Thursday, July 18, 2024
spot_img
HomeChamarajanagarಜಿಲ್ಲೆಯ ವಿವಿದೆಡೆ ವಿವಿದ ಪಕ್ಷದವರಿಂದ ನಾಮಪತ್ರ ಸಲ್ಲಿಕೆವರದಿ:ರಾಮಸಮುದ್ರ

ಜಿಲ್ಲೆಯ ವಿವಿದೆಡೆ ವಿವಿದ ಪಕ್ಷದವರಿಂದ ನಾಮಪತ್ರ ಸಲ್ಲಿಕೆವರದಿ:ರಾಮಸಮುದ್ರ

ಪಾಲಾರ್ ಪತ್ರಿಕೆ | Palar Pathrike

ಎಸ್.ವೀರಭದ್ರಸ್ವಾಮಿ.

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ನಾಮ ಪತ್ರ ಸಲ್ಲಿಸಿದರೆ ಚಾಮರಾಜನಗರ ವಿದಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪುಟ್ಟರಂಗಶೆಟ್ಟಿ ಬಿಎಸ್ಪಿಯಿಂದ ಹ.ರಾ.ಮಹೇಶ್  ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು  ಇಂದು (ಸೋಮವಾರ /ಏ.17) ನಗರದ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.ಇದಕ್ಕೊ ಮೊದಲು ಅಭ್ಯರ್ಥಿಗಳು ಅವರವರ ಮನೆ ದೇವರಿಗೆ ಪೂಜೆ ಸಲ್ಲಿಸಿ ಹರಕೆ ಹೊತ್ತಿದ್ದಾರೆ. ಪುಟ್ಟರಂಗಶೆಟ್ಟಿ ಅವರು ಉಪ್ಪಿನ ಮೋಳೆ ಗ್ರಾಮದ ಮಂಟೇಸ್ವಾಮಿ ದೇವಸ್ಥಾನ ಪೂಜೆ ಸಲ್ಲಿಸಿ ನಂತರ ಚಾಮರಾಜನಗರ ಕೊಳದ ಗಣಪತಿ , ಮಾರಮ್ಮ ಆಂಜನೇಯ , ಚಾಮರಾಜೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿದರು. ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ನಿರಂಜನದ ಕುಮಾರ್ ಪಾರ್ವತಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಮತ್ತೊಮ್ಮೆ ಶಾಸಕರಾಗುವಂತೆ ಆಶೀರ್ವಾದ ಪಡೆದಿದ್ದಾರೆ‌ ಪುಟ್ಟರಂಗಶೆಟ್ಟಿ, ಮಾತನಾಡಿ ‘ಮೂರು ಅವಧಿಯ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರದ ಅನುದಾನ ಬಳಕೆ ಮಾಡಿಕೊಂಡು ಕ್ಷೇತ್ರದ ಜನರಿಗೆ ಮೂಲಸೌಕರ್ಯ ಒದಗಿಸಿದ್ದೇನೆ. 4ನೇ ಬಾರಿ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿದ್ದು, ಕ್ಷೇತ್ರದ ಮತದಾರರು ಮತಹಾಕುವ ಮೂಲಕ ನನ್ನನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದ್ದಾರೆ.ಪೂಜಾ ಸಂದರ್ಭದಲ್ಲಿ ಪುತ್ರ ಚಾಮರಾಜು ಪುಟ್ಟರಂಗಶೆಟ್ಟಿ ಜೊತೆಗಿದ್ದು ಪೂಜೆ ಸಲ್ಲಿಸಿದರು.ನಂತರ ಪಕ್ಷದ ಕಛೇರಿಯಿಂದ ಜೋಡಿ ರಸ್ತೆ ಮೂಲಕ ತಹಶಿಲ್ದಾರ್ ಕಚೇರಿಯಲ್ಲಿ ಚುನಾವಣಾದಿಕಾರಿಗೆ ನಾಮಪತ್ರ ಸಲ್ಲಿಸಿದರು. ಬಿಎಸ್ಪಿ ಅಭ್ಯರ್ಥಿ ಹ.ರಾ. ಮಹೇಶ್ ಕೂಡ ಸಾರನಾಥ  ಬೌದ್ದವಿಹಾರದಿಂದ ಅಪಾರ ಬೆಂಬಲಿಗರೊಂದಿಗೆ ಚುನಾವಣಾದಿಕಾರಿಗೆ ನಾಮಪತ್ರ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments