Monday, March 4, 2024
spot_img
HomeChikballapurBagepalliಜೆಡಿಎಸ್ ಯುವ ಬ್ರಿಗೇಡ್ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ

ಜೆಡಿಎಸ್ ಯುವ ಬ್ರಿಗೇಡ್ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ

ಪಾಲಾರ್ ಪತ್ರಿಕೆ | Palar Pathrike

ಬಾಗೇಪಲ್ಲಿ  : ನಿಖಿಲ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಯುವ ಬ್ರಿಗೇಡ್ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಯುವ ಬ್ರಿಗೇಡ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್. ರಾಜಾರೆಡ್ಡಿ ತಿಳಿಸಿದರು.ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರ ಜನ್ಮದಿನದ ಪ್ರಯುಕ್ತ ಪಟ್ಟಣದ ನ್ಯಾಷನಲ್ ಕಾಲೇಜು ಸಮೀಪದಲ್ಲಿರುವ ಹೊಸ ಜೀವನ ನಿಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೇಕ್ ಕತ್ತರಿಸಿ, ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲೆಡೆಯೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ಧಿಕ್ಕರಿಸಿ ಈ ಬಾರಿ ಕುಮಾರಣ್ಣ ನಾಯಕತ್ವಕ್ಕೆ ಬೆಂಬಲಿಸುವ ಮಾತುಗಳು ಕೇಳಿಬರುತ್ತಿದೆ.ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ.ಎರಡು ರಾಷ್ಟ್ರೀಯ ಪಕ್ಷಗಳು ಹೆಚ್ಚಾಗಿ ಆಡಳಿತ ನಡೆಸಿವೆ. ಆದರೆ ಕುಮಾರಣ್ಣ‌ 34 ತಿಂಗಳಲ್ಲಿ ನೀಡಿದ ಕಾರ್ಯಕ್ರಮದ ಬಗ್ಗೆ ರಾಜ್ಯದ ಜನರು ಇವತ್ತು ಚರ್ಚೆ ಮಾಡುತ್ತಾರೆ. ಪಂಚರತ್ನ ಕಾರ್ಯಕ್ರಮ ಎಲ್ಲರಿಗೂ ಅನುಕೂಲವಾಗುವ ಕಾರ್ಯಕ್ರಮ. ಜನಪ್ರತಿನಿಧಿಗಳ ಮನಸ್ಥಿತಿ ಬದಲಾಗಬೇಕಿದ್ದು, ಜೊತೆಗೆ ಮತದಾರರ ಮನಸ್ಥಿತಿ ಬದಲಾಗಬೇಕು. ಜಾತಿಯ ವ್ಯಾಮೋಹ ತೊಲಗಬೇಕಿದೆ, ಕಷ್ಟಸುಖಕ್ಕೆ ಸ್ಪಂದಿಸುವವರ ಜೊತೆ ಯುವಕರು ಹೆಜ್ಜೆ ಹಾಕಬೇಕು. ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣದಿಂದ ನಿಖಿಲ್‌, ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ನಿಖಿಲ್ ಕುಮಾರಸ್ವಾಮಿಯವರು ತುಂಬಾ ಸರಳ ವ್ಯಕ್ತಿತ್ವದವರು. ಆದ್ದರಿಂದಲೇ ಚರ್ಚಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕೇಕ್ ಕತ್ತರಿಸಿ, ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ಸಂದರ್ಭದಲ್ಲಿ ಹೊಸ ಜೀವನ ನಿಲಯ ಚರ್ಚಿನ ಫಾದರ್  ಹೆಚ್.ಹೆಚ್. ಪ್ರಕಾಶ್, ಸೀನಪ್ಪ, ಮಂಜುನಾಥ, ಸಿಗಲಪಲ್ಲಿ ಅಂಜಿನ್ ರೆಡ್ಡಿ, ಬುಜ್ಜಮ್ಮ, ಶಾಂತಿ, ವೆಂಕಟೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments