಾರ್ಯಗಳಿಗೆ ವಾಹನ ಬಳಕೆಯಾಗುತ್ತಿವೆ.ಚಾಮರಾಜನಗರದಲ್ಲಿ ಮುಂಜಾನೆಯಿಂದಲೇ ಸರ್ಕಾರಿ ವಾಹನಗಳ ಆರ್ಭಟ ಪ್ರಾರಂಭವಾಯಿತೆಂದರೆ ರಾತ್ರಿ 10.30 ರ ವರೆಗೂ ಖಾಸಗೀ ವಾಹನಗಳಂತೆ ಸಂಚರಿಸುತ್ತಲಿರುತ್ತವೆ ಮೈಸೂರಿನಿಂದ ರೈಲಿನಿಂದ ಬರುವ ಅಧಿಕಾರಿಗಳನ್ನು ಕರೆದುಕೊಂಡುಬರಲು ಸರ್ಕಾರಿ ವಾಹನಗಳು ರೈಲ್ವೇ ನಿಲ್ದಾಣದಲ್ಲಿ ಸಾಲುಗಟ್ಟಲೆ ಕಾಯುತ್ತ ನಿಲ್ಲುತ್ತವೆ.ಅಷ್ಟೇ ಅಲ್ಲ ಸಂಜೆಯೂ ಕೂಡ ಜಿಲ್ಲಾಡಳಿತ ಭವನದಿಂದ ಹೊರಡುವ ಅನೇಕ ಸರ್ಕಾರಿ ವಾಹನಗಳು ರೈಲ್ವೇ ನಿಲ್ದಾಣದಕ್ಕೂ, ಸರ್ಕಾರಿ ಬಸ್ ನಿಲ್ದಾಣಕ್ಕೂ ಅಧಿಕಾರಿಗಳನ್ನು ಹೂಡುವ ವಾಹನಗಳಾಗಿ ಉಪಯೋಗಿಸಲ್ಪಡುತ್ತಿವೆ.
ಕೆಲವು ಚಾಲಕರು ಅದಿಕಾರಿಗಳನ್ನ್ಕು ರೈಲ್ವೇ ನಿಲ್ದಾಣದಕ್ಕೂ, ಸರ್ಕಾರಿ ಬಸ್ ನಿಲ್ದಾಣಕ್ಕೂ ಬಿಟ್ಟು ನಂತರ ತಮ್ಮ ಸ್ವ ಬಳಕೆಗೆ ಉಪಯೋಗಿಸಲ್ಪಡುತ್ತಿದ್ದು ಇದರಿಂದ ಇಂದನದ ವೆಚ್ಚದ ಖರ್ಚನ್ನು ಸಂಬಂದಿಸಿದ ಇಲಾಖೆ ಭರಿಸಬೇಕಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ವೆಚ್ಚವ್ಯಯಿಸುತ್ತಿವೆ. ಇದಕ್ಕೆ ಸಂಬಂದ ಪಟ್ಟಂತೆ ಸರ್ಕಾರಿ ವಾಹನ ಚಾಲಕರೋರ್ವರನ್ನು ಮಾತನಾಡಿಸಿದಾಗ ಅಧಿಕಾರಿಗಳು ಹೇಳಿದಂತೆ ನಾವು ಕೇಳಬೇಕಾದ ಪರಿಸ್ಥಿತಿ ಇದೆ ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ನಿಮಗೆ ಗೊತ್ತಿದೆಯಲ್ಲಾ ? ಅಂತಾರೆ
ಜಿಲ್ಲಾ ಮಟ್ಟದ ಎಷ್ಡೋ ಅಧಿಕಾರಿಗಳು ದಿನನಿತ್ಯ ಮೈಸೂರಿನಿಂದ ಚಾಮರಾಜನಗರಕ್ಕೆ,ಚಾಮರಾಜನಗರದಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾರೆ.
ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಅನೇಕ ವಸತಿ ಗೃಹಗಳು ಜಿಲ್ಲಾ ಮಟ್ಟದ ಅದಿಕಾರಿಗಳಿಗಾಗಿಯೆ ಇದ್ದ ಮ್ಯಾಲೆ ಸರ್ಕಾರಿ ವಾಹನಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಾದರೂ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಕೆಲವು ಸಮಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಇರಬೇಕೆಂದು ಸೂಚಿಸಿದ್ದರೂ, ಇಲ್ಲಿ ಇಂತಹ ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ. ಅಷ್ಠೇ ಅಲ್ಲ ಪ್ರಾರಂಭದಲ್ಲಿ ಅಧಿಕಾರ ವಹಿಸಿಕೊಂಡ ಜಿಲ್ಲಾದಿಕಾರಿಗಳು ಇದೇ ಸೂಚನೆ ನೀಡಿದ್ದರೂ,ಇಲ್ಲಿ ಇಂತಹ ಅದೇಶಗಳಿಗೆ ಬೆಲೆಯಿಲ್ಲದಂತಾಗಿದೆ. ಹೆಸರಿಗೆ ಜಿಲ್ಲಾ ಮಟ್ಟದ ಅದಿಕಾರಿಗಳಿಗೆ ನಿಲಯ ನಿಗದಿಯಾಗಿದ್ದರೂ ಅವರಿವರ ಸಂಬಂದಿಕರುಗಳು ಇರೋದು ಕೂಡ ಜಗಜ್ಜಾಹೀರಾಗಿದೆ‌.
ಒಟ್ಟಾರೆ ಸರ್ಕಾರಿ ವಾಹನಗಳು ಖಾಸಗೀ ವಾಹನಗಳಂತೆ ಬಳಕೆಯಾಗುತ್ತಿದ್ದು, ಇದರ ಕಡಿವಾಣಕ್ಕೆ ಹಾಕಬೇಕಾದ ಜಿಲ್ಲಾಡಳಿತ ಕ್ರಮ ವಹಿಸುವುದೇ ಎಂಬುದನ್ನ ನೋಡಬೇಕಾಗಿದೆ. *ಪೊಲೀಸ್ ಇಲಾಖೆಯೂ ಹೊರತಲ್ಲ: ಇಲಾಖಾ ವಾಹನ ಹಾಗೂ ನಿರ್ಭಯಪಡೆಗೆಂದು ಮೀಸಲಾಗಿರೊ ಅದೆಷ್ಟೊ ವಾಹನಗಳು ಶಾಲಾ ಮಕ್ಕಳ ಕರೆತರಲು, ಊರಿಗೆ ಸುತ್ತಾಡಲು ಬಳಕೆಯಾಗುತ್ತಿದೆ. ವಿಪರ್ಯಾಸವೆಂದರೆ ಜಿಲ್ಲಾ ಅದೀಕ್ಷಕರು ಹೆಲ್ಮೆಟ್ ಹಾಕಿ ವಾಹನ ಚಾಲನೆ ಮಾಡಬೇಕೆಂಬ ಆದೇಶವೂ ಕ್ಯಾರೆ ಎನ್ನದಿರುವುದು ವಿಪರ್ಯಾಸವಾಗಿದೆ.

ವಿಶೇಷ: ರಾಮಸಮುದ್ರ ಎಸ್.ವೀರಭದ್ರ ಸ್ವಾಮಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments