Monday, March 4, 2024
spot_img
HomeChamarajanagarತೀವ್ರಗೊಂಡ ಅಬಕಾರಿ ಕರ‍್ಯಾಚರಣೆ : ವಿವಿಧೆಡೆ ಮದ್ಯ ವಶ

ತೀವ್ರಗೊಂಡ ಅಬಕಾರಿ ಕರ‍್ಯಾಚರಣೆ : ವಿವಿಧೆಡೆ ಮದ್ಯ ವಶ

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ದ ಅಬಕಾರಿ ಇಲಾಖೆ ಅಧಿಕಾರಿಗಳು ತೀವ್ರ ಕರ‍್ಯಾಚರಣೆ ಮುಂದುವರೆಸಿದ್ದು, ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಕ್ರಮ ಕೈಗೊಂಡಿದ್ದಾರೆ.ಕೊಳ್ಳೇಗಾಲ ತಾಲೂಕು ದೊಡ್ಡಿಂದುವಾಡಿ ಗ್ರಾಮದಲ್ಲಿ ಶುಕ್ರವಾರ (ಏ.14) ದÀಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಗಸ್ತು ವೇಳೆ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಪ್ರಕಾಶ್ ಎಂಬ ವ್ಯಕ್ತಿಯನ್ನು ಬಂಧಿಸಿ 7.200 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಹಾಗೂ ವಾಹನದ ಮೌಲ್ಯ 32810 ರೂ. ಗಳಾಗಿವೆ.

ಹನೂರು ತಾಲೂಕಿನ ಬಸಪ್ಪನದೊಡ್ಡಿ-ಸೂಳೇರಿಪಾಳ್ಯ-ಕೆ.ಗುಂಡಾಪುರ ಗ್ರಾಮಗಳಿಗೆ ತೆರಳುವ ವೃತ್ತದಲ್ಲಿ ಶುಕ್ರವಾರ (ಏ.14) ದÀಂದು ಮಧ್ಯಾಹ್ನ 12.45 ಗಂಟೆ ಸಮಯದಲ್ಲಿ ಗಸ್ತು ಕರ‍್ಯ ಸಂರ‍್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ರಾಜೇಂದ್ರ ಎಂ. ಎಂಬುವವರಿಂದ 8.640 ಲೀ ಮದ್ಯ ವಶಪಡಿಸಿಕೊಂಡು ಆರೋಪಿ ವಿರುದ್ದ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮದ್ಯ ಹಾಗೂ ವಾಹನದ ಮೌಲ್ಯ ಒಟ್ಟಾರೆ 53,372 ರೂ.ಗಳಾಗಿವೆ.

ಹನೂರು ಪಟ್ಟಣದಲ್ಲಿ ಶುಕ್ರವಾರ (ಏ.14) ದಂದು ಮಧ್ಯಾಹ್ನ 12.15 ಗಂಟೆ ಸಮಯದಲ್ಲಿ ಪಟ್ಟಣದ ಕ್ರೈಸ್ಟ್ ಶಾಲೆಯ ಮುಂಭಾಗ ಗಸ್ತು ಕರ‍್ಯದ ವೇಳೆ ಅಕ್ರಮವಾಗಿ 9.000 ಲೀ ಮದ್ಯ ಸಾಗಿಸುತ್ತಿದ್ದ ಮಾರಿಮುತ್ತು ಎಂಬುವರನ್ನು ವಶಕ್ಕೆ ಪಡೆದು ಮದ್ಯ ವಶಪಡಿಸಿಕೊಳ್ಳಲಾಯಿತು. ವಾಹನ ಹಾಗೂ ಮದ್ಯದ ಒಟ್ಟು ಮೌಲ್ಯ 43,513 ರೂ. ಗಳಾಗಿವೆ.

ಚಾಮರಾಜನಗರ ವಲಯ ರಾಷ್ಟೀಯ ಹೆದ್ದಾರಿ 209ರ ಸಂತೇಮರಹಳ್ಳಿ ಮುಖ್ಯ ರಸ್ತೆ ಬೋಗಾಪುರ ಗೇಟ್ ಬಳಿ ಗುರುವಾರ (ಏ.13) ರಂದು ಸಂಜೆ 6 ಗಂಟೆ ಸಮಯದಲ್ಲಿ ರಸ್ತೆಗಾವಲು ನಡೆಸುತ್ತಿದ್ದಾಗ ಶಂಕರ್ ಎಂಬ ವ್ಯಕ್ತಿಯು ತನ್ನ ದ್ವಿ ಚಕ್ರ ವಾಹನದಲ್ಲಿ 7.2 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿ ಮಾಲನ್ನು ಇಲಾಖಾ ವಶಕ್ಕೆ ವಶಪಡಿಸಿಕೊಂಡು ಆರೋಪಿಯ ವಿರುದ್ಧ ಘೋರ ಮೊಕದ್ದಮೆಯನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 22810 ರೂ. ಗಳಾಗಿವೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments