Thursday, March 28, 2024
spot_img
HomeBangalore Ruralಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸಭೆಯಲ್ಲಿ ಚರ್ಚೆ

ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸಭೆಯಲ್ಲಿ ಚರ್ಚೆ


ಪಾಲಾರ್ ಪತ್ರಿಕೆ | Palar Pathrike

ದೇವನಹಳ್ಳಿ: 2022-23ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆ ಹಾಗೂ ವಿಕಲಚೇತನರ ಗ್ರಾಮ ಸಭೆ ಬೆಂ.ಗ್ರಾ.ಜಿಲ್ಲೆಯ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ಆವರಣದಲ್ಲಿ 2022-23ನೇ ಸಾಲಿನ ಗ್ರಾಮ ಸಭೆ ಮತ್ತು ವಿಕಲಚೇತನರ ವಿಶೇಷ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಪ್ರಶ್ನೋತ್ತರಗಳ ಚರ್ಚೆ ನಡೆಯಿತು.
ಗ್ರಾಮಸಭೆಯಲ್ಲಿ ಅರದೇಶನಹಳ್ಳಿ ಮತ್ತು ಜಾಲಿಗೆ ಗ್ರಾಮಗಳ ಗ್ರಾಮಸ್ಥರು ಅಕ್ರಮ ಮದ್ಯಮಾರಾಟಕ್ಕೆ ಯಾವ ಕ್ರಮ ಕೈಗೊಂಡಿದ್ದೀರ ಎಂದು ಪ್ರಶ್ನಿಸಿದರು. ಗ್ರಾಪಂ ಉಪಾಧ್ಯಕ್ಷ ಬಾಲಸುಬ್ರಮಣ್ಯ ಮಾತನಾಡಿ, ಅಬಕಾರಿ ಇಲಾಖೆಯ ಅಧಿಕಾರಿ ತಿಮ್ಮರಾಜು ಅವರಿಗೆ ನೀವು ಯಾವಾಗ ಇಲ್ಲಿಗೆ ಬಂದಿದ್ದೀರ, ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೀರ ಗ್ರಾಪಂ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಅಕ್ರಮ ಮಧ್ಯಮಾರಟವನ್ನು ಕಿರಾಣಿ ಮಳಿಗೆಗಳಲ್ಲಿ ಮಾರುತ್ತಿರುವುದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರ ಮತ್ತು ಅಪರಾಧವೆಸಗಿದವರ ಮೇಲೆ ಏನೆಲ್ಲಾ ಶಿಕ್ಷೆ ಇದೆ ಎಂಬುವುದರ ಬಗ್ಗೆ ಗ್ರಾಮಸಭೆಯಲ್ಲಿ ಮಾಹಿತಿ ನೀಡಿ ಎಂದು ಆಗ್ರಹಿಸಿದರು.
ಗ್ರಾಮಸಭೆಯಲ್ಲಿ ಕೆಲವು ಗ್ರಾಮಗಳಲ್ಲಿ ಇಂದಿಗೂ ಸ್ಮಶಾನದ ಸರಿಯಾದ ಜಾಗವಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬAಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಎಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ಅರದೇಶನಹಳ್ಳಿ ಗ್ರಾಮಸ್ಥ ಕುಮಾರ್ ಹಾಗೂ ಜಾಲಿಗೆ ಗ್ರಾಮದ ಮುಖಂಡ ವೆಂಕಟೇಶ್ ಪ್ರಶ್ನಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯಿತಿ ವ್ಯಾಪ್ತಿಯ ಹೆಗ್ಗನಹಳ್ಳಿ ಗ್ರಾಮದಲ್ಲಿನ ಸರಕಾರಿ ಜಾಗವು ಅನಂತ ಪ್ರತಿಷ್ಠಾನಕ್ಕೆ ಜಾಗ ಗುರ್ತಿಸಿರುವುದನ್ನು ಕೂಡಲೇ ರದ್ಧುಗೊಳಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲವೆAದು ಗ್ರಾಮಸಭೆಯಲ್ಲಿ ಚರ್ಚಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪ್ತಿವಿಜಯ್‌ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ರೇಷ್ಮೆ ಇಲಾಖೆಯ ಅಧಿಕಾರಿ ನಾಗೇಂದ್ರಬಾಬು ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿನ ವಿವಿಧ ಯೋಜನೆಗಳ ಮಾಹಿತಿಯನ್ನು ಹಂಚಿಕೊAಡರು. ಇದೇ ಸಂದರ್ಭದಲ್ಲಿ ಗ್ರಾಮ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಸಿದ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದ ವಿವಿಧ ಗ್ರಾಮಗಳ ತಂಡಗಳಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ನರೇಗ ಯೋಜನೆಯಡಿಯಲ್ಲಿ ಹಾಗೂ ದಾನಿಗಳ ಸಹಕಾರದೊಂದಿಗೆ ಪರಿಸರ ವಾತಾವರಣದಲ್ಲಿ ಮಾಡಲಾಗುತ್ತದೆ. ಸ್ಮಶಾನದ ಜಾಗದಲ್ಲಿ ಪೈಪ್‌ಲೈನ್‌ಮೂಲಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಶವಸಂಸ್ಕಾರ ಮಾಡಿದ ನಂತರ ಶುಚಿಗೊಳಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಪಿಡಿಒ ಪ್ರಕಾಶ್ ಅವರು ಗ್ರಾಮಸಭೆಯಲ್ಲಿ ಭರವಸೆ ನೀಡಿದರು. ನಂತರ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಗ್ರಾಮಸ್ಥರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಬ್ಯಾಂಕ್ ಖಾತೆಗಳಲ್ಲಿ ಆಧಾರ್‌ಕಾರ್ಡ್ ಫೋನ್ ಲಿಂಕ್ ಕಡ್ಡಾಯವಾಗಿರಬೇಕು. ಆಗ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖಾಧಿಕಾರಿ ಸತೀಶ್ ತಿಳಿಸಿದರು.
ಈ ವೇಳೆಯಲ್ಲಿ ಜಾಲಿಗೆ ಗ್ರಾಪಂ ಮುಖಂಡರಾದ ಸೊಣ್ಣಪ್ಪ, ಕಾಮೇನಹಳ್ಳಿ ರಮೇಶ್, ಗ್ರಾಪಂ ಉಪಾಧ್ಯಕ್ಷ ಬಾಲಸುಬ್ರಮಣ್ಯ, ಸದಸ್ಯರಾದ ಪದ್ಮಾವತಿ, ಮಹೇಶ್, ಆನಂದ್‌ಕುಮಾರ್, ಆನಂದ್.ಸಿ.ಎA., ಗೋಪಾಲಕೃಷ್ಣ, ಭವ್ಯ, ಅಪ್ಪಯ್ಯ, ಸುಚಿತ್ರ, ಮುನಿಯಪ್ಪ, ಮುನಿರತ್ನಮ್ಮ, ಜಯಮ್ಮ, ಸುಬ್ರಮಣಿ, ಶೋಭಾ, ಶಿವಲಿಂಗಮ್ಮ, ಜಯಮ್ಮ, ಅಶ್ವಿನಿ, ಪಿಡಿಒ ಪ್ರಕಾಶ್.ಎಚ್, ಕಾರ್ಯದರ್ಶಿ ನರಸಿಂಹಮೂರ್ತಿ, ಉಪ ತಹಶೀಲ್ದಾರ್ ಚೈತ್ರಾ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ, ಕೃಷಿ ಇಲಾಖೆ ಸತ್ಯನಾರಾಯಣ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖಾಧಿಕಾರಿ ಇತರರು ಇದ್ದರು.
ಚಿತ್ರ: 14 ಡಿಹೆಚ್‌ಎಲ್ ಪಿ1
ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments