Sunday, February 5, 2023
spot_img
HomeChamarajanagarಮಂಗಲ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬದ ಸಂಭ್ರಮ

ಮಂಗಲ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬದ ಸಂಭ್ರಮ

ಪಾಲಾರ್ ಪಾತ್ರಿಕೆ | Palar pathrike 

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಮಂಗಲ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಸೋಮವಾರ ಕಲಿಕಾ ಹಬ್ಬದ ಸಂಭ್ರಮದಲ್ಲಿ ಮಕ್ಕಳು ಭಾಗವಹಿಸಿದ್ದರು. ಗ್ರಾಮದ ದೇವಸ್ಥಾನದ ಮುಂಭಾಗದಿAದ ವಿದ್ಯಾರ್ಥಿಗಳು ಎತ್ತಿಗಾಡಿಯ ಮೇಲೆ ಕುಳಿತು ಜೈಕಾರ ಹಾಕುತ್ತ ವಿದ್ಯಾರ್ಥಿನಿಯರು ಕಳಸವ ತಲೆಯಮೇಲೆ ಹಿಡಿದು ಶಾಲೆಯವರೆಗೆ ಮೆರವಣಿಗೆಯಲ್ಲಿ ನಡೆದರು.
ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮದ ಮುಖಂಡರದ ಶಿವಕುಮಾರ್ ಮಾತನಾಡಿ ಗ್ರಾಮದಲ್ಲಿ ಹಬ್ಬದ ವಾತಾವರಣ ತುಂಬಿದೆ ಇದ್ದಕೆ ಕಾರಣ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಅದೇಶದಂತೆ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬದ ಸಡಗರದಲ್ಲಿ ಜ್ಞಾನವನ್ನು ತುಂಬುವ ಕೆಲಸ ಶಿಕ್ಷಕರಿಂದ ನಡೆಯುತಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಪ್ರಯೋಜನವಾಗಲಿದೆ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಯಲ್ಲಿ ಕೈಗಳಿಂದ ರೂಪಿಸುವ ಕಾಗದದ ವಸ್ತುಗಳು, ಮಣ್ಣಿನಿಂದ ಮಾಡುವ ಗೊಂಬೆಗಳು ಹಾಗೂ ನಿಮ್ಮ ಪರಿಸರದಲ್ಲಿ ದೊರೆಯುವ ವಸ್ತುಗಳನ್ನು ತಂದು ಅಪರೂಪದ ಪದಾರ್ಥಗಳನ್ನು ತಾಯಾರು ಮಾಡುವುದನ್ನು ಕಲಿಯ ಬಹುದು ಇದರ ಬಗ್ಗೆ ನಿಮ್ಮ ಶಿಕ್ಷಕರು ತಿಳಿಸಿಕೊಡಲಿದ್ದಾರೆ ಎಂದರು.
ಸAತೆಮರಳ್ಳಿ ಪೋಲಿಸ್ ಉಪ ನಿರಿಕ್ಷಕರಾದ ಹನುಮಂತ ಅವರು ಮಾತನಾಡಿ ರಾಜ್ಯ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಅದರಲ್ಲಿ ಕಲಿಕಾ ಹಬ್ಬವು ಒಂದು ಮಕ್ಕಳ ಪ್ರತಿಭೆಗಳನ್ನು ಹೊರ ಪ್ರಪಂಚಕ್ಕೆ ತೋರಿಸುವ ದೃಷ್ಠಿಯಿಂದ ಇಂತಹ ವೇದಿಕೆಗಳು ಅವಶ್ಯಕವಾಗಿದೆ. ಮಕ್ಕಳು ಸಾಂಸ್ಕೃತಿಕವಾಗಿ ಬೆಳೆಯಲು ಜ್ಞಾನ ಬಹಳ ಮುಖ್ಯ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊAದು ಪ್ರತಿಭೆ ಇದೇ. ಶಿಕ್ಷಕರು ಅಂತಹ ಮಕ್ಕಳನ್ನು ಗುರುತಿಸಿ ವೇದಿಕೆಗೆ ತರಬೇಕಾಗಿದೆ ಎಂದ ಹೇಳಿದರು. ಮಂಗಲ ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ಕಾರ್ಯಕ್ರಮವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಲ ಗ್ರಾಪಂ ಅಧ್ಯಕ್ಷೆ ಚಿನ್ನತಾಯಮ್ಮ ಮಾಡಿದರು.
ಮುಖ್ಯ ಶಿಕ್ಷಕ ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ತಾಲ್ಲೂಕು ಹಂತದ ಸಂಪನ್ಮೂಲ ಶಿಕ್ಷಕರಿಗೆ ಮತ್ತು ಕ್ಲಸ್ಟರ್ ಹಂತದ ಸಂಪನ್ಮೂಲ ಶಿಕ್ಷಕರಿಗೆ ನಿಗದಿತ ವೇಳಾಪಟ್ಟಿಯಂತೆ ತರಬೇತಿಯನ್ನು ಈಗಾಗಲೇ ರಾಜ್ಯ ಹಂತದಲ್ಲಿ ತರಬೇತಿ ಪಡೆದ ಸಿ.ಆರ್.ಪಿ. ಗಳಿಂದ ನೀಡಲಾಯಿತು.ಸಮಗ್ರ ಶಿಕ್ಷಣ ಕರ್ನಾಟಕವು ಅತ್ಯಂತ ದೊಡ್ಡ ಕಲಿಕಾ ಹಬ್ಬವನ್ನು ಜನವರಿ – ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಂಡಿದೆ. ಕೋವಿಡ್ ನಂತರ ಶಾಲೆಗಳು ಆರಂಭವಾದಾಗ ಸ್ವಕಲಿಕೆಯ ಮಾದರಿಯ ಕಲಿಕೆಯ ವಿಧಾನಗಳನ್ನು ‘ಕಲಿಕಾ ಚೇತರಿಕೆ’ ಎಂಬ ಹೆಸರಿನಲ್ಲಿ ಆರಂಭಿಸಲಾಗಿತ್ತು. ಕಲಿಕಾ ಚೇತರಿಕೆಯ ಪೂರಕವಾದ ಶೈಕ್ಷಣಿಕ ಹಬ್ಬವೇ ‘ಕಲಿಕಾ ಹಬ್ಬ’ ಈ ಕಾರ್ಯಕ್ರಮಗಳು ಕ್ಲಸ್ಟರ್ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕರ್ಯಕ್ರಮದ ಅಧ್ಯಕ್ಷತೆ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಸ್ವಾಮಿ ವಹಿಸಿದ್ದರು.ಗ್ರಾಪಂ ಸದಸ್ಯರಾದ ಅಣ್ಣಪ್ಪಸ್ವಾಮಿ, ಸುರೇಶ್, ಮಲ್ಲಕಾರ್ಜುನಸ್ವಾಮಿ, ಮುಖ್ಯ ಶಿಕ್ಷಕ ಶಿವಕುಮಾರ್, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರಾಜಮ್ಮ, ಗ್ರಾಪಂ ಸದಸ್ಯರು ಮಂಜುನಾಥಸ್ವಾಮಿ, ಶಿವಣ್ಣ, ಶಿವಸ್ವಾಮಿ, ಮಹದೇವಮ್ಮ ಮದಾಶೆಟ್ಟಿ, ಆರ್.ಎನ್. ಸ್ವಾಮಿ, ಶೀಲಾ, ಸಿ.ಆರ್.ಪಿ. ಅರ್.ಶಿವಮೂರ್ತಿ ದೈಹಿಕ ಶಿಕ್ಷಕ ಜಯರಾಜು, ಮಲ್ಲಶೆಟ್ಟಿ ಗ್ರಾಮದ ಮುಖಂಡರು. ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments