Thursday, September 28, 2023
spot_img
HomeBangalore Ruralಶೈಕ್ಷಣಿಕವಾಗಿ ಸಮಾಜ ಮುಂದುವರೆಯಬೇಕು : ಸುಬ್ಬಣ್ಣ

ಶೈಕ್ಷಣಿಕವಾಗಿ ಸಮಾಜ ಮುಂದುವರೆಯಬೇಕು : ಸುಬ್ಬಣ್ಣ

ದೇವನಹಳ್ಳಿ: ವಹ್ನಿಕುಲ ಕ್ಷತ್ರಿಯ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂಬರಬೇಕಾದರೆ, ಪ್ರತಿ ಮನೆಯಲ್ಲೂ ಎಲ್ಲಾ ರಂಗದಲ್ಲೂ ಒಂದೊAದು ಪ್ರತಿಭೆ ಹುಟ್ಟುಹಾಕಬೇಕು ಎಂದು ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಹೆಚ್.ಸುಬ್ಬಣ್ಣ ತಿಳಿಸಿದರು. ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿ ದೇವಾಲಯ ಸೇವಾ ಅಭಿವೃದ್ಧಿ ಸಮಿತಿ ಹಾಗೂ ಶ್ರೀ ವಹ್ನಿಕುಲ ಕ್ಷತ್ರಿಯ ತಿಗಳ ವೀರಕುಮಾರರ ಸೇವಾ ಸಂಘ ಸಹಕಾರದಲ್ಲಿ ನೂತನ ದೇವಾಲಯ ಅಭಿವೃದ್ಧಿ ಸಂತಸದ ವಿಷಯವಾಗಿದೆ. ಸುಮಾರು 13 ಪಂಗಡಗಳು ಸೇರಿ ವಹ್ನಿಕುಲ ಕ್ಷತ್ರಿಯ ರಾಜ್ಯದಲ್ಲಿಯೇ 40ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಇದ್ದು, ಕಾರ್ಯಕ್ರಮಗಳನ್ನು ರೂಪಿಸಬೇಕು. ಯಶಸ್ವಿಯಾಗಬೇಕಾದರೆ ಒಗ್ಗಟ್ಟು ಪ್ರಮುಖ ಪಾತ್ರವಹಿಸುತ್ತದೆ. ದೇವನಹಳ್ಳಿ ಬೈಚಾಪುರ ಮತ್ತು ಹೊಸಕೋಟೆಯಲ್ಲಿ ಕರಗ ಹೊರುವವರು ಇಲ್ಲಿ ಮಾತ್ರ ಹೊರಬೇಕು ಮತ್ತು ಇತರೆ ಕಡೆಗಳಲ್ಲಿ ಕರಗ ಹೊರೆಯಬಾರದೆಂಬುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು. ಶ್ರೀ ದ್ರೌಪತಿ ಆದಿ ಪರಾಶಕ್ತಿ ಮಹಾ ಆಶ್ರಮ ಶ್ರೀ ಶ್ರೀ ಬಾಲ ಯೋಗಿ ಸಾಯಿ ಮಂಜುನಾಥ್ ಮಹರಾಜ್ ಶ್ರೀಗಳು ಮಾತನಾಡಿ, ವಹ್ನಿಕುಲ ಕ್ಷತ್ರಿಯ ಜನಾಂಗದವರು ಒಗ್ಗಟ್ಟಿನ ಪ್ರದರ್ಶನ ಮಾಡುವಂತಾಗಬೇಕು. ಇಂತಹ ದೇವಾಲಯಗಳನ್ನು ಹೆಚ್ಚು ಹೆಚ್ಚು ಜೀರ್ಣೋದ್ಧಾರವಾಗುವ ಕೆಲಸವಾಗಬೇಕು. ದೇವಿ ದ್ರೌಪತಮ್ಮನ ಆಶೀರ್ವಾದ ಪ್ರತಿಯೊಬ್ಬ ಕ್ಷತ್ರಿಯ ಕುಲದ ಸಮಾಜದವರ ಮೇಲೆ ಇದೆ. ಸಮಾಜದಲ್ಲಿನ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ಮಾಡುವಂತೆ ಆಗಬೇಕು ಎಂದರು. ಇದೇ ಸಂದರ್ಭದಲ್ಲಿ ಶ್ರೀ ದ್ರೌಪತಿ ಆದಿ ಪರಾಶಕ್ತಿ ಮಠದ ಶಿವನಾಪುರ ಶ್ರೀಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಮುಖಂಡರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ ತಿಗಳ ಸಂಘದ ಅಧ್ಯಕ್ಷ ಸಿ.ಜಯರಾಜ್, ಶ್ರೀ ಆದಿಶಕ್ತಿ ಮಹಾಸಂಸ್ಥಾನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಲಕ್ಷö್ಮಣ್, ಕರವೇ ರಾಜ್ಯಾಧ್ಯಕ್ಷ ಚಂದ್ರಶೇಖರ್, ದೇವನಹಳ್ಳಿ ತಾಲೂಕು ತಿಗಳ ವಹ್ನಿಕುಲ ಸಂಘದ ಅಧ್ಯಕ್ಷ ಗೋಪಾಲಕೃÀಷ್ಣ, ದೇವನಹಳ್ಳಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಚಂದ್ರಪ್ಪ, ಮೌಕ್ತಿಕಾಂಭ ದೇವಾಲಯದ ಅಧ್ಯಕ್ಷ ಶಿವನಾಪುರ ವಿಜಯಕುಮಾರ್, ಮೌಕ್ತಿಕಾಂಭ ದೇವಾಲಯದ ಗಣಾಚಾರಿ ಗೋಪಾಲಪ್ಪ, ತಿಗಳ ಸಮಾಜದ ಯುವ ನಾಯಕ ರಾಜೇಂದ್ರ, ತಿಗಳ ವೈಭವ ಪತ್ರಿಕೆ ಸಂಪಾದಕ ಮುನಿವೀರಣ್ಣ, ಸಮಾಜದ ಮುಖಂಡರು, ಭಕ್ತಾಧಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments