Friday, November 24, 2023
spot_img
HomeChamarajanagarಮಣ್ಣಲ್ಲಿ ಮಣ್ಣಾದ ದ್ರುವ,ಶೋಕಸಾಗರದಲ್ಲಿ ಕಾಂಗ್ರೆಸ್!

ಮಣ್ಣಲ್ಲಿ ಮಣ್ಣಾದ ದ್ರುವ,ಶೋಕಸಾಗರದಲ್ಲಿ ಕಾಂಗ್ರೆಸ್!

ಪಾಲಾರ್ ಪತ್ರಿಕೆ | Palar Pathrike

ಚಾಮರಾಜನಗರ : ಸರಳ ಸಜ್ಜನೀಯ ವ್ಯಕ್ತಿ, ಅಜಾತಶತ್ರು ಎಂದೆ ಬಿಂಬಿತರಾಗಿದ್ದ ಆರ್.ಧ್ರುವನಾರಾಯಣ ಅವರ ಅಂತ್ಯಕ್ರಿಯೆ
ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ನಡೆಯುತು.
ಧ್ರುವನಾರಾಯಣ ಅವರ ತಂದೆ-ತಾಯಿ ಪಕ್ಕವೇ ಧ್ರುವನಾರಾಯಣ ಅವರ ಅಂತ್ಯಕ್ರಿಯೆ ನಡೆಯಿತು.ಹಿಂದೂ ಧರ‍್ಮಿಕ ವಿಧಿ ವಿಧಾನದಂತೆ ಇದೆ ಮೆರವಣಿಗೆ ನಡೆಸಿ ಬಳಿಕ ಮಣ್ಣು ಮಾಡಲಾಯಿತು. ಪತ್ನಿ ವೀಣಾ ಮಕ್ಕಳಾದ ರ‍್ಶನ್, ಧೀರನ್ ಶೋಕ ಸಾಗರದಲ್ಲಿ ಮುಳುಗಿದ್ದರು. ದುಃಖ ಹೊತ್ತ ಸಾವಿರಾರು ಕಣ್ಣುಗಳು ಕಂಬನಿ ಹಾಕುತ್ತ ರಾಜಕೀಯ ಧ್ರುವತಾರೆಯನ್ನು ಭಾರವಾದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು.ಶನಿವಾರ ತಡರಾತ್ರಿ ಚಾಮರಾಜನಗರಕ್ಕೆ ಫರ‍್ಥಿವ ಶರೀರ ತರಲಾಗಿತ್ತು. ಜಿಲ್ಲಾಕೇಂದ್ರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಹುಟ್ಟೂರಿಗೆ ಪರ‍್ಥೀವ ಶರೀರವನ್ನು ತಂದು ಡಾ‌.ಬಿ‌.ಆರ್.ಅಂಬೇಡ್ಕರ್ ಭವನ ಸಮೀಪ ಅಂತಿಮ ರ‍್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನೆಚ್ಚಿನ ಜನನಾಯಕನಿಗೆ ಅಂತಿಮ ನಮನ ಸಲ್ಲಿಸಲು ಹಳ್ಳಿ ಗಳಿಂದ ಜನರು ಆಟೋ, ಜೀಪ್‌, ಟ್ರಕ್‌, ಟ್ಯಾಕ್ಟರ್‌ ಹೀಗೆ ಅನೇಕ ವಾಹನಗಳನ್ನು ಮಾಡಿಕೊಂಡು ತಂಡೊಪತಂಡವಾಗಿ ಬಂದು ಅಂತಿಮ ನಮನ ಸಲ್ಲಿಸಿದರು‌.

ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಮಾಜಿ ಸಂಸದ ಧ್ರುವನಾರಾಯಣ ಅವರಿಗೆ ರ‍್ಕಾರಿ ಗೌರವವನ್ನು ಸಲ್ಲಿಸಲಾಯಿತು. ಚಾಮರಾಜನಗರ ಪೊಲೀಸ್ ಇಲಾಖೆಯು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿತು. ಜಿಲ್ಲಾಡಳಿತ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಶಾಸಕರುಗಳು ಪುಷ್ಪ ಮಾಲೆ ರ‍್ಪಿಸಿ ಅಂತಿಮ ಗೌರವ ಸಲ್ಲಿಸಿದರು.
ಅಂತಿಮ ನಮನ ಕರ‍್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಧ್ರುವನಾರಾಯಣ ಪುತ್ರ ರ‍್ಶನ ಭುಜ ತಟ್ಟಿ ಸಮಾಧಾನ ಪಡಿಸಿದ ಸಿದ್ದರಾಮಯ್ಯ ದರ‍್ಯ ತುಂಬಿದರು. ನಂತರ, ಡಿಕೆ ಶಿವಕುಮಾರ್ ಕಾಂಗ್ರೆಸ್ ಧ್ವಜವನ್ನು ಪರ‍್ಥೀವ ಶರೀರದ ಮೇಲೆ ಹೊದಿಸಿ ಬಿಕ್ಕಿ-ಬಿಕ್ಕಿ ಅತ್ತರು. ಸಲೀಂ ಅಹ್ಮದ್, ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್, ಕೆ.ಎಚ್‌.ಮುನಿಯಪ್ಪ, ಸತೀಶ್ ಜಾರಕಿಹೊಳಿ, ವಿಶ್ವನಾಥ್, ರೋಜಿ ಜಾನ್, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಸಿ‌.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ವರದಿ:ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments